ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್, ದೇಶದ ಎಲ್ಲಾ ಭಾಗದಿಂದ ವಂದೇ ಭಾರತ್, ನಮೋ ಭಾರತ್ ಟ್ರೈನ್

Published : Feb 03, 2025, 07:59 PM IST

ಭಾರತದ ಎಲ್ಲಾ ಭಾಗದ ಜನರಿಗೆ ವಂದೇ ಭಾರತ್ ಹಾಗೂ ನಮೋ ಭಾರತ್ ರೈಲು ಸೇವೆ ಒದಗಿಸಲು ಭಾರತೀಯ ರೈಲ್ವೇ ಸಚಿವಾಲಯ ಮಹತ್ದ ಘೋಷಣೆ ಮಾಡಿದೆ. ಇದೀಗ ಹೊಸತಾಗಿ 200 ವಂದೇ ಭಾರತ್ ರೈಲು ಹಾಗೂ 50 ನಮೋ ಭಾರತ್ ರೈಲು ಸೇವೆ ಘೋಷಣೆ ಮಾಡಲಾಗಿದೆ. ಯಾವ ಮಾರ್ಗ?

PREV
16
ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್,  ದೇಶದ ಎಲ್ಲಾ ಭಾಗದಿಂದ ವಂದೇ ಭಾರತ್, ನಮೋ ಭಾರತ್ ಟ್ರೈನ್

ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಇತ್ತೀಚಿನ ರೈಲ್ವೆ ಬಜೆಟ್‌ನಲ್ಲಿ ಭಾರತೀಯ ರೈಲ್ವೆಗೆ ಹಲವಾರು ಪ್ರಮುಖ ಬೆಳವಣಿಗೆಗಳನ್ನು ಘೋಷಿಸಿದ್ದಾರೆ. ರೈಲ್ವೆ ಸುರಕ್ಷತೆಯನ್ನು ಹೆಚ್ಚಿಸಲು ಗಮನಾರ್ಹವಾಗಿ ₹ 1.16 ಲಕ್ಷ ಕೋಟಿ ಹಂಚಿಕೆ ಮಾಡಲಾಗಿದೆ. ₹ 15742 ಕೋಟಿ ಮೌಲ್ಯದ ವಿಶಾಲ ರೈಲ್ವೆ ಅಭಿವೃದ್ಧಿ ಯೋಜನೆ ಘೋಷಿಸಲಾಗಿದೆ. ಈ ಪೈಕಿ ದೇಶದ ಎಲ್ಲಾ ಭಾಗದಿಂದ ವಂದೇ ಭಾರತ್ ಹಾಗೂ ನಮೋ ಭಾರತ್ ರೈಲು ಸೇವೆ ಲಭ್ಯವಾಗುವಂತೆ ಮಾಡಲಾಗುತ್ತಿದೆ. 

26

ದೇಶದ ಎಲ್ಲಾ ಭಾಗಕ್ಕೆ ಅತೀ ವೇಗದ ರೈಲು ಸೇವೆಗೆ ದೇಶಾದ್ಯಂತ 50 ನಮೋ ಭಾರತ್ ರೈಲುಗಳು ಮತ್ತು 200 ವಂದೇ ಭಾರತ್ ರೈಲುಗಳನ್ನು ಪರಿಚಯಿಸುವುದು ಸೇರಿದಂತೆ ಸೇವೆಗಳನ್ನು ವಿಸ್ತರಿಸಲು ಮತ್ತು ಆಧುನೀಕರಿಸಲು ವೈಷ್ಣವ್ ಹೊಸ ಯೋಜನೆ ಘೋಷಿಸಿದ್ದಾರೆ. ಮುಂದಿನ 2 ರಿಂದ 3 ವರ್ಷಗಳಲ್ಲಿ ಈ ರೈಲು ಸೇವೆಗಳು ಹಂತ ಹಂತವಾಗಿ ಜಾರಿಯಾಗಲಿದೆ. 

36

100 ಕಿಲೋಮೀಟರ್‌ಗಳವರೆಗಿನ ದೂರದಲ್ಲಿ ಸಂಚರಿಸುವ 50 ನಮೋ ಭಾರತ್ ಶಟಲ್ ರೈಲುಗಳನ್ನು ಪರಿಚಯಿಸುವುದು ಪ್ರಮುಖ ಘೋಷಣೆಯಾಗಿದೆ. ಹೆಚ್ಚುವರಿಯಾಗಿ, ವೈಷ್ಣವ್ 200 ಹೊಸ ವಂದೇ ಭಾರತ್ ರೈಲುಗಳನ್ನು ಮತ್ತು ರೈಲು ಜಾಲವನ್ನು ಹೆಚ್ಚಿಸುವ ಗುರಿಯನ್ನು ಘೋಷಿಸಿದ್ದಾರೆ. 100 ಅಮೃತ್ ಭಾರತ್ ರೈಲುಗಳನ್ನು ಪರಿಚಯಿಸುವ ಬಗ್ಗೆ ಹೇಳಿದ್ದಾರೆ.

46

ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಾಲಾ ಸೀತಾರಾಮ್ 2,52,000 ಕೋಟಿ ರೂಪಾಯಿ ಹಣವನ್ನು ರೈಲ್ವೇ ಸಚಿವಾಲಯಕ್ಕೆ ಮೀಸಲಿಡಲಾಗಿದೆ. ಈ ಕುರಿತು ಹರ್ಷ ವ್ಯಕ್ತಪಡಿಸಿದ ಅಶ್ವಿನಿ ವೈಷ್ಣವ್, ಕೇಂದ್ರ ಸರ್ಕಾರ ಭಾರತೀಯ ರೈಲ್ವೇ ಆಧುನೀಕರಣ ಹಾಗೂ ಹೆಚ್ಚುವರಿ ಸೇವೆಗೆ ಪ್ರಮುಖ ಆದ್ಯತೆ ನೀಡಿದೆ ಎಂದಿದ್ದಾರೆ. 

56

 ಹೊಸ ರೈಲುಗಳು ಮಧ್ಯಮ ಹಾಗೂ ಬಡ ಕುಟುಂಬಗಳ ಪ್ರಯಾಣಕ್ಕೆ ಅನುವು ಮಾಡಿಕೊಡಲಿದೆ. ಕೈಗೆಟುಕುವ ದರದಲ್ಲಿ ಹಾಗೂ ಪ್ರತಿಯೊಬ್ಬ ಪ್ರಯಾಣಿಕ ಆರಾಮವಾಗಿ ಪ್ರಯಾಣಿಸುವಂತೆ ಮಾಡುವುದು ಗುರಿಯಾಗಿದೆ. ಹೀಗಾಗಿ ಸುರಕ್ಷತೆ ಹಾಗೂ ಹೆಚ್ಚುವರಿ ರೈಲು ಸೇವೆಗಳ ಕುರಿತು ಯೋಜನೆಗಳು ಜಾರಿಯಲ್ಲಿದೆ ಎಂದಿದ್ದಾರೆ. 

66

ಕೇರಳದಲ್ಲಿ ರೈಲ್ವೆ ಅಭಿವೃದ್ಧಿಗಾಗಿ ₹ 3042 ಕೋಟಿ ಹಂಚಿಕೆ ಮಾಡುವುದಾಗಿ ಸಚಿವರು ವಿವರಿಸಿದರು. ಈ ಉಪಕ್ರಮದ ಭಾಗವಾಗಿ, 25 ರೈಲು ನಿಲ್ದಾಣಗಳನ್ನು ನವೀಕರಿಸಲಾಗಿದೆ ಮತ್ತು 14,000 ಹೊಸ ಬೋಗಿಗಳನ್ನು ತಯಾರಿಸಲಾಗಿದೆ. ನೀಲಾಂಬೂರ್-ನಂಜನಗೂಡು ಯೋಜನೆ ಪ್ರಗತಿಯಲ್ಲಿದೆ ಮತ್ತು ವಂದೇ ಭಾರತ್ ಸ್ಲೀಪರ್ ರೈಲುಗಳನ್ನು ಶೀಘ್ರದಲ್ಲೇ ಪರಿಚಯಿಸಲಾಗುವುದು ಎಂದು ತಿಳಿಸಿದರು.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories