ತೌಕ್ಟೆ ಚಂಡಮಾರುತದಿಂದ ಹಾನಿಯಾಗಿರುವ ಗುಜರಾತ್‌ನಲ್ಲಿ ಮೋದಿ ವೈಮಾನಿಕ ಸಮೀಕ್ಷೆ!

First Published | May 19, 2021, 3:03 PM IST

ತೌಕ್ಟೆ ಚಂಡ ಮಾರುತ ಅಬ್ಬರಕ್ಕೆ ಸಿಲುಕಿ ಭಾರತದ ಕರಾವಳಿ ರಾಜ್ಯಗಳು ತತ್ತರಿಸಿದೆ. ಆರಂಭದಲ್ಲಿ ಕೇರಳ, ಕರ್ನಾಟಕ, ತಮಿಳುನಾಡಿನಲ್ಲಿ  ಬಿರುಗಾಳಿ ಎಬ್ಬಿಸಿದ ಚಂಡ ಮಾರುತ ಬಳಿಕ ಮುಂಬೈ, ಗುಜರಾತ್‌ನಲ್ಲಿ ತೀವ್ರ ಹಾನಿ ಮಾಡಿದೆ. ಗುಜರಾತ್‌ ಹಾಗೂ ಕೇಂದ್ರಾಡಳಿತ ದಿಯೂನ  ಹಾನಿಗೊಳಗಾದ ಪ್ರದೇಶದಲ್ಲಿ ಪ್ರಧಾನಿ ಮೋದಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ತೌಕ್ಟೆ ಚಂಡ ಮಾರುತ ಅಬ್ಬರಕ್ಕೆ ಸಿಲುಕಿ ಅತೀ ಹೆಚ್ಚು ನಷ್ಟ ಅನುಭವಿಸಿದ ರಾಜ್ಯ ಗುಜರಾತ್. ಹಲವು ಜೀವಗಳು ಚಂಡಮಾರುಕ್ಕೆ ಬಲಿಯಾಗಿದೆ. ಅಪಾರ ಹಾನಿ ಸಂಭವಿಸಿದೆ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ತೀವ್ರ ಹಾನಿಗೊಳಗಾದ ಗುಜರಾತ್‌ನ ಪ್ರದೇಶದಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.
undefined
ದೆಹಲಿಯಿಂದ ಭವನಗರ್‌ಗೆ ಬಂದಿಳಿದ ಪ್ರಧಾನಿ ಮೋದಿ, ಉನಾ, ದಿಯೋ, ಜಫರಾಬಾದ್, ಮಹುವಾ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿ ಪರಿಸ್ಥಿತಿಯನ್ನು ಕೂಲಂಕುಷವಾಗಿ ಅವಲೋಕಿಸಿದ್ದಾರೆ. ಡಿಯು ಜೊತೆಗೆ ಗುಜರಾತ್‌ನ ಗಿರ್-ಸೋಮನಾಥ್, ಭಾವನಗರ ಮತ್ತು ಅಮ್ರೆಲಿ ಜಿಲ್ಲೆಯಲ್ಲಿ ಸೈಕ್ಲೋನ್ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ನಡೆಸಿದರು.
undefined

Latest Videos


ಪ್ರಧಾನಿ ಮೋದಿ ವೈಮಾನಿಕ ಸಮೀಕ್ಷೆಯಲ್ಲಿ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾಣಿ ಉಪಸ್ಥಿತರಿದ್ದು, ಪ್ರಧಾನಿಗೆ ಹಾನಿಗೊಳದಾಗ ಪ್ರದೇಶಗಳ ಮಾಹಿತಿ ನೀಡಿದರು. ಇತ್ತ NDF ಅಧಿಕಾರಿಗಳು ಇಂಚಿಂಚು ಮಾಹಿತಿಯನ್ನು ಪ್ರಧಾನಿಗೆ ಒದಗಿಸಿದರು.
undefined
ಚಂಡಮಾರುತ ಸೋಮವಾರ ರಾತ್ರಿ ಗಿರ್-ಸೋಮನಾಥ್ ಜಿಲ್ಲೆಯ ಡಿಯು ಮತ್ತು ಉನಾ ಟೌನ್‌ಗೆ ಅಪ್ಪಳಿಸಿ ಅಪಾರ ನಷ್ಟ ಉಂಟಾಗಿತ್ತು. ಈ ನಡುವೆ ಭೂಕುಸಿತ ಸಂಭವಿಸಿದೆ. ಸಮೀಕ್ಷೆಯ ಬಳಿಕ ಮೋದಿ ಅಹಮದಾಬಾದ್‌ನಲ್ಲಿ ತೌಕ್ಟೆ ಚಂಡಮಾರುತ ಸ್ಥಿತಿಗತಿ ಸಭೆ ನಡೆಸಲಿದ್ದಾರೆ.
undefined
ಗುಜರಾತ್‌ನಲ್ಲಿ ಚಂಡಮಾರುತದ ಅಬ್ಬರಕ್ಕೆ 13 ಮಂದಿ ಸಾವನ್ನಪ್ಪಿದ್ದಾರೆ. ಮನೆಗಳು ನೆಲಕ್ಕರುಳಿದೆ. ಬದುಕು ಬೀದಿ ಬಿದ್ದಿದೆ. ಮರ ಗಿಡ ,ವಿದ್ಯುತ್ ಕಂಬಗಳು ಧರೆಗುರುಳಿದಿದೆ. ಗುಜರಾತ್‌ 46 ತಾಲ್ಲೂಕುಗಳು 100 ಮಿ.ಮೀ ಮಳೆ ಸುರಿಯುವುದರೊಂದಿಗೆ ಅಪಾರ ಹಾನಿ ಸಂಭವಿಸಿದೆ.
undefined
ಚಂಡಮಾರುತದಿಂದಾಗಿ ಗುಜರಾತ್‌ನ 16,000 ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿವೆ, 40,000 ಕ್ಕೂ ಹೆಚ್ಚು ಮರಗಳು ಮತ್ತು 70,000 ಕ್ಕೂ ಹೆಚ್ಚು ವಿದ್ಯುತ್ ಕಂಬಗಳನ್ನು ಉರುಳಿಬಿದ್ದಿದೆ. 5,951 ಗ್ರಾಮಗಳ ವಿದ್ಯುತ್ ಕಡಿತಗೊಂಡಿದೆ ಎಂದು ಮುಖ್ಯಮಂತ್ರಿ ವಿಜಯ್ ರೂಪಾನಿ ಹೇಳಿದ್ದಾರೆ.
undefined
ತೌಕ್ಟೆ ಚಂಡಮಾರುತದಿಂದ ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಒಟ್ಟು 33 ಮಂದಿ ಸಾವನ್ನಪ್ಪಿದ್ದರೆ, 90ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಕಳೆದ ಎರಡೂವರೆ ದಶಕಗಳಲ್ಲಿ ಗುಜರಾತ್ ಎದುರಿಸಿದ ಅತ್ಯಂತ ಘೋರ ಪ್ರಾಕೃತಿ ವಿಕೋಪ ಇದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ
undefined
ಗುಜರಾತ್‌ನಲ್ಲಿ ಅಬ್ಬರಿಸಿದ ತೌಕ್ಟೆ ಚಂಡಮಾರುತದ ಪ್ರಭಾವ ಇದೀಗ ಕುಗ್ಗಿದೆ. ದಕ್ಷಿಣ ರಾಜಸ್ಥಾನ ಹಾಗೂ ಗುಜರಾತ್‌ ಕೆಲ ತೀರ ಪ್ರದೇಶದ ಮೇಲೆ ಕೇಂದ್ರೀಕೃತವಾಗಿರುವ ಚಂಡಮಾರುತ, ಕ್ಷೀಣಿಸುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ
undefined
click me!