ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ ಭೂತಾನ್ ರಾಜ: ಯುಪಿ ಸಿಎಂ ಯೋಗಿ ಸಾಥ್

Published : Feb 04, 2025, 06:51 PM IST

ಭೂತಾನ್ ರಾಜ ಜಿಗ್ಮೆ ಖೇಸರ್ ನಾಮ್ಗ್ಯಾಲ್ ವಾಂಗ್‌ಚುಕ್, ಸಿಎಂ ಯೋಗಿ ಆದಿತ್ಯನಾಥ್ ಜೊತೆ ಪ್ರಯಾಗ್‌ರಾಜ್ ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿ, ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಿದರು.ನಂತರ ಲೇಟೆ ಹನುಮಾನ್ ದೇವಸ್ಥಾನ ಮತ್ತು ಅಕ್ಷಯವಟಕ್ಕೂ ಭೇಟಿ ನೀಡಿದರು.

PREV
17
ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡಿದ ಭೂತಾನ್ ರಾಜ: ಯುಪಿ ಸಿಎಂ ಯೋಗಿ ಸಾಥ್

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಭೂತಾನ್ ರಾಜ ಜಿಗ್ಮೆ ಖೇಸರ್ ನಾಮ್ಗ್ಯಾಲ್ ವಾಂಗ್‌ಚುಕ್ ಆಗಮಿಸಿ ಪುಣ್ಯಸ್ನಾನ ಮಾಡಿದ್ದಾರೆ.

27

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌ ಅವರ ಜೊತೆ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ ಭೂತಾನ್ ರಾಜ ಜಿಗ್ಮೆ ಖೇಸರ್ ನಾಮ್ಗ್ಯಾಲ್ ವಾಂಗ್‌ಚುಕ್ ಬಳಿಕ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿದರು.

37
ಲೇಟೆ ಹನುಮಂತನ ದರ್ಶನ

ಸಂಗಮ ಸ್ನಾನದ ನಂತರ, ಇಬ್ಬರೂ ನಾಯಕರು ಗಂಗೆಗೆ ಪೂಜೆ ಸಲ್ಲಿಸಿ  ಲೇಟೆ ಹನುಮಾನ್ ದೇವಸ್ಥಾನಕ್ಕೆ ಈ ಇಬ್ಬರು ನಾಯಕರು ಭೇಟಿ ನೀಡಿದರು.

47
ಅಕ್ಷಯವಟ ದರ್ಶನ

ಇದಾದ ನಂತರ ಭೂತಾನ್ ರಾಜ ಜಿಗ್ಮೆ ಖೇಸರ್ ನಾಮ್ಗ್ಯಾಲ್ ವಾಂಗ್‌ಚುಕ್ ಅವರು ಯೋಗಿಜೀ ಅವರೊಂದಿಗೆ ಮಹಾಕುಂಭದ ಪ್ರಮುಖ ಧಾರ್ಮಿಕ ಸ್ಥಳವಾದ ಅಕ್ಷಯವಟಕ್ಕೆ ಭೇಟಿ ನೀಡಿದರು. 

57

ಲಕ್ನೋದಿಂದ ಪ್ರಯಾಗ್‌ರಾಜ್‌ನ ಬಮ್ರೌಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಭೂತಾನ್ ಪ್ರಧಾನಿ ಬಳಿಕ ಅಲ್ಲಿಂದ ರಸ್ತೆ ಮಾರ್ಗವಾಗಿ ಮಹಾಕುಂಭ ಸ್ಥಳಕ್ಕೆ ಆಗಮಿಸಿದ್ದರು

67

ತ್ರಿವೇಣಿ (ಗಂಗೆ ಯಮುನೆ, ಗುಪ್ತಗಾಮಿನಿಯಾಗಿ ಸರಸ್ವತಿ) ಸಂಗಮದಲ್ಲಿ ಸ್ನಾನದ ನಂತರ, ಭೂತಾನ್ ರಾಜ ಮತ್ತು ಯೋಗಿ ಆದಿತ್ಯನಾಥ್‌ ಪಕ್ಷಿಗಳಿಗೆ ಧಾನ್ಯ ನೀಡಿದರು.

77
37 ಕೋಟಿ ಭಕ್ತರು ಸ್ನಾನ

ವಿಶ್ವದಲ್ಲೇ ಅತೀದೊಡ್ಡ ಧಾರ್ಮಿಕ ಸಮಾಗಮವಾದ ಉತ್ತರ ಪ್ರದೇಶದ ಮಹಾಕುಂಭದ 23ನೇ ದಿನ ಈಗಾಗಲೇ ಕಳೆದಿದ್ದು, ಇಲ್ಲಿ ಇದುವರೆಗೆ ಒಟ್ಟು 37 ಕೋಟಿ ಭಕ್ತರು ಸಂಗಮದಲ್ಲಿ ಸ್ನಾನ ಮಾಡಿದ್ದಾರೆ ಎಂದು ವರದಿಯಾಗಿದೆ. 

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories