ಒಂದು ವೇಳೆ ಭಾರತದಲ್ಲಿ ಗಂಗಾ ನದಿ ಇಲ್ಲದಿದ್ದರೆ ಏನಾಗುತ್ತಿತ್ತು?

Published : Feb 04, 2025, 04:31 PM IST

ಗಂಗಾ ನದಿ ಭಾರತದ ಪ್ರಮುಖ ನದಿಗಳಲ್ಲಿ ಒಂದಾಗಿದೆ. ಭಾರತದಲ್ಲಿ ಗಂಗೆ ಕೇವಲ ನದಿಯಲ್ಲ, ಕೋಟ್ಯಂತರ ಜನರ ನಂಬಿಕೆ, ಭಾರತೀಯ ನಾಗರಿಕತೆ ಮತ್ತು ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. 

PREV
16
ಒಂದು ವೇಳೆ ಭಾರತದಲ್ಲಿ ಗಂಗಾ ನದಿ ಇಲ್ಲದಿದ್ದರೆ ಏನಾಗುತ್ತಿತ್ತು?

ಭಾರತೀಯರು ನದಿಗಳನ್ನು ದೇವರು ಎಂದು ಪರಿಗಣಿಸಲಾಗುತ್ತದೆ. ಗಂಗಾ ನದಿಯಲ್ಲಿ ಒಮ್ಮೆಯಾದ್ರು ಮಿಂದೇಳ್ಬೇಕು ಅನ್ನೋದು ಪ್ರತಿಯೊಬ್ಬ ಹಿಂದೂವಿನ ಆಸೆ. ಗಂಗಾ ನದಿ ಭಾರತದ ಪ್ರಮುಖ ನದಿಗಳಲ್ಲಿ  ಒಂದಾಗಿದೆ.

26

ಭಾರತದಲ್ಲಿ ಗಂಗೆ ಕೇವಲ ನದಿಯಲ್ಲ. ಗಂಗಾ ನದಿ ಕೋಟ್ಯಂತರ ಜನರ ನಂಬಿಕೆ, ಭಾರತೀಯ ನಾಗರಿಕತೆ ಮತ್ತು ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಇಂದು ಗಂಗಾ ನದಿ ಲಕ್ಷಾಂತರ ಜನರ ಜೀವನ ಮತ್ತು ಜೀವನಾಧಾರವಾಗಿದೆ. ಭಾರತದಲ್ಲಿ ಗಂಗಾ ನದಿ ಇಲ್ಲದಿದ್ದರೆ ಏನಾಗುತ್ತಿತ್ತು ಎಂದು ಯೋಚನೆ ಮಾಡಿದ್ದೀರಾ? 

36

ಭಾರತದಲ್ಲಿ ಗಂಗಾ ನದಿ ಇಲ್ಲದಿದ್ದರೆ ಒಂದು ಭಾಗ ಮರಭೂಮಿ ಅಥವಾ ಬಂಜರು ಭೂಮಿಯಾಗುತ್ತಿತ್ತು. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಕುಡಿಯುವ ನೀರಿಗೆ  ಹಾಹಾಕಾರ ಉಂಟಾಗುತ್ತಿತ್ತು. ಇಂದು ಗಂಗಾ ನದಿ ಹಲವು ರಾಜ್ಯಗಳಿಗೆ ಕುಡಿಯುವ ನೀರಿನ ಮೂಲವಾಗಿದೆ. 

46

ಗಂಗಾ ನದಿಯಿಂದ ಕೇವಲ ಕೃಷಿ ಕ್ಷೇತ್ರ  ಅಭಿವೃದ್ಧಿಯಾಗಿಲ್ಲ. ನದಿಯಿಂದ ಜಲಸಾರಿಗೆ, ಮೀನುಗಾರಿಕೆ ಅಂತಹ ಉದ್ಯೋಗಗಳು ಸೃಷ್ಟಿಯಾಗಿವೆ. ಗಂಗಾನದಿಯಿಂದಲೇ ಹಲವರು ಬದುಕು ಕಟ್ಟಿಕೊಂಡಿದ್ದಾರೆ. ನದಿ ಇಲ್ಲದಿದ್ದರೆ ನಿರುದ್ಯೋಗ ಸೃಷ್ಟಿಯಾಗುತ್ತಿತ್ತು. 

56

ಗಂಗಾ ನದಿ ದಡದಲ್ಲಿರುವ ಮಣ್ಣು ಅತ್ಯಂತ ಫಲವತ್ತತೆಯಿಂದ ಕೂಡಿದೆ. ಗಂಗಾ ನದಿ ತೀರದ ಪ್ರದೇಶಗಳಲ್ಲಿ ಆಹಾರದ ಉತ್ಪಾದನೆಯಾಗುತ್ತಿದೆ. ಇಲ್ಲಿಯ ಕೃಷಿ ಸಂಪತ್ತುಭರಿತವಾಗಿದೆ. ಒಂದು ನದಿ ಇಲ್ಲದಿದ್ದರೆ ದೇಶ ಆಹಾರದ ಕೊರತೆಯನ್ನು ಎದುರಿಸುತ್ತಿತ್ತು. ಗಂಗಾ ನದಿಯಿಂದಾಗಿ ಸುತ್ತಲಿನ  ಪ್ರದೇಶದ ಅಂತರ್ಜಲ ಮಟ್ಟ ಸಹ ಹೆಚ್ಚಿದೆ. 

66

ಗಂಗಾ ನದಿಯಲ್ಲಿ ವಿವಿಧ ರೀತಿಯ ಜಲಚರಗಳು ಕಂಡುಬರುತ್ತವೆ. ಈ ನದಿ ಇಲ್ಲದಿದ್ದರೆ ಈ ಜೀವಿಗಳ ಅಸ್ತಿತ್ವಕ್ಕೆ ಅಪಾಯವಾಗುತ್ತಿತ್ತು. ಗಂಗಾ ನದಿಯ ದಡದಲ್ಲಿ ಕೋಟಿಗಟ್ಟಲೆ ಜನರು ವಾಸಿಸುತ್ತಿದ್ದಾರೆ. ಜಗತ್ತಿನ ಯಾವ ನದಿಯೂ ತನ್ನ ದಡದಲ್ಲಿ ಇಷ್ಟೊಂದು ಜನ ನೆಲೆಸಿಲ್ಲ. ಒಂದು ವೇಳೆ ನದಿ ಇಲ್ಲದಿದ್ದರೆ ಜಲಚರ ಸಂಕುಲ ಮತ್ತು ಜನರ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತಿತ್ತು.

Read more Photos on
click me!

Recommended Stories