ಭಾರತೀಯ ರೈಲ್ವೇಯಿಂದ ಮಹತ್ವದ ಘೋಷಣೆ: ಅಡ್ವಾನ್ಸ್ ರೈಲು ಟಿಕೆಟ್ ಬುಕ್ಕಿಂಗ್ ಮಾಡುವವರು ಈ ಸುದ್ದಿ ತಪ್ಪದೇ ನೋಡಿ

Published : Jul 02, 2026, 04:38 PM IST

ಬೆಂಗಳೂರು: ಭಾರತೀಯ ರೈಲ್ವೇ ಪ್ರಯಾಣಿಕರು ನೂರು ದಿನಕ್ಕೂ ಹೆಚ್ಚಿನ ಕಾಲ ಮುಂಗಡವಾಗಿ ಟಿಕೆಟ್ ಬುಕ್ ಮಾಡುವವರು ಓದಲೇಬೇಕಾದ ಸುದ್ದಿಯಿದೆ. ಯಾಕೆಂದರೆ ಈ ವಿಚಾರದಲ್ಲಿ ಭಾರತೀಯ ರೈಲ್ವೇ ಇದೀಗ ಮಹತ್ವದ ತೀರ್ಮಾನ ತೆಗೆದುಕೊಂಡಿದೆ. 

PREV
15
ರೈಲ್ವೇ ಇಲಾಖೆಯಿಂದ ಮಹತ್ವದ ಪ್ರಕಟಣೆ

ರೈಲ್ವೇ ಪ್ರಯಾಣಿಕರು ದೂರದ ಪ್ರಯಾಣಕ್ಕೆ ಹಾಗೂ ಹಬ್ಬ ಹರಿದಿನಗಳಲ್ಲಿ ತಮ್ಮ ಊರುಗಳಿಗೆ ತೆರಳಲು 100-120 ದಿನ ಮುಂಚಿತವಾಗಿಯೇ ರೈಲ್ವೇ ಟಿಕೆಟ್‌ ಮುಂಗಡವಾಗಿ ಕಾಯ್ದಿರಿಸಲು ಅವಕಾಶ ನೀಡಲಾಗಿತ್ತು.

25
ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಅವಧಿ ಅರ್ಧದಷ್ಟು ಕಡಿಮೆ

ಆದರೆ ಇದೀಗ ಭಾರತೀಯ ರೈಲ್ವೆಯು ಮುಂಗಡ ಟಿಕೆಟ್ ಕಾಯ್ದಿರಿಸುವ ಅವಧಿಯನ್ನು ಅರ್ಧದಷ್ಟು ಕಡಿಮೆ ಮಾಡಿದೆ.

35
60 ದಿನ ಮುಂಚಿತವಾಗಿ ಟಿಕೆಟ್ ಬುಕ್ಕಿಂಗ್ ಮಾಡಬಹುದು

ಹೌದು, ಪ್ರಯಾಣಿಕರು ಇನ್ನು ಮುಂದೆ ರೈಲು ಟಿಕೆಟ್‌ಗಳನ್ನು ಈ ಹಿಂದಿನಂತೆ 120 ದಿನಗಳ ಬದಲಿಗೆ 60 ದಿನಗಳ ಮುಂಚಿತವಾಗಿ ಮಾತ್ರ ಕಾಯ್ದಿರಿಸಬಹುದು ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

45
ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಮಾಡುವವರಿಗೆ ನಿರಾಸೆ

ಈ ಮೊದಲು ಮುಂಚಿತವಾಗಿ 120 ದಿನಗಳ ಮೊದಲೇ ಬುಕ್ ಮಾಡುತ್ತಿದ್ದ ಪ್ರಯಾಣಿಕರಿಗೆ ಇದು ನಿರಾಸೆ ಮೂಡಿಸಿರುವುದಂತೂ ಸುಳ್ಳಲ್ಲ.

55
ವಿದೇಶಿ ಪ್ರಯಾಣಿಕರ ವಿಚಾರದಲ್ಲಿ ಯಾವುದೇ ಬದಲಾವಣೆಯಿಲ್ಲ

ಆದರೆ, ವಿದೇಶಿ ಪ್ರವಾಸಿಗರಿಗೆ ಮುಂಗಡ ಬುಕಿಂಗ್‌ಗೆ ಸಂಬಂಧಿಸಿದ ಸಮಯದ ಮಿತಿಯು 365 ದಿನಗಳಷ್ಟೇ ಮುಂದುವರಿಯಲಿದೆ. ಅಂದರೆ ವಿದೇಶಿಗಳು ಒಂದು ವರ್ಷ ಮುಂಚಿತವಾಗಿಯೇ ರೈಲ್ವೇ ಮುಂಗಡ ಟಿಕೆಟ್ ಕಾಯ್ದಿರಿಸಬಹುದಾಗಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories