ಮಾಸ್ಕ್ ಮೇಲೆ ಮಧುಬಾನಿ ಕಲೆ ಅರಳಿದ ಕತೆ, ನಿಮಗೂ ಬೇಕೆ?

First Published Jul 8, 2020, 7:53 PM IST

ಪಾಟ್ನಾ(ಜು. 08)  ಕೊರೋನಾ ವೈರಸ್ ಎನ್ನುವುದು ನಮ್ಮನ್ನು ಸುತ್ತಿಕೊಂಡ ಮೇಲೆ ಮಾಸ್ಕ್ ಎನ್ನುವ ರಕ್ಷಣಾ ಕವಚ ಅನಿವಾರ್ಯವಾಗಿದೆ. ದಯವಿಟ್ಟು ಮಾಸ್ಕ್ ಧರಿಸಿ  ಎಂಬ ಮಾತುಗಳನ್ನು ಪದೇ ಪದೇ ಹೇಳಲಾಗುತ್ತದೆ. ಇಲ್ಲೊಬ್ಬರು ಕಲಾಕಾರರು ಮಾಸ್ಕ್ ಮೇಲೆಯೇ ತಮ್ಮ ಕೌಶಲ್ಯ ತೋರಿಸಿದ್ದಾರೆ.

ಮಧುಬಾನಿ ಆರ್ಟಿಸ್ಟ್ ಕೈಯಿಂದಲೇ ಸಿದ್ಧಮಾಡಿರುವ ಮಾಸ್ಕ್ ಇದೀಗ ಸಖತ್ ಪ್ರಸಿದ್ಧಿಗೆ ಬಂದಿದೆ.
undefined
ಕೊರೋನಾ ಲಾಕ್ ಡೌನ್ ಕಾರಣಕ್ಕೆ ಸಮಸ್ಯೆಗೆ ಸಿಲುಕಿದ್ದ ಬಿಹಾರದ ಕಲಾವಿದ ರೆಮಂತ್ ಕುಮಾರ್ ಮಿಶ್ರಾ ಮಾಸ್ಕ್ ಮೇಲೆಯೇ ತಮ್ಮ ಕಲೆ ಅರಳಿಸಿದ್ದಾರೆ.
undefined
ಶುದ್ಧ ಹತ್ತಿಯಿಂದ ತಯಾರಾದ ಮೂರು ಲೇಯರ್ ಮಾಸ್ಕ್ ಮೇಲೆ ಕೈಯಿಂದಲೇ ಸುಂದರ ಕಲೆ ಅರಳಿಸಿದ್ದಾರೆ. ಆದರೆ ಇದನ್ನು ಜನರಿಗೆ ಹೇಗೆ ತಲುಪಿಸುವುದು ಎಂಬ ಸಮಸ್ಯೆಯೂ ಎದುರಾಗಿದೆ.
undefined
ಬರಹಗಾರ್ತಿ, ಸಮಾಜ ಸೇವಕಿ ಅದ್ವೈತಾ ಕಲಾ ಅವರ ಗಮನಕ್ಕೆ ಬಂದಿದೆ. ವಲಸೆ ಕಾರ್ಮಿಕರಿಗೆ ಸಹಾಯ ಮಾಡಿಕೊಂಡು ಬಂದಿದ್ದ ಕಲಾ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಕಲಾವಿದನ ಹೊಸ ಸಾಹಸ ಅನಾವರಣ ಮಾಡಿದ್ದಾರೆ. ಆರ್ಡರ್ ಮಾಡಲು ಕಲಾವಿದರ ನಂಬರ್ ಸಹ ನೀಡಿದ್ದಾರೆ.
undefined
ಇದಾದ ಮೇಲೆ ಒಂದಾದ ಮೇಲೆ ಒಂದು ಕರೆ ಬರತೊಡಗಿದೆ. ಮಾಸ್ಕ್ ಒಂದಕ್ಕೆ 50 ರೂ. ತೆಗೆದುಕೊಳ್ಳಲಾಗಿದೆ. ಕೋರಿಯರ್ ಮೂಲಕ ದೇಶದ ಯಾವ ಭಾಗಕ್ಕೆ ಬೇಕಾದರೂ ಕಳಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ.
undefined
ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಕಲಾವಿದನಿಗೆ ಕರೆಯ ಮೇಲೆ ಕರೆ ಬಂದಿದ್ದು ಸಾವಿರಾರು ಮಾಸ್ಕ್ ಆರ್ಡರ್ ಬಂದಿದೆ. ಈಗ ಕಲಾವಿದ ಫುಲ್ ಬ್ಯುಸಿಯಾಗಿದ್ದಾರೆ.
undefined
click me!