ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಕೋಲ್ಕತ್ತಾದ ಐತಿಹಾಸಿಕ ನಖೋಡಾ ಮಸೀದಿಯ ಇಮಾಮ್, ಈದ್ ಸಂದರ್ಭದಲ್ಲಿ ಗೋಹತ್ಯೆಯನ್ನು ತಪ್ಪಿಸುವಂತೆ ಮುಸ್ಲಿಂ ಸಮುದಾಯಕ್ಕೆ ಮನವಿ ಮಾಡಿದ್ದಾರೆ. ಹೊಸ ಸರ್ಕಾರದ ಕಠಿಣ ಪ್ರಾಣಿ ವಧೆ ಮಾರ್ಗಸೂಚಿಗಳನ್ನು ಉಲ್ಲೇಖಿಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ದೀದೀ ಸರ್ಕಾರದ ಪತನ ಆಗಿ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಹಲವಾರು ಬದಲಾವಣೆಗಳನ್ನು ರಾಜ್ಯ ಕಾಣುತ್ತಿದೆ. ಇದಾಗಲೇ ಅನಧಿಕೃತ, ಅಕ್ರಮ ಸ್ಥಳಗಳ ಮೇಲೆ ಬುಲ್ಡೋಜರ್ ಪ್ರಹಾರ ಮಾಡಿದೆ. ಇದಾಗಲೇ ಕೇಂದ್ರದ ಹಲವು ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಯೋಜನೆಗಳಿಂದ ವಂಚಿತರಾಗಿದ್ದ ಜನರಿಗೆ ಅದರ ಪ್ರಯೋಜನ ನೀಡಲಾಗುತ್ತಿದೆ. ಗೋಹತ್ಯೆ ಮಾಡದಂತೆಯೂ ಆದೇಶಿಸಲಾಗಿದೆ. ಮಹಾತ್ಮಾ ಗಾಂಧೀಜಿಯವರು ಹಲವಾರು ಬಾರಿ ಗೋಹತ್ಯೆ ನಿಷೇಧಕ್ಕೆ ಆದೇಶಿಸಿದ್ದು, ಅದರ ಪಾಲನೆ ಅಗತ್ಯವಾಗಿದೆ ಎನ್ನುವುದು ಇವರ ಅಭಿಮತ.
26
ಕುತೂಹಲದ ಬೆಳವಣಿಗೆ
ಇದರ ನಡುವೆಯೇ ಇದೀಗ ಕುತೂಹಲದ ಬೆಳವಣಿಗೆಯೊಂದರಲ್ಲಿ ಕೋಲ್ಕತಾದಲ್ಲಿ ಇಮಾಮ್ ಗೋಬಲಿ ಮಾಡದಂತೆ ಸಾರ್ವಜನಿಕರಲ್ಲಿ ವಿಶೇಷ ಮನವಿ ಮಾಡಿದ್ದಾರೆ. ಸದ್ಯ ಈದ್ ನಡೆಯುತ್ತಿದೆ. ಈ ಸಂದರ್ಭದಲ್ಲಿ ಕುರಿ,ಮೇಕೆಗಳ ಜೊತೆ ಹಸುಗಳನ್ನೂ ತಿನ್ನುವುದು ಮಾಮೂಲು. ಗೋಹತ್ಯೆ ನಿಷೇಧದ ಬಗ್ಗೆ ಕಾನೂನು ಇದ್ದರೂ ಅದು ಪಾಲನೆಯಾಗುತ್ತಿಲ್ಲ. ಹಿಂದೂಗಳು ದೇವರೆಂದು ಪೂಜಿಸುವ ಗೋಮಾತೆ ಮುಸ್ಲಿಂ ಸಮುದಾಯಕ್ಕೆ ತಿನ್ನುವ ವಸ್ತು. ಆದ್ದರಿಂದ ಗೋಹತ್ಯೆ ನಡೆಯುತ್ತಲೇ ಇದೆ.
36
ಗೋಬಲಿ ತಪ್ಪಿಸಿ
ಆದರೆ, ಇದೀಗ ಕೋಲ್ಕತ್ತಾದ ಐತಿಹಾಸಿಕ ನಖೋಡಾ ಮಸೀದಿಯ ಇಮಾಮ್ ಮೌಲಾನಾ ಮೊಹಮ್ಮದ್ ಶಫೀಕ್ ಖಾಸ್ಮಿ ಈ ಒಂದು ಮನವಿಯನ್ನು ಮಾಡಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ಈ ಈದ್‌ನಲ್ಲಿ ಗೋ ಬಲಿಯನ್ನು ತಪ್ಪಿಸುವಂತೆ ಮುಸ್ಲಿಮರಿಗೆ ನೇರವಾಗಿ ಮನವಿ ಮಾಡಲಾಗಿದೆ ಎಂದಿದ್ದಾರೆ. ಹಸುಗಳಿಗೆ ಪರ್ಯಾಯವಾಗಿ ಮೇಕೆಗಳನ್ನು ಬಲಿ ನೀಡಬಹುದು. ವೈವಿಧ್ಯಮಯ ಸಮಾಜದಲ್ಲಿ ಮುಸ್ಲಿಮರು ಇತರರಿಗೆ ನೋವುಂಟು ಮಾಡುವುದನ್ನು ತಪ್ಪಿಸಬೇಕು ಎಂದು ಅವರು ಹೇಳಿದ್ದಾರೆ.
ದಯವಿಟ್ಟು ಗೋ ಬಲಿಗಳನ್ನು ಮಾಡಬೇಡಿ. ಮತ್ತೆ ಎಂದಿಗೂ ಗೋಮಾಂಸವನ್ನು ಸೇವಿಸಬೇಡಿ ಎಂದು ಅವರು ಹೇಳಿದ್ದಾರೆ. ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರ ಇತ್ತೀಚೆಗೆ ಹೊಸ ಪ್ರಾಣಿ ವಧೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಪ್ರಾಣಿಗಳನ್ನು ವಧೆ ಮಾಡುವ ಮೊದಲು ಈಗ "ಫಿಟ್ ಪ್ರಮಾಣಪತ್ರ" ಪಡೆಯಬೇಕು. 14 ವರ್ಷಕ್ಕಿಂತ ಮೇಲ್ಪಟ್ಟ ಪ್ರಾಣಿಗಳು ಅಥವಾ ಶಾಶ್ವತವಾಗಿ ಅಂಗವಿಕಲರಾದ ಪ್ರಾಣಿಗಳು ಮಾತ್ರ ಅರ್ಹತೆ ಪಡೆಯುತ್ತವೆ. ಖಾಸ್ಮಿ ಪ್ರಕಾರ, ಈ ಅಧಿಸೂಚನೆಯು ಪ್ರಾಣಿ ವಧೆಯನ್ನು ಬಹಳ ಕಷ್ಟಕರವಾಗಿಸಿದೆ.
56
ಬದಲಾವಣೆ ಗಾಳಿ
ಅಷ್ಟಕ್ಕೂ ಪಶ್ಚಿಮ ಬಂಗಾಳ ಪ್ರಾಣಿ ವಧೆ ನಿಯಂತ್ರಣ ಕಾಯ್ದೆ 1950 ರಿಂದ ಜಾರಿಯಲ್ಲಿದೆ. ಆದರೆ ಮುಸ್ಲಿಂ ಸಮುದಾಯ ಅದರಲ್ಲಿಯೂ ನುಸುಳುಕೋರರು ಅತ್ಯಧಿಕ ಸಂಖ್ಯೆಯಲ್ಲಿದ್ದ ಇಲ್ಲಿ ಈ ಕಾನೂನು ಜಾರಿಯಾಗುತ್ತಿರಲಿಲ್ಲ. ಆದರೆ ಇದೀಗ ಬದಲಾವಣೆ ಬೀಸಿದೆ.
66
ಬಿಜೆಪಿ ಸರ್ಕಾರಕ್ಕೆ ಅವರ ಮನವಿ
ಬಂಗಾಳ ಸರ್ಕಾರವು ಮೊದಲು ಪ್ರತಿಯೊಂದು ಪ್ರದೇಶದಲ್ಲೂ ಕಸಾಯಿಖಾನೆಗಳನ್ನು ನಿರ್ಮಿಸಬೇಕೆಂದು ಖಾಸ್ಮಿ ಒತ್ತಾಯಿಸಿದರು. ಪ್ರತಿಯೊಂದು ಮಾರುಕಟ್ಟೆಯಲ್ಲೂ ಪಶುವೈದ್ಯಕೀಯ ಶಸ್ತ್ರಚಿಕಿತ್ಸಕರು ಲಭ್ಯವಿರಬೇಕು. ಸರ್ಕಾರವು ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸಲು ಸಾಧ್ಯವಾಗದಿದ್ದರೆ, ಅದು ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಬೇಕು ಮತ್ತು ಅದರ ವಧೆ ಮತ್ತು ಗೋಮಾಂಸ ರಫ್ತಿನ ಮೇಲೆ ಸಂಪೂರ್ಣ ನಿಷೇಧ ಹೇರಬೇಕು ಎಂದಿದ್ದಾರೆ. ಪ್ರತ್ಯೇಕ ಸಂದರ್ಶನವೊಂದರಲ್ಲಿ, ಹಿಂದೂ ದೇವಾಲಯಗಳಲ್ಲಿ ನಡೆಸುವ ಎಲ್ಲಾ ರೀತಿಯ ಪ್ರಾಣಿ ಬಲಿಯನ್ನು ನಿಷೇಧಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ