ದಕ್ಷಿಣ ಭಾರತದ ಬಿಜೆಪಿ ಫೈರ್ ಬ್ರ್ಯಾಂಡ್ ಅಣ್ಣಾಮಲೈಗೆ ಟಿಕೆಟ್ ಇಲ್ಲ, ಸೈಡ್‌ಲೈನ್ ಆದ್ರಾ ಸಿಂಗಂ?

Published : Apr 03, 2026, 05:52 PM IST

ದಕ್ಷಿಣ ಭಾರತದ ಬಿಜೆಪಿ ಫೈರ್ ಬ್ರ್ಯಾಂಡ್ ಅಣ್ಣಾಮಲೈಗೆ ಟಿಕೆಟ್ ಇಲ್ಲ, ಸೈಡ್‌ಲೈನ್ ಆದ್ರಾ ಸಿಂಗಂ? ತಮಿಳುನಾಡಿನಲ್ಲಿ ನೆಲಕಚ್ಚಿದ್ದ ಬಿಜೆಪಿಗೆ ಮರುಜೀವ ನೀಡಿ ಹೊಸ ಅಲೆ ಸೃಷ್ಟಿಸಿದ ಅಣ್ಣಾಮಲೈಗೆ ಕಡೆಗಣಿಸಿದ್ದೇಕೆ? 

PREV
15
ತಮಿಳುನಾಡು ಬಿಜೆಪಿಗೆ ನಷ್ಟ

ತಮಿಳುನಾಡಿನಲ್ಲಿ ಬಿಜೆಪಿಗೆ ಮರುಜೀವ ಕೊಟ್ಟ ಹೊಸ ಕೇಸರಿ ಅಲೆ ಸೃಷ್ಟಿಸಿದ ಕೆ ಅಣ್ಣಾಮಲೈ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದರು. ದಕ್ಷಿಣ ಭಾರತದಲ್ಲಿ ಬಿಜೆಪಿಯ ಫೈರ್ ಬ್ರ್ಯಾಂಡ್ ಫೇಸ್ ಆಗಿ ಗುರುತಿಸಿಕೊಂಡಿದ್ದ ಅಣ್ಣಾಮಲೈಗೆ ತಮಿಳುನಾಡು ಬಿಜೆಪಿ ಅಧ್ಯಕ್ಷ ಪಟ್ಟ ನೀಡಲಾಗಿತ್ತು. ಆದರೆ ಮೈತ್ರಿ ಮಾತುಕತೆಯಿಂದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅಣ್ಣಾಮಲೈಯನ್ನು ಬಿಜೆಪಿ ಕಡೆಗಣಿಸಿದ ಅನ್ನೋ ಮಾತು ಕೇಳಿಬಂದಿತ್ತು. ಇದೀಗ ತಮಿಳುನಾಡು ಟಿಕೆಟ್ ಘೋಷಣೆಯಾದಾಗ ಈ ಮಾತು ಬಲವಾಗಿ ಕೇಳಿಬರುತ್ತಿದೆ.

25
ಬಿಜೆಪಿಯ 27 ಸ್ಥಾನದಲ್ಲಿ ಅಣ್ಣಾಮಲೈಗೆ ಟಿಕೆಟ್ ಇಲ್ಲ

ತಮಿಳುನಾಡಿನಲ್ಲಿ 234 ಸ್ಥಾನಗಳ ಪೈಕಿ ಮೈತ್ರಿ ಪಕ್ಷವಾದ ಎಐಡಿಎಂಕೆ ಬಹುಪಾಲು ಸೀಟು ಪಡೆದರೆ ಬಿಜೆಪಿ 27 ಸೀಟು ಮಾತ್ರ ಪಡದಿದೆ. ಈ 27 ಕ್ಷೇತ್ರಗಳಿಗೆ ಟಿಕೆಟ್ ಘೋಷಣೆ ಮಾಡಲಾಗಿದ್ದು, ಅಣ್ಣಾಮಲೈಗೆ ಟಿಕೆಟ್ ನೀಡಿಲ್ಲ. ಇದು ಅಣ್ಣಾಮಲೈಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಅನ್ನೋ ಮಾತುಗಳು ಬಲವಾಗಿ ಕೇಳಿಬರುವಂತೆ ಮಾಡಿದೆ.

35
ತಮಿಳುನಾಡಿನಲ್ಲಿ ಬಿಜೆಪಿ ಮುಖವಾಗಿದ್ದ ಅಣ್ಣಾಮಲೈ

ಕೆ ಅಣ್ಣಾಮಲೈ ತಮಿಳುನಾಡು ಬಿಜೆಪಿ ಅಧ್ಯಕ್ಷ ಸ್ಥಾನದ ಜೊತೆ ಪಕ್ಷ ಸಂಘಟನೆ ಮಹತ್ತರ ಜವಾಬ್ದಾರಿ ಹೊತ್ತಿದ್ದರು. ಈ ಮೂಲಕ ತಮಿಳುನಾಡಿನಲ್ಲಿ ಸ್ವತಂತ್ರವಾಗಿ ಪಕ್ಷ ಕಟ್ಟುವ ಗುರಿ ಇಟ್ಟುಕೊಂಡಿದ್ದರು. ಇದರಂತೆ ಸಾಗಿದ್ದರು. ಆಧರೆ ಯಾವಾಗ ಅಧ್ಯಕ್ಷ ಪಟ್ಟದಿಂದ ಕೆಳಗಿಳಿಯಬೇಕಾಯಿತೋ ಅಲ್ಲಿಗೆ ತಮಿಳುನಾಡಿನಲ್ಲಿ ಬಿಜೆಪಿ ಮಂಕಾಯಿತು.

45
ಅಣ್ಣಾಮಲೈ ಮಂಕಾದ ಗ್ಯಾಪ್‌ನಲ್ಲಿ ನಟ ವಿಜಯ್ ಶೈನ್

ಅಣ್ಣಾಮಲೈ ದಕ್ಷಿಣ ಭಾರತದಲ್ಲೇ ಹೊಸ ಅಲೆ ಸೃಷ್ಟಿಸಿದ್ದರು. ಹೀಗಾಗಿ ಇದೇ ವೇಳೆ ನಟ ವಿಜಯ್ ಜೊಸೆಫ್ ರಾಜಕೀಯ ಪ್ರವೇಶ ವಿಳಂಬವಾಗಿತ್ತು. ಅಣ್ಣಾಮಲೈ ಅಬ್ಬರದ ಮುಂದೆ ತಮಿಳುನಾಡಿನಲ್ಲಿ ಸಾಂಪ್ರದಾಯಿಕ ರಾಜಕೀಯ ಪಕ್ಷಗಳು, ನಾಯಕರು ಒಂದು ಹೆಜ್ಜೆ ಹಿಂದೆ ಇಟ್ಟಿದ್ದರು. ಆದರೆ ಯಾವಾಗ ಅಣ್ಣಾಮಲೈ ಕಡೆಗಣನೆಯಾಗುತ್ತಿದ್ದಂತೆ ನಟ ವಿಜಯ್ ಈ ಸ್ಥಾನ ಆಕ್ರಮಿಸಿಕೊಂಡರು.

55
ಅಣ್ಣಾಮಲೈಗೆ ಪ್ರಮುಖ ಜವಾಬ್ದಾರಿ?

ಅಣ್ಣಾಮಲೈಗೆ ಬಿಜೆಪಿ ಹೈಕಮಾಂಡ್ ಪ್ರಮುಖ ಜವಾಬ್ದಾರಿ ನೀಡುವ ಸಾಧ್ಯತೆ ಎಂದು ಹೇಳಲಾಗುತ್ತದೆ. ಆದರೆ ಅಣ್ಣಾಮಲೈ ಸಾಮರ್ಥ್ಯವನ್ನು ಬಿಜೆಪಿ ಕಡೆಗಣಿಸುತ್ತಿರುವುದು ಸುಳ್ಳಲ್ಲ, ಇಷ್ಟೇ ಅಲ್ಲ ಪ್ರತಿ ಬಾರಿ ಅಣ್ಣಾಮಲೈಗೆ ಹೊಸ ಜವಾಬ್ದಾರಿ ನೀಡಲಾಗುತ್ತಿದೆ ಮಾತು ಬರುತ್ತಲೇ ಇದೆ. ಆದರೆ ತಮಿಳನಾಡು ವಿಧಾನಸಭೆ ಚುನಾವಣೆ ಸಮಯದಲ್ಲೇ ಹಲ್ಲು ಕಿತ್ತ ಹಾವಿನಂತೆ ಮಾಡಿದ್ದಾರೆ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿದೆ.

ಅಣ್ಣಾಮಲೈಗೆ ಪ್ರಮುಖ ಜವಾಬ್ದಾರಿ?

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories