ಇಂಡಿಗೋ ವಿಮಾನ ಪ್ರಯಾಣ ರದ್ದು, ವಿಳಂಬವಾದರೆ ಟಿಕೆಟ್ ಹಣ ರೀಫಂಡ್ ಹೇಗೆ? ಬೆಂಗಳೂರು ಸೇರಿದಂತೆ ದೇಶಾದ್ಯಂತ 300ಕ್ಕೂ ಹೆಚ್ಚು ಇಂಡಿಗೋ ವಿಮಾನ ಹಾರಾಟ ರದ್ದಾಗಿದೆ. ಹಲವು ಪ್ರಯಾಣ ವಿಳಂಬವಾಗಿದೆ. ಹೀಗಾದಲ್ಲಿ ಟಿಕೆಟ್ ರೀಫಂಡ್ ಮಾಡುವುದು ಹೇಗೆ?
ಕಳೆದ 48 ಗಂಟೆಯಲ್ಲಿ 300ಕ್ಕೂ ಹೆಚ್ಚು ವಿಮಾನ ಪ್ರಯಾಣ ರದ್ದಾಗಿದೆ, ಕೆಲವು ವಿಳಂಬವಾಗಿದೆ. ಪ್ರಯಾಣಿಕರು ಆಕ್ರೋಶ ಹೊರಹಾಕುತ್ತಿದ್ದಾರೆ. ತುರ್ತಾಗಿ ತೆರಳಬೇಕಿದ್ದ ಹಲವರು ಹಿಡಿ ಶಾಪ ಹಾಕುತ್ತಿದ್ದಾರೆ. ದೇಶಾದ್ಯಂತ ವಿಮಾನ ಹಾರಾಟದಲ್ಲಿನ ವ್ಯತ್ಯಯದಿಂದ ಸಮಸ್ಯೆಗಳು ಹೆಚ್ಚಾಗಿದೆ. ಹೀಗೆ ವಿಮಾನ ರದ್ದಾದರೆ, ಪ್ರಯಾಣ ವಿಳಂಬವಾದರೆ ಇಂಡಿಗೋದಲ್ಲಿ ಟಿಕೆಟ್ ಹಣ ವಾಪಸ್ ಪಡೆಯುವುದು ಹೇಗೆ?
25
ವಿಮಾನ ರದ್ದಾದರೆ, ವಿಳಂಬವಾದರೆ ಟಿಕೆಟ್ ರೀಫಂಡ್
ನೀವು ಪ್ರಯಾಣ ಮಾಡಬೇಕಿದ್ದ ವಿಮಾನ ತಾಂತ್ರಿಕ ಕಾರಣ ಅಥವಾ ವಿಮಾನ ಸಂಸ್ಥೆಯ ಕಾರಣಗಳಿಂದ ಪ್ರಯಾಣ ಮಾಡಬೇಕಿದ್ದ ವಿಮಾನ ರದ್ದಾದರೆ ಅಥವಾ ಹೆಚ್ಚು ಹೊತ್ತು ವಿಳಂಬವಾದರೆ, ಟಿಕೆಟ್ ಹಣ ವಾಪಸ್ ಪಡೆಯಲು ಸಾಧ್ಯವಿದೆ. ಭಾರತದ ನಾಗರೀಕರ ವಿಮಾನಯಾನ ಮಾರ್ಗಸೂಚಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.
35
ಯಾರು ರೀಫಂಡ್ ಮಾಡಬಹದು
ನೀವು ಪ್ರಯಾಣಿಸಬೇಕಾದ ವಿಮಾನ 2 ಗಂಟೆಗಿಂತ ಹೆಚ್ಚು ಕಾಲ ವಿಳಂಬವಾದರೆ, ಬಳಿಕ ನೀವು ಪ್ರಯಾಣಿಸಲು ನಿರಾಕರಿಸಿದರೆ
ನೀವು ಪ್ರಯಾಣಿಸಬೇಕಾದ ವಿಮಾನ ರದ್ದಾದರೆ, ಬದಲಿ ವಿಮಾನದಲ್ಲಿ ಪ್ರಯಾಣ ನಿರಾಕರಿಸಿದರೆ
ನಿಗಿದತ ಸಮಯದಲ್ಲಿ ವಿಮಾನಯಾನ ಸಂಸ್ಥೆ ಬೇರೆ ವಿಮಾನ ಪ್ರಯಾಣ ವ್ಯವಸ್ಥೆ ಮಾಡದಿದ್ದರೆ
ಪಾವತಿ ಮಾಡಿದ ರಿಸಿಪ್ಟ್ ಅಥವಾ ಬ್ಯಾಂಕ್ ಪಾವತಿ ಟ್ರಾನ್ಸಾಕ್ಷನ್
ವಿಮಾನ ಸಂಸ್ಥೆಯಿಂದ ವಿಳಂಬ ಅಥವಾ ರದ್ದು ಸಂದೇಶ ಅಥವಾ ಇಮೇಲ್
ರೀಫಂಡ್ ಆಗಲು ಬೇಕಾದ ದಾಖಲೆ
55
7 ದಿನ ಕಾಲಾವಕಾಶ
ಈ ಎಲ್ಲಾ ದಾಖಲೆಯನ್ನು ಪ್ರಯಾಣಿಕರು ವಿಮಾನಯಾನ ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಲಗತ್ತಿಸಬೇಕು. ವಿಮಾನ ಪ್ರಾಯಣ ರದ್ದಾದ ಅಥವಾ ವಿಳಂಬವಾದ 7 ದಿನದ ಒಳಗೆ ಈ ವಿವರ ಸಲ್ಲಿಕೆ ಮಾಡಬೇಕು. ವಿಳಂಬವಾದರೆ ರೀಫಂಡ್ ಸಾಧ್ಯವಾಗುವುದಿಲ್ಲ.