ಹೆಣ್ಮಗು ಜನನ ಭಾರೀ ಸಂಭ್ರಮ: ರೆಡ್‌ ಕಾರ್ಪೆಟ್‌ ಸ್ವಾಗತ, ಸಿಹಿತಿಂಡಿಯ ತುಲಾಭಾರ!

Published : May 17, 2021, 05:28 PM IST

ಈಗಲೂ ಹೆಣ್ಣು ಹಾಗೂ ಗಂಡು ಮಗು ಎಂದರೆ ಬೇದ ಭಾವ ಮಾಡುವವರು ನಮ್ಮ ಸಮಾಜದಲ್ಲಿ ಅನೇಕ ಮಂದಿ ಇದ್ದಾರೆ. ಇಂತಹವರು ಹೆಣ್ಮಗು ಜನಿಸಿದರೆ ಶಾಪ ಎನ್ನುತ್ತಾರೆ. ಅನೇಕ ಕಡೆ ಹೆಣ್ಮಗುವನ್ನು ಹುಟ್ಟುವ ಮೊದಲೇ ಕೊಲ್ಲಲಾಗುತ್ತದೆ. ಆದರೆ ಮಧ್ಯಪ್ರದೇಶದ ಭಿಂಡ್‌ ಎಂಬಲ್ಲಿ ಮನಮುಟ್ಟುವ ದೃಶ್ಯವೊಂದು ವೈರಲ್ ಆಗಿದ್ದು, ನೋಡುಗರನ್ನು ಹೆಮ್ಮೆ ಪಡುವಂತೆ ಮಾಡಿದೆ. ಇಲ್ಲಿನ ಕುಟುಂಬವೊಂದು ಹೆಣ್ಮಗು ಜನಿಸಿದಾಗ ಅದ್ಯಾವ ರೀತಿ ಸಂಭ್ರಮಿಸಿದೆ ಎಂದರೆ, ನೋಡುವವರು ನೋಡುತ್ತಲೇ ಬಾಕಿಯಾಗಿದ್ದಾರೆ. ಹೆಣ್ಮಗುವಿನ ಗೃಹ ಪ್ರವೇಶಕ್ಕೆ ಇಡೀ ಮನೆಯನ್ನು, ದೀಪಾವಳಿಗೆ ಅಲಂಕರಿಸಿದಂತೆ ದೀಪಗಳಿಂದ ಸಿಂಗರಿಸಿದ್ದಾರೆ.

PREV
15
ಹೆಣ್ಮಗು ಜನನ ಭಾರೀ ಸಂಭ್ರಮ: ರೆಡ್‌ ಕಾರ್ಪೆಟ್‌ ಸ್ವಾಗತ, ಸಿಹಿತಿಂಡಿಯ ತುಲಾಭಾರ!

ಈ ಅಪರೂಪದ ಸಂಭ್ರಮ ಕಂಡು ಬಂದಿದ್ದು, ಭಿಂಡ್‌ನ ಗಿಜುರ್ರಾ ಎಂಬ ಹಳ್ಳಿಯಲ್ಲಿ. ಇಲ್ಲಿ ಗಿರೀಶ್ ಶರ್ಮಾರವರ ಮನೆಯಲ್ಲಿ ಮೂರು ದಿನಗಳ ಹಿಂದೆ ಅವಳಿ ಮಕ್ಕಳು ಜನಿಸಿದ್ದರು. ಇದರಲ್ಲಿ ಒಂದು ಹೆಣ್ಣು ಹಾಗೂ ಮತ್ತೊಂದು ಹೆಣ್ಣು. ಕುಟುಂಬಸ್ಥರಿಗೆ ಮನೆಗೆ ಹೆಣ್ಮಗು ಬಂದಿದೆ ಎಂಬ ವಿಚಾರ ತಿಳಿಯುತ್ತಿದ್ದಂತೆಯೇ ಖುಷಿ ಡಬಲ್ ಆಗಿದೆ.

25

ಹೆಣ್ಮಗುವನ್ನು ಮನೆಗೆ ಕರೆತರಲು ಕಾರೊಂದನ್ನು ಹೂವುಗಳಿಂದ ಅಲಂಕರಿಸಿದ್ದಾರೆ. ಅಲ್ಲದೇ ಹೊರ ಭಾಗದಲ್ಲಿ ರೆಡ್‌ ಕಾರ್ಪೆಟ್‌ ಕೂಡಾ ಹರಡಿ, ಅದರ ಮೇಲೂ ಹೂವುಗಳನ್ನು ಹರಡಿದ್ದಾರೆ. ಬಾಗಿಲಿನಿಂದ ಪ್ರವೇಶ ದ್ವಾರದವರೆಗೆ ಬಲೂನ್‌ಗಳನ್ನೂ ಗೊಡೆಗೆ ಹಾಕಿದ್ದಾರೆ. ಜೊತೆಗೆ ಬ್ಯಾಂಡ್‌ ಸೆಟ್‌ ಕೂಡಾ ಬಂದಿದೆ. ಜೊತೆಗೊಂದಿಷ್ಟು ಸಿಹಿ ತಿಂಡಿ.

35

ಆಸ್ಪತ್ರೆಯಿಂದ ಮನೆಯವರೆಗೆ ಹೂವಿನಿಂದ ಸಿಂಗರಿಸಿದ ಕಾರಿನಲ್ಲಿ ಮಗುವನ್ನು ಕರೆ ತಂದಿದ್ದಾರೆ. ಲಕ್ಷ್ಮಿದೇವಿಯಂತೆ ಮಗಗುವಿನ ಗೃಹಪ್ರವೇಶವೂ ನಡೆದಿದೆ. ಕುಟುಂಬದ ಎಲ್ಲರೂ ಈ ಮಗುವಿನ ಮೇಲೆ ಹೂವಿನ ಮಳೆಗೈದಿದ್ದಾರೆ. ಇನ್ನು ಕೆಲವರು ಡಾನ್ಸ್ ಮಾಡಿ ಮಗುವನ್ನು ಸ್ವಾಗತಿಸಿದ್ದಾರೆ. 
 
45

ಇನ್ನು ಮನೆ ಪ್ರವೇಶ ದ್ವಾರದ ಬಳಿ ಮಗುವಿನ ಹೆಜ್ಜೆ ಗುರುತು ಹಾಕಿಸಿ, ಬಳಿಕ ಹೂವು ಹಾಗೂ ಸಿಹಿ ತಿಂಡಿಯಿಂದ ತುಲಾಭಾರ ಮಾಡಿಸಿದ್ದಾರೆ. ಈ ಸಂಭ್ರಮ, ಸಡಗರ ಮದುವೆ ಮನೆಗಿಂತ ಭಿನ್ನವಾಗಿರಲಿಲ್ಲ. ಮಕ್ಕಳಿಂದ ವೃದ್ಧರವರೆಗೆ ಎಲ್ಲರ ಮುಖದಲ್ಲೂ ಹೆಣ್ಮಗುವಿನ ಆಗಮನದ ಬಗ್ಗೆ ಖುಷಿ ತುಂಬಿ ತುಳುಕುತ್ತಿತ್ತು.
 
55

ಇನ್ನು ಈ ಬಗ್ಗೆ ಮಾತನಾಡಿದ ಕುಟುಂಬ ಸದಸ್ಯ ಗಿರೀಶ್ ಶರ್ಮಾ ತಾವು ಈ ದಿನಕ್ಕಾಗಿ ಹಲವಾರು ವರ್ಷದಿಂದ ಕಾಯುತ್ತಿದ್ದೆವು. ಹಲವಾರು ವರ್ಷಗಳ ಬಳಿಕ ನಮ್ಮ ಮನೆಯಲ್ಲಿ ಹೆಣ್ಮಗು ಜನಿಸಿದೆ. ನಾವೆಲ್ಲರೂ ಹೆಣ್ಮಗುವಿನ ನಗು ಆಲಿಸಲು ಕಾಯುತ್ತಿದ್ದೆವು. ಯಾವಾಗೆಲ್ಲಾ ಹೆಣ್ಮಗುವನ್ನು ನಿರೀಕ್ಷಿಸುತ್ತಿದ್ದೆವೋ, ಆಗೆಲ್ಲಾ ಗಂಡು ಮಗು ಜನಿಸುತ್ತಿತ್ತು. ಆದರೀಗ ಭಗವಂತ ನಮ್ಮ ಮೊರೆ ಆಲಿಸಿದ್ದಾನೆ ಎಂದಿದ್ದಾರೆ. 

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories