ಖಾನ್ ಸರ್ ಕೋಚಿಂಗ್ ಸೆಂಟರ್ ಮೇಲೆ ದಾಳಿ; ಸಿಸಿಟಿವಿಯಲ್ಲಿ ಮುಸುಕುಧಾರಿಗಳ ದೃಶ್ಯ ಸರೆ

Published : Jun 03, 2026, 12:14 PM IST

ಖಾನ್ ಸರ್ ಅವರ ಕೋಚಿಂಗ್ ಸೆಂಟರ್ ಮೇಲೆ ಮುಸುಕುಧಾರಿಗಳು ದಾಳಿ ನಡೆಸಿದ್ದಾರೆ. ಈ ಘಟನೆಯಲ್ಲಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದು, ಯಶಸ್ವಿ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದ ನಂತರ ಬೆದರಿಕೆ ಬಂದಿತ್ತು ಎಂದು ಖಾನ್ ಸರ್ ತಿಳಿಸಿದ್ದಾರೆ. ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

PREV
15
ಬಿಹಾರದ ಸ್ಟಾರ್ ಶಿಕ್ಷಕ

ಪಾಟ್ನಾ: ಬಿಹಾರದ ಸ್ಟಾರ್ ಶಿಕ್ಷಕ ಎಂದು ಗುರುತಿಸಿಕೊಂಡಿರುವ ಖಾನ್ ಸರ್ ಅವರ ಕೋಚಿಂಗ್ ಸೆಂಟರ್ ಮೇಲೆ ದಾಳಿ ನಡೆಸಲಾಗಿದೆ. ಈ ದಾಳಿಯಿಂದ ಕೋಚಿಂಗ್‌ಗೆ ಆಗಮಿಸುವ ವಿದ್ಯಾರ್ಥಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ.

25
ಭದ್ರತಾ ಸಿಬ್ಬಂದಿಗೆ ಗಾಯ

ಮಂಗಳವಾರ ತಡರಾತ್ರಿ ನಡೆದ ದಾಳಿಯಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗುಂಡಿನ ದಾಳಿಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಮುಸುಕುಧಾರಿಯ ವ್ಯಕ್ತಿಗಳಿಂದ ಈ ಕೃತ್ಯ ನಡೆದಿದೆ.

35
ಇಟ್ಟಿಗೆ ಮತ್ತು ಕಲ್ಲುಗಳಿಂದ ದಾಳಿ

ಸುಮಾರು 12ಕ್ಕೂ ಅಧಿಕ ಮುಸುಕುಧಾರಿಗಳು ಕೋಚಿಂಗ್ ಸೆಂಟರ್ ಮೇಲೆ ಕಲ್ಲು ಎಸೆಯುವುದು, ಕಟ್ಟಡ ಮುಂಭಾಗದಲ್ಲಿಯ ಪೋಸ್ಟರ್ ಮತ್ತು ಫ್ಲೆಕ್ಸ್‌ಗಳನ್ನು ಹರಿದು ಹಾಕಿದ್ದಾರೆ. ಕೋಚಿಂಗ್ ಸೆಂಟರ್ ಮೇಲೆ ಮುಸುಕುಧಾರಿಗಳು ಇಟ್ಟಿಗೆ ಮತ್ತು ಕಲ್ಲುಗಳಿಂದ ದಾಳಿ ನಡೆಸಿರೋದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

45
ಮುಸುಕುಧಾರಿಗಳಿಂದ ದಾಳಿ

ವೈರಲ್ ವಿಡಿಯೋದಲ್ಲಿ ಮೊದಲಿಗೆ ಇಬ್ಬರ ನಡುವೆ ಜಗಳ ನಡೆಯುತ್ತದೆ. ಈ ವೇಳೆ ಪುರುಷರ ಗುಂಪೊಂದು ವ್ಯಕ್ತಿಯನ್ನು ಹೊಡೆಯುತ್ತಾರೆ. ನಂತರ ಇದ್ದಕ್ಕಿದ್ದಂತೆ ಕೋಚಿಂಗ್ ಸೆಂಟರ್ ಮೇಲೆ ದಾಳಿ ನಡೆಸಲು ಆರಂಭಿಸುತ್ತಾರೆ. ಇದೇ ಸಿಸಿಟಿವಿಯಲ್ಲಿ ಮುಸುಕುಧಾರಿಗಳು ಖಾನ್ ಸರ್ ಅವರ ಫೋಟೋಗಳನ್ನು ಹರಿದು ಹಾಕಿದ್ದಾರೆ. ಈ ದಾಳಿಯ ವಿಷಯ ತಿಳಿಸುತ್ತಿದ್ದಂತೆ ರಾತ್ರಿ 11.30ರ ವೇಳೆಗೆ ಇಲ್ಲಿಗೆ ಬಂದಿರೋದಾಗಿ ಖಾನ್ ಸರ್ ಹೇಳಿಕೆ ನೀಡಿದ್ದಾರೆ.

55
ಬೆದರಿಕೆ

ಬಿಹಾರ ಪೊಲೀಸ್ ನೇಮಕಾತಿ ಪರೀಕ್ಷೆಯಲ್ಲಿ ನಮ್ಮ ಕೋಚಿಂಗ್ ಸೆಂಟರ್‌ನ ಅನೇಕ ವಿದ್ಯಾರ್ಥಿಗಳು ಆಯ್ಕೆಯಾಗಿದ್ದರು. ಈ ಹಿನ್ನೆಲೆ ಯಶಸ್ವಿ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಾರ್ಯಕ್ರಮದ ನಂತರ ಕೆಲವರು ಕೋಚಿಂಗ್ ಸೆಂಟರ್‌ಗೆ ಬಂದು ಬೆದರಿಕೆ ಹಾಕಿದ್ದರು ಎಂದು ಖಾನ್ ಸರ್ ಮಾಹಿತಿ ನೀಡಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories