ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭ ದಿನಾಂಕ, ಮಾರ್ಗ ವಿವರ ಘೋಷಿಸಿದ ಸಚಿವ

Published : Jan 01, 2026, 03:49 PM IST

ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭ ದಿನಾಂಕ, ಮಾರ್ಗ ವಿವರ ಘೋಷಿಸಿದ ಸಚಿವ ಅಶ್ವಿನಿ ವೈಷ್ಣವ್. ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಯಾವ ಮಾರ್ಗದಲ್ಲಿ ಸ್ಲೀಪರ್ ವಂದೇ ಭಾರತ್ ಸೇವೆ ನೀಡಲಿದೆ? 

PREV
17
ವಂದೇ ಭಾರತ್ ಸ್ಲೀಪರ್ ರೈಲು

ಭಾರತೀಯ ರೈಲ್ವೇ ಸೇವೆಗಳ ಗುಣಮಟ್ಟ ಹೆಚ್ಚಿಸಲಾಗಿದೆ. ಇದೇ ವೇಳೆ ಹೊಸ ರೈಲು ಸೇವೆಗಳನ್ನು ಪ್ರಯಾಣಿಕರಿಗೆ ನೀಡಲಾಗಿದೆ. ಈ ಪೈಕಿ ಯಶಸ್ವಿ ವಂದೇ ಭಾರತ್ ಎಕ್ಸ್‌ಪ್ರೆಸ್ ಕೂಡ ಒಂದು. ವಂದೇ ಭಾರತ್ ಯಶಸ್ಸಿನ ಬೆನ್ನಲ್ಲೇ ಇದೀಗ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಗೊಳ್ಳುತ್ತಿದೆ. ಇದೀಗ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಉದ್ಘಾಟನೆ ದಿನಾಂಕ, ರೈಲು ಸೇವೆ ಮಾರ್ಗಗಳ ವಿವರ ಬಹಿರಂಗವಾಗಿದೆ.

27
ಉದ್ಘಾಟನೆ ಯಾವಾಗಾ?

ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಕುರಿತು ಮಾಹಿತಿ ನೀಡಿದ್ದಾರೆ. ಮುಂದಿನ 15 ರಿಂದ 20 ದಿನದಲ್ಲಿ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಗೊಳ್ಳಲಿದೆ ಎಂದಿದ್ದಾರೆ. ಅಂದರೆ ಜನವರಿ ಅಂತ್ಯದೊಳಗೆ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಗೊಳ್ಳುತ್ತಿದೆ ಎಂಬುದು ಖಚಿತವಾಗಿದೆ.

37
ಮೊದಲ ಸ್ಲೀಪರ್ ಮಾರ್ಗ ಯಾವುದು?

ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಸಂಚರಿಸಲಿರುವ ಮಾರ್ಗದ ಕುರಿತು ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ. ಗೌವ್ಹಾಟಿ ಹಾಗೂ ಕೋಲ್ಕತಾ ನಡುವೆ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಸಂಚರಿಸಲಿದೆ ಎಂದಿದ್ದಾರೆ. ಸ್ಲೀಪರ್ ರೈಲು ದೂರ ಪ್ರಯಾಣಕ್ಕೆ ಆರಾಮಾಗಿ ಪ್ರಯಾಣ ಮಾಡುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.

47
ಬೆಲೆ ಎಷ್ಟು?

ವಂದೇ ಭಾರತ್ ಸ್ಲೀಪರ್ ರೈಲಿನ ಬೆಲೆ ದುಬಾರಿಯಲ್ಲ. ಗೌವ್ಹಾಟಿ ಹಾಗೂ ಕೋಲ್ಕತಾ (ಹೌರ) ನಡುವಿನ ವಂದೇ ಭಾರತ್ ಸ್ಲೀಪರ್ ರೈಲಿನ ಟಿಕೆಟ್ ಬೆಲೆಯೂ ಬಹಿರಂಗವಾಗಿದೆ. 3AC ಟಿಕೆಟ್ ಬೆಲೆ 2,300 ರೂಪಾಯಿ, ಇನ್ನು 2AC ಟಿಕೆಟ್ ಬೆಲೆ ಸರಿಸುಮಾರು 3000 ರೂಪಾಯಿ, ಇನ್ನು ಫಸ್ಟ್ ಎಸಿ ಬೆಲೆ 3,600 ರೂಪಾಯಿ.

57
ಇದೇ ನಗರಗಳ ಸಂಪರ್ಕಿಸುವ ವಿಮಾನ ದರ ಎಷ್ಟು?

ಗೌವ್ಹಾಟಿ ಹಾಗೂ ಕೋಲ್ಕಾತಾ ನಡುವಿನ ವಂದೇ ಭಾರತ್ ಸ್ಲೀಪರ್ ರೈಲಿನ ಗರಿಷ್ಠ ಬೆಲೆ 3,600 ರೂಪಾಯಿ. ಇದೇ ಮಾರ್ಗದಲ್ಲಿ ಸಂಚರಿಸುವ ವಿಮಾನದ ಬೆಲೆ 6,000 ರೂಪಾಯಿಯಿಂದ 10,000 ರೂಪಾಯಿ. ಬೆಲೆಯೂ ಅಗ್ಗವಾಗಿದೆ, ಜೊತೆಗೆ ಅರಾಮದಾಯಕ ಪ್ರಯಾಣ ನಿಮ್ಮದಾಗಲಿದೆ ಎಂದು ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

67
12 ವಂದೇ ಭಾರತ್ ಸ್ಲೀಪರ್ ರೈಲು

ತಿಂಗಳ ಅಂತ್ಯದೊಳಗೆ ಮೊದಲ ವಂದೇ ಭಾರತ್ ಸ್ಲೀಪರ್ ರೈಲು ಉದ್ಘಾಟನೆಗೊಳ್ಳಲಿದೆ. ಇನ್ನು ಮತ್ತೊಂದು ಗುಡ್ ನ್ಯೂಸ್ ಏನಂದರೆ, ಇದೇ ವರ್ಷದ ಅಂತ್ಯದೊಳಗೆ 12 ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಿಸಲಿದೆ. ವಿವಿಧ ಮಾರ್ಗದಲ್ಲಿ ಈ ಸ್ಲೀಪರ್ ರೈಲು ಸೇವೆ ನೀಡಲಿದೆ.

77
180 ಕಿ.ಮಿ ವೇಗ

ವಂದೇ ಭಾರತ್ ಸ್ಲೀಪರ್ ರೈಲಿನ ವೇಗ 180 ಕಿಲೋಮೀಟರ್. ಇತ್ತೀಚೆಗಷ್ಟೇ ಸಚಿವ ಅಶ್ವಿನಿ ವೈಷ್ಣವ್, ವಂದೇ ಭಾರತ್ ರೈಲಿನ ವೇಗ ಪರೀಕ್ಷೆ ಹಾಗೂ ಆರಾಮದಾಯಕ ಪ್ರಯಾಣ ಕುರಿತು ವಿಡಿಯೋ ಬಹಿರಂಗಪಡಿಸಿದ್ದರು. ದೂರ ಮಾರ್ಗಗಳಲ್ಲಿ ಸ್ಲೀಪರ್ ರೈಲು ಹೆಚ್ಚು ಉಪಯುಕ್ತ ಎಂದಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories