ರಷ್ಯಾದ ಅಧ್ಯಕ್ಷ ಪುಟಿನ್ ದೆಹಲಿಯಲ್ಲಿ ತಂಗಲಿರುವ ರೂಂ ಬೆಲೆ ಎಷ್ಟಿದೆ? ಇಡೀ ಹೊಟೆಲ್ ಬುಕ್ ಮಾಡಲಾಗಿದೆ. ಅತೀ ದುಬಾರಿ ಐಟಿಸಿ ಮೌರ್ಯ ಹೊಟೆಲ್‌ನ ಎಲ್ಲಾ ರೂಂಗಳನ್ನು ಬುಕಿಂಗ್ ಮಾಡಲಾಗಿದೆ. ಪುಟಿನ್ ಉಳಿದುಕೊಳ್ಳುವ ಹೊಟೆಲ್, ರೂಂ ವಿವರ ಇಲ್ಲಿದೆ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ವಿಶ್ವದ ಪ್ರಬಲ ನಾಯಕರಲ್ಲಿ ಒಬ್ಬರು. ವ್ಲಾದಿಮಿರ್ ಪುಟಿನ್ ಎರಡು ದಿನಗಳ ಭಾರತ ಭೇಟಿಯಲ್ಲಿ ಎಲ್ಲಿ ಉಳಿದುಕೊಳ್ಳುತ್ತಾರೆ, ಈ ಕೊಠಡಿಯ ಬೆಲೆ ಎಷ್ಟು? ಇಲ್ಲಿನ ಭದ್ರತೆ ಸೇರಿದಂತೆ ಹಲವು ವಿಚಾರಗಳು ಚರ್ಚೆಯಾಗುತ್ತಿದೆ. ಎರಡು ದಿನ ಪ್ರವಾದಲ್ಲಿ ಪುಟಿನ್ ದೆಹಲಿಯ ಐಟಿಸಿ ಮೌರ್ಯ ಹೊಟೆಲ್‌ನಲ್ಲಿ ಉಳಿದುಕೊಳ್ಳುತ್ತಾರೆ.
25
ಮೌರ್ಯ ಹೊಟೆಲ್‌ನ ಎಲ್ಲಾ ಕೊಠಡಿ ಬುಕ್
ರಷ್ಯಾದ ಅಧ್ಯಕ್ಷ ಪುಟಿನ್ ಉಳಿದುಕೊಳ್ಳುವ ಕಾರಣ ಐಟಿಸಿ ಮೌರ್ಯ ಹೊಟೆಲ್‌ನ ಎಲ್ಲಾ ಕೊಠಡಿಗಳನ್ನು ಬುಕ್ ಮಾಡಲಾಗಿದೆ. ಹಲವು ಕೊಠಡಿಗಳಲ್ಲಿ ಪುಟಿನ್ ಜೊತೆ ಬಂದಿರುವ ನಿಯೋಗ ಇರಲಿದೆ. ಇನ್ನುಳಿದ ಹಲವು ಕೊಠಡಿಗಳು ಖಾಲಿ ಇರಲಿದೆ. ಭದ್ರತೆ ಕಾರಣದಿಂದ ಸಂಪೂರ್ಣ ಹೊಟೆಲ್ ಬುಕಿಂಗ್ ಮಾಡಲಾಗಿದೆ.
35
ಚಾಣಕ್ಯ ಕೊಠಡಿಯಲ್ಲಿ ಪುಟಿನ್, ಇದರ ಬೆಲೆ?
ವ್ಲಾದಮಿರ್ ಪುಟಿನ್ ಐಟಿಸಿ ಮೌರ್ಯ ಹೊಟೆಲ್‌ನಲ್ಲಿರುವ ಚಾಣಾಕ್ಯ ಕೊಠಡಿಯಲ್ಲಿ ಉಳಿದುಕೊಳ್ಳಲಿದ್ದಾರೆ. ಇದು ಐಷಾರಾಮಿ ಕೊಠಡಿ ಮಾತ್ರವಲ್ಲ, ಅತೀ ಹೆಚ್ಚು ಸ್ಥಳವಕಾಶ, ಎಲ್ಲೌ ಐಷಾರಾಮಿ ಸೌಲಭ್ಯಗಳು ಲಭ್ಯವಿದೆ. ಈ ಕೊಠಡಿಯ ಬೆಲೆ ಒಂದು ದಿನಕ್ಕೆ 8 ರಿಂದ 10 ಲಕ್ಷ ರೂಪಾಯಿ.
ಐಟಿಸಿ ಮೌರ್ಯ ಹೊಟೆಲ್‌ನ ಚಾಣಾಕ್ಯ ಕೊಠಡಿಯಲ್ಲಿ ಅಮೆರಿಕದ ಮಾಜಿ ಅಧ್ಯಕ್ಷ ಜೋ ಬೈಡೆನ್ ಸೇರಿ ಹಲವು ವಿಶ್ವ ನಾಯಕರು ತಂಗಿದ್ದಾರೆ. ಇಷ್ಟೇ ಅಲ್ಲ 4,600 ಚದರ ಅಡಿ ವಿಸ್ತೀರ್ಣದ ಈ ಕೊಠಡಿಯ ಸೌಲಭ್ಯದ ಕುರಿತು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಚಾಣಾಕ್ಯ ಕೊಠಡಿಯಲ್ಲಿ ಜಿಮ್, ರಿಸೆಪ್ಶನ್ ಏರಿಯಾ, 12 ಸೀಟಿನ ಡೈನಿಂಗ್ ರೂಂ, ಗೆಸ್ಟ್ ರೂಂ, ಆಫೀಸ್ ಸ್ಪೇಸ್, ಸ್ಟಡಿ ರೂಂ ಸೇರಿದಂತೆ ಎಲ್ಲಾ ಸೌಲಭ್ಯಗಳು ಇಲ್ಲಿದೆ.
ಹಲವು ವಿಶ್ವನಾಯಕರು ತಂಗಿದ ಕೊಠಡಿ
55
ಎರಡು ದಿನ ಭಾರತ ಪ್ರವಾಸ
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಇಂದು ಸಂಜೆ ಪ್ರಧಾನಿ ಮೋದಿ ನಿವಾಸದಲ್ಲಿ ಔತಣಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.
ನಾಳೆ ಬೆಳಿಗ್ಗೆ 11 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ವಿಧ್ಯುಕ್ತ ಸ್ವಾಗತ