ವಿಮಾನ ಪ್ರಯಾಣಿಕರಿಗೆ ಹೊಸ ಸುರಕ್ಷತಾ ಮಾರ್ಗಸೂಚಿ ಪ್ರಕಟ, ಇನ್ಮೇಲೆ ಈ ವಸ್ತುಗಳನ್ನು ಒಯ್ಯುವಂತಿಲ್ಲ

Published : Jan 04, 2026, 03:51 PM IST

ವಿಮಾನ ಪ್ರಯಾಣಿಕರಿಗೆ ಹೊಸ ಸುರಕ್ಷತಾ ಮಾರ್ಗಸೂಚಿ ಪ್ರಕಟ, ಇದುವರೆಗೆ ಇದ್ದ ನಿರ್ಬಂಧಕ್ಕಿಂತ ಹೊಸ ಮಾರ್ಗಸೂಚಿಯಲ್ಲಿ ಕಠಿಣ ನಿಯಮ ಜಾರಿಗೊಳಿಸಲಾಗಿದೆ. ಹೀಗಾಗಿ ಇನ್ಮುಂದೆ ಪ್ರಯಾಣಿಕರು ವಿಮಾನ ಪ್ರಯಾಣದ ವೇಳೆ ಕೆಲ ವಸ್ತುಗಳನ್ನು ಕೊಂಡೊಯ್ಯುವಂತಿಲ್ಲ.

PREV
16
ಹೊಸ ಸುರಕ್ಷತಾ ನೀತಿ ಪ್ರಕಟ

ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಎವಿಯೇಶನ್ (DGCA) ಇದೀಗ ಹೊಸ ಮಾರ್ಗಸೂಚಿ ಪ್ರಕಟಿಸಿದೆ. ವಿಮಾನ ಪ್ರಯಾಣದ ಸುರಕ್ಷತೆ ಹೆಚ್ಚಿಸಲು, ಪ್ರಯಾಣಕರ ಸುರಕ್ಷತೆಗಾಗಿ ಕೆಲ ತಿದ್ದುಪಡಿಗಳನ್ನು ಮಾಡಿ ಹೊಸ ಸುರಕ್ಷತಾ ನೀತಿ ಪ್ರಕಟಿಸಿದ್ದಾರೆ. ಹೊಸ ನಿಯಮದ ಪ್ರಕಾರ ಕೆಲ ವಸ್ತುಗಳು ವಿಮಾನ ಪ್ರಯಾಣದ ವೇಳೆ ನಿರ್ಬಂಧಿಸಲಾಗಿದೆ.

26
ಪವರ್ ಬ್ಯಾಂಕ್‌ಗೆ ನಿರ್ಬಂಧ

ಇಷ್ಟು ದಿನ ವಿಮಾನ ಪ್ರಯಾಣದಲ್ಲಿ ಮೊಬೈಲ್ ಚಾರ್ಜಿಂಗ್ ಮಾಡಲು ಪವರ್ ಬ್ಯಾಂಕ್ ಕೊಂಡೊಯ್ಯಲು ಅವಕಾಶವಿತ್ತು. ಆದರೆ ಹೊಸ ನೀತಿ ಪ್ರಕಾರ ಪವರ್ ಬ್ಯಾಂಕ್ ಕೊಂಡೊಯ್ಯಲು ಅವಕಾಶವಿಲ್ಲ. ವಿಮಾನ ಪ್ರಯಾಣದ ವೇಳೆ ಪವರ್ ಬ್ಯಾಂಕ್ ಇರಲೇಬಾರದು. ಪವರ್ ಬ್ಯಾಂಕ್‌ನಿಂದ ಅಪಾಯದ ಸಾಧ್ಯತೆ ಇರುವ ಕಾರಣ ಸುರಕ್ಷತಾ ನೀತಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಾಗಿದೆ.

36
ಪವರ್ ಬ್ಯಾಂಕ್‌ನಿಂದ ಸಮಸ್ಯೆ ಏನು

ವಿಮಾನ ಪ್ರಯಾಣದ ವೇಳೆ ಪ್ರಯಾಣಿಕರ ಮೊಬೈಲ್ ಚಾರ್ಜ್ ಮಾಡಿಕೊಳ್ಳಲು ಬಳಕೆ ಮಾಡುವ ಪವರ್ ಬ್ಯಾಂಕ್‌ ಸ್ಫೋಟಗೊಂಡ, ಹೊತ್ತಿ ಉರಿದ ಘಟನೆಗಳು ನಡೆದಿದೆ. ಹೀಗಾಗಿ ಪವರ್ ಬ್ಯಾಂಕ್ ವಿಮಾನ ಪ್ರಯಾಣದ ಸುರಕ್ಷತೆಗೆ ಸವಾಲಾಗಿದೆ. 2025ರ ಸೆಪ್ಟೆಂಬರ್ ತಿಂಗಳಲ್ಲಿ ಈಕುರಿತು ಡಿಜಿಸಿಎ ನಿರ್ಧಾರ ಕೈಗೊಂಡಿತ್ತು. ಇದೀಗ ಹೊಸ ಮಾರ್ಗಸೂಚಿಯಲ್ಲಿ ಪ್ರಕಟಗೊಂಡಿದೆ.

46
ಪ್ರಯಾಣಿಕರ ತಪಾಸಣೆ ಮತ್ತಷ್ಟು ಬಿಗಿ

ಪ್ರಯಾಣಿಕರ ತಪಾಸಣೆ ಮತ್ತಷ್ಟು ಬಿಗಿಗೊಳ್ಳುತ್ತಿದೆ. ಇದು ಸುರಕ್ಷತಾ ನೀತಿಯ ಭಾಗವಾಗಿದೆ. ಹೀಗಾಗಿ ಪ್ರಯಾಣಿಕರು ಸಹಕರಿಸಬೇಕು ಎಂದು ಡಿಜಿಸಿಎ ಸೂಚಿಸಿದೆ. ಇದೇ ವೇಳೆ ಭದ್ರತಾ ಪಡೆಗಳಿಗೂ ಹೊಸ ವಿಧಾನಗಳ ಸುರಕ್ಷತಾ ತಪಾಸಣೆ ಕುರಿತು ತರಬೇತಿಗೆ ಸೂಚನೆ ನೀಡಲಾಗಿದೆ.

56
ಎಲ್ಲಾ ವಿಮಾನ ನಿಲ್ದಾಣದಲ್ಲಿ ಹೊಸ ಮಾರ್ಗಸೂಚಿ ಪ್ರಕಟ

ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರ ಸುರಕ್ಷತಾ ಮಾರ್ಗಸೂಚಿ ಪ್ರಕಟಿಸಲು ಡಿಜಿಸಿಎ ಸೂಚಿಸಿದೆ. ಇದೇ ವೇಳೆ ಪ್ರಯಾಣಿಕರಿಗೆ ಈ ಕುರಿತು ಜಾಗೃತಿ ಮೂಡಿಸಲು ಸೂಚಿಸಲಾಗಿದೆ. ವಿಮಾನ ಪ್ರಯಾಣದ ವೇಳೆ ಕೈಗೊಳ್ಳಬೇಕಾದ ಸುರಕ್ಷತಾ ನಿಯಮಗಳ ಕುರಿತು ತಿಳಿ ಹೇಳಲು ಸೂಚಿಸಲಾಗಿದೆ.

66
ಸುರಕ್ಷತೆಯಲ್ಲಿ ರಾಜಿ ಇಲ್ಲ

ಡಿಜಿಸಿಎ ಸುರಕ್ಷತಾ ಮಾರ್ಗಸೂಚಿ ಕುರಿತು ಸ್ಪಷ್ಟ ನೀತಿ ಪ್ರಕಟಿಸಿದೆ. ಪ್ರತಿಯೊಬ್ಬ ವಿಮಾನ ಪ್ರಯಾಣಿಕ ಈ ನೀತಿ ಅನುಸರಿಸಬೇಕು ಎಂದಿದೆ. ಇದೇ ವೇಳೆ ವಿಮಾನ ಸಿಬ್ಬಂದಿಗಳು, ಪೈಲೆಟ್, ಕೋ ಪೈಲೆಟ್ ಸರಿದಂತೆ ಇತರರಿಗೆ ಸುರಕ್ಷತಾ ನೀತಿಗಳ ಕುರಿತು ತರಬೇತಿ ನೀಡಲು ಸೂಚಿಸಲಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories