Brahmagantu ರೋಚಕ ಟ್ವಿಸ್ಟ್​: ವರ್ಷಗಳಿಂದ ಕಾಯ್ತಿದ್ದ ಅನಾಮಿಕ ನಾಯಕನ ಎಂಟ್ರಿ! ಯಾರೀ ಗುರು

Published : May 14, 2026, 03:06 PM IST

ಬ್ರಹ್ಮಗಂಟು ಸೀರಿಯಲ್​ನಲ್ಲಿ ಬಹುಕಾಲದಿಂದ ಕಾಡುತ್ತಿದ್ದ ಪ್ರಶ್ನೆಗೆ ಉತ್ತರ ಸಿಕ್ಕಿದ್ದು, ಸೌಂದರ್ಯಳ ಪತಿಯ ಅನಿರೀಕ್ಷಿತ ಎಂಟ್ರಿ ಆಗಿದೆ. ತನ್ನ ಮಾವನ ಕೊಲೆಗೆ ಯತ್ನಿಸಿದ ಸೌಂದರ್ಯಳನ್ನು ತಡೆಯಲು ಆಕೆಯ ಪತಿಯೇ ಅಖಾಡಕ್ಕಿಳಿದಿದ್ದು, ಕಥೆಗೆ ರೋಚಕ ತಿರುವು ಸಿಕ್ಕಿದೆ.

PREV
16
ಕಾಡಿತ್ತು ಪ್ರಶ್ನೆ

ಬ್ರಹ್ಮಗಂಟು (Brahmagantu) ಸೀರಿಯಲ್​ನಲ್ಲಿ ಆರಂಭದಿಂದಲೂ ಸೌಂದರ್ಯ ಮತ್ತು ದೀಪಾ ಈಗ ದಿಶಾ ಸುತ್ತ ಸುತ್ತುತ್ತಲೇ ಇದೆ. ಇಲ್ಲಿ ಚಿರು ನಾಯಕ ಆಗಿದ್ರೂ, ಸೌಂದರ್ಯಳ ಪತಿ ಎಲ್ಲಿ ಎಂದು ಪ್ರತಿ ಬಾರಿಯೂ ಪ್ರಶ್ನೆ ಎದುರಾಗುತ್ತಲೇ ಇತ್ತು.

26
ಎಲ್ಲಿ ಗಂಡ?

ಸೌಂದರ್ಯಳ ಗಂಡ ಹತ್ತಿರ ಇಲ್ಲ, ದೂರ ಎಲ್ಲೋ ಇದ್ದಾನೆ ಎಂದು ಪದೇ ಪದೇ ಹೇಳುತ್ತಿದ್ದರೂ, ಅವನನ್ನು ತೋರಿಸಿಯೇ ಇರಲಿಲ್ಲ. ಸೌಂದರ್ಯಳಿಗೆ ಮಗು ಮಾಡ್ಕೊ, ಮಗು ಮಾಡ್ಕೊ ಎಂದು ಮನೆಯಲ್ಲಿ ಹೇಳ್ತಿದ್ದರೂ ಮಗು ಮಾಡಿಕೊಳ್ಳಲು ಗಂಡನಾದವ ಎಲ್ಲಿದ್ದಾನೆ ಎನ್ನೋದೇ ತಿಳಿದಿರಲಿಲ್ಲ.

36
ರೋಚಕ ಟ್ವಿಸ್ಟ್​

ಇದೀಗ ಆ ರೋಚಕ ಟ್ವಿಸ್ಟ್​ ಸಿಕ್ಕಿದೆ. ಸೌಂದರ್ಯಳ ಪತಿಯ ಎಂಟ್ರಿ ಆಗಿದೆ. ಸೌಂದರ್ಯ, ತನ್ನ ಮಾವನನ್ನು ಅರೆಜೀವ ಮಾಡಿದ್ದಾಳೆ. ಇದೀಗ ಮಾವ ಹುಷಾರಾಗುತ್ತಿದ್ದು, ಸೌಂದರ್ಯಳ ಬಂಡವಾಳವನ್ನು ಬಯಲು ಮಾಡಲು ಮುಂದಾಗಿದ್ದ.

46
ಸೌಂದರ್ಯ ಕುತಂತ್ರ

ಆದರೆ ಸೌಂದರ್ಯ ಅವನನ್ನು ಮತ್ತೆ ತಳ್ಳಿ, ಆಸ್ಪತ್ರೆಗೆ ಸಾಗಿಸುವಂತೆ ಮಾಡಿದ್ದಾಳೆ. ಗೂಂಡಾಳನ್ನು ಬಿಟ್ಟು ಅವನನ್ನು ಅಲ್ಲಿಯೇ ಮುಗಿಸುವಂತೆ ಹೇಳಿದ್ದಾಳೆ.

56
ಗೂಂಡಾಗಳ ದಾಳಿ

ಆ್ಯಂಬುಲೆನ್ಸ್​ನಲ್ಲಿ ಎಲ್ಲರೂ ಆಸ್ಪತ್ರೆಗೆ ಹೋಗುತ್ತಿರುವಾಗ ಗೂಂಡಾಗಳು ಎದುರಾಗಿದ್ದು, ಇನ್ನೇನು ಮಾವನಿಗೆ ಚಾಕು ಹಾಕಬೇಕು ಎನ್ನುವಾಗಲೇ ಸೌಂದರ್ಯಳ ಪತಿಯ ಎಂಟ್ರಿ ಆಗಿದೆ.

66
ಹಿರಿಯ ಮಗ ಬಂದಾಯ್ತು

ನಾನು ಹಿರಿಯ ಮಗ ಬಂದಾಯ್ತು ಎಂದು ಎಲ್ಲಾ ರೌಡಿಗಳನ್ನು ಸದೆ ಬಡಿದಿದ್ದಾನೆ. ಇನ್ನು ಆತ ಪತ್ನಿಯ ಬಣ್ಣವನ್ನು ಬಯಲು ಮಾಡಿದ್ರೆ, ಇತ್ತ ದಿಶಾಳ ಗುಟ್ಟು ಗೊತ್ತಾದ್ರೆ ಅಲ್ಲಿಗೆ ಸೀರಿಯಲ್​ ಮುಗಿದಂತೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories