ಕೇರಳದ ಮೊದಲ ಜೆನ್‌ಝಿ ಪೋಸ್ಟ್ ಆಫೀಸ್ ಆರಂಭ, ಟ್ರೆಂಡಿ ಕಚೇರಿಗೆ ಮನಸೋತ ಯುವ ಸಮೂಹ

Published : Dec 13, 2025, 03:06 PM IST

ಕೇರಳದ ಮೊದಲ ಜೆನ್‌ಝಿ ಪೋಸ್ಟ್ ಆಫೀಸ್ ಆರಂಭ, ಟ್ರೆಂಡಿ ಕಚೇರಿಗೆ ಮನಸೋತ ಯುವ ಸಮೂಹ , ಕ್ಯೂಆರ್ ಕೋಡ್ ಫೀಚರ್, ಲೈಬ್ರರಿ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗಿದೆ. ಈ ಪೋಸ್ಟ್ ಆಫೀಸ್ ವಿಶೇಷತೆ ಇಲ್ಲಿದೆ.

PREV
16
ಜೆನ್‌ಝೀ ಆಕರ್ಷಿಸಲು ಹೊಸ ಪ್ಲಾನ್

ಈಗಿನ ಜೆನ್‌ಝಿ ಸಮೂಹ ಏನಿದ್ದರೂ ಆನ್‌ಲೈನ್ ಕೆಲಸ ಕಾರ್ಯ ಮುಗಿಸಿ ಬಿಡುತ್ತದೆ. ಶಾಪಿಂಗ್ ಅದರೂ ಸರಿ ಬ್ಯಾಂಕಿಂಗ್ ಆದರೂ ಸರಿ. ಬಹುತೇಕ ಜೆನ್‌ಝಿ ಯುಪಿಐ ಮೂಲಕವೇ ಎಲ್ಲಾ ಬ್ಯಾಂಕಿಂಗ್ ವ್ಯವಹಾರ ಮುಗಿಸುತ್ತಾರೆ.ಬ್ಯಾಂಕ್ ಶಾಖೆಗೆ ತೆರಳಿ ವ್ಯಹಾರ ಮಾಡುವುದು ಗೊತ್ತೇ ಇರುವುದಿಲ್ಲ. ಇದೀಗ ಜೆನ್‌ಝಿ ಸಮೂಹವನ್ನು ಆಕರ್ಷಿಸಲು ಪೋಸ್ಟ್ ಆಫೀಸ್ ಜೆನ್‌ಝೀ ಅಂಚೆ ಕಚೇರಿ ತರೆದಿದೆ.

26
ಕೇರಳದ ಮೊದಲ ಜೆನ್‌ಝಿ ಪೋಸ್ಟ್ ಆಫೀಸ್

ಕೇರಳದ ಕೊಟಾಯಂನಲ್ಲಿ ಪೋಸ್ಟ್ ಆಫೀಸ್ ಹೊಸ ಶಾಖೆ ತೆರೆದಿದೆ. ಇದು ಜೆನ್‌ಝೀ ಸಮೂಹಕ್ಕಾಗಿ ತೆರೆದಿರುವ ಪೋಸ್ಟ್ ಆಫೀಸ್. ಇಲ್ಲಿ ಬಹುತೇಕ ಕಾರ್ಯಗಳು ಡಿಜಿಟಲಿ ಮಾಡಲಾಗುತ್ತದೆ. ಇದಕ್ಕಾಗಿ ಕ್ಯೂಆರ್ ಕೋಡ್ ವ್ಯವಸ್ಥೆಗಳು ಸೇರಿದಂತೆ ಹಲವು ಡಿಜಿಟಲೈಸ್ ಮಾಡಲಾಗಿದೆ.

36
ಜೆನ್‌ಝಿ ಪೋಸ್ಟ್ ಅಫೀಸ್ ವಿಶೇಷತೆ

ಕೊಟಾಯಂ ಸಿಎಂಸ್ ಕಾಲೇಜಿನಲ್ಲಿ ಕೊಟಾಯಂ ಮುಖ್ಯ ಬ್ರಾಂಚ್‌ನ ಇದೀಗ ಜೆನ್‌ಝಿ ಪೋಸ್ಟ್ ಅಫೀಸ್ ತೆರೆದಿದೆ. ಹಲವು ಸೌಲಭ್ಯಗಳು ಈ ಪೋಸ್ಟ್ ಆಫೀಸ್ ಕಚೇರಿಯಲ್ಲಿದೆ. ಜೆನ್‌ಝಿ ಸಮೂೂಹಕ್ಕೆ ಬೇಕಾದ ಲ್ಯಾಪ್‌ಟಾಪ್, ಮೊಬೈಲ್ ಚಾರ್ಜಿಂಗ್ ವ್ಯವಸ್ಥೆಗಳು ಇಲ್ಲಿವೆ. ಇನ್ನು ಕೆಲ ಕುಳಿತು ಲ್ಯಾಪ್‌ಟಾಪ್‌ನಲ್ಲಿ ಕೆಲಸವಿದ್ದರೂ ಮಾಡಲು ಕೌಂಟರ್ ನೀಡಲಾಗಿದೆ.

46
ಲೈಬ್ರರಿ ಫೆಸಿಲಿಟಿ

ಕಾಲೇಜು ಆವರಣದಲ್ಲಿರುವ ಈ ಜೆನ್‌ಝಿ ಪೋಸ್ಟ್ ಆಫೀಸ್‌ನಲ್ಲಿ ಓದಲು ಪುಸ್ತಕಗಳನ್ನು ಇಡಲಾಗಿದೆ. ಇಷ್ಟೇ ಅಲ್ಲ ಓದುವ ಹವ್ಯಾಸ ಹೆಚ್ಚಿಸಲು ಉತ್ತಮ ವಾತಾವರಣ ಕಲ್ಪಿಸಲಾಗಿದೆ. ಓದಲು ಚಿಕ್ಕ ಹಾಗೂ ಚೊಕ್ಕವಾದ ಸ್ಥಳ ನೀಡಲಾಗಿದೆ. ವಿದ್ಯಾರ್ಥಿಗಳು ಅಥವಾ ಜೆನ್‌ಝಿ ಸಮೂಹ ಈ ಪೋಸ್ಟ್‌ಆಫೀಸ್‌ನಲ್ಲಿ ಹೆಚ್ಚು ಸಮಯ ಕಳೆಯಲು ಎಲ್ಲಾ ವ್ಯವಸ್ಥೆ ಮಾಡಲಾಗಿದೆ.

56
ಕಾಲೇಜು ಸಹಯೋಗದಲ್ಲಿ ಜೆನ್‌ಝಿ ಪೋಸ್ಟ್ ಅಫೀಸ್

ಸಿಎಂಎಸ್ ಕಾಲೇಜು ಸಹಯೋಗದಲ್ಲಿ ಭಾರತೀಯ ಅಂಚೆ ಇಲಾಖೆ ಈ ಜೆನ್‌ಜಿ ಪೋಸ್ಟ್ ಆಫೀಸ್ ತೆರೆದಿದೆ. ಈ ಫೋಸ್ಟ್ ಆಫೀಸ್‌ನಲ್ಲಿ ಇತರ ಸಾಮಾನ್ಯ ಪೋಸ್ಟ್ ಆಫೀಸ್‌ಗಳು ಹೇಗೆ ಕಾರ್ಯನಿರ್ವಹಿಸುತ್ತದೆ, ಚೆಕ್ ವಿಥ್‌ಡ್ರಾ, ಡೆಪಾಸಿಟ್ ಸೇರಿದಂತೆ ಶಾಖೆಯಲ್ಲಿ ಗ್ರಾಹಕ ಯಾವ ರೀತಿ ತನ್ನ ಅಗತ್ಯತೆಗಳನ್ನು ಪೂರೈಸುವ ಕುರಿತು ಮಾಹಿತಿ ಇಡಲಾಗಿದೆ.

ಕಾಲೇಜು ಸಹಯೋಗದಲ್ಲಿ ಜೆನ್‌ಝಿ ಪೋಸ್ಟ್ ಅಫೀಸ್

66
ದೆಹಲಿ, ಆಂಧ್ರ ಬಳಿಕ ಇದೀಗ ಕೇರಳ

ಜೆನ್‌ಝಿ ಪೋಸ್ಟ್ ಆಫೀಸ್ ಕೇರಳದಲ್ಲೇ ಮೊದಲಲ್ಲ. ಇದಕ್ಕೂ ಮೊದಲು ದೆಹಲಿಯ ಐಐಟಿ ಕಾಲೇಜು, ಆಂಧ್ರ ಪ್ರದೇಶ ವಿಶ್ವವಿದ್ಯಾಲಯ ಕ್ಯಾಂಪಸ್ ಒಳಗಡೆ ಜೆನ್‌ಝಿ ಪೋಸ್ಟ್ ಆಫೀಸ್ ಕಾರ್ಯನಿರ್ವಹಿಸುತ್ತಿದೆ. ಈ ಪೋಸ್ಟ್ ಆಫೀಸ್‌ಗೆ ಸಿಕ್ಕ ಭರ್ಜರಿ ಪ್ರತಿಕ್ರಿಯೆ ಬಳಿಕ ಕೇರಳದಲ್ಲಿ ತೆರೆಯಲಾಗಿದೆ.

ದೆಹಲಿ, ಆಂಧ್ರ ಬಳಿಕ ಇದೀಗ ಕೇರಳ

Read more Photos on
click me!

Recommended Stories