ವಿಸಿಕೆ ಬೆಂಬಲ ಘೋಷಿಸಿದ ಬೆನ್ನಲ್ಲೇ ನಟ ವಿಜಯ್ ಅವರ ಟಿವಿಕೆ ಸರ್ಕಾರ ರಚನೆ ಹಾದಿ ಸುಗಮಗೊಂಡಿದೆ. ಆದರೆ ತಮಿಳುನಾಡು ರಾಜಕೀಯದಲ್ಲಿ ಮತ್ತೊಂದು ಟ್ವಿಸ್ಟ್ ಎದುರಾಗಿದೆ. ಇದೀಗ ಎಐಎಡಿಎಂಕೆಯ 30 ಬಂಡಾಯ ನಾಯಕರು ಇಪಿಎಸ್ ಮನೆಗೆ ದೌಡಾಯಿಸಿದ್ದಾರೆ.
ತಮಿಳುನಾಡು ರಾಜಕೀಯ ನಿರೀಕ್ಷೆಗೂ ಮೀರಿದ ತಿರುವು ಪಡೆದುಕೊಳ್ಳುತ್ತಿದೆ. ವಿಸಿಕೆ ಬೆಂಬಲ ಘೋಷಣೆ ಮಾಡಿದ ಬೆನ್ನಲ್ಲೇ ನಟ ವಿಜಯ್ ಜೊಸೆಫ್ ಅವರ ಟಿವಿಕೆ ಪಕ್ಷ ಸರ್ಕಾರ ರಚನೆಗೆ ರಾಜ್ಯಪಾಲ ಭೇಟಿಗೆ ಅವಕಾಶ ಕೇಳಿದೆ. ಸದ್ಯ 120 ಶಾಸಕರ ಬೆಂಬಲದೊಂದಿಗೆ ಟಿವಿಕೆ ಪಕ್ಷ ತಮಿಳುನಾಡಿನಲ್ಲಿ ಹೊಸ ಸರ್ಕಾರ ರಚನೆ ಮಾಡಲಿದೆ. ಆದರೆ ಇದೀಗ ಎಐಎಡಿಎಂಕೆ ಪಕ್ಷದಲ್ಲಿ ಭಾರಿ ಬಂಡಾಯ ಎದ್ದಿದೆ.
25
ತಮಿಳುನಾಡಿನಲ್ಲಿ ಬಂಡಾಯ ರಾಜಕೀಯ
ಎಐಎಡಿಎಂಕೆ ಪಕ್ಷದಲ್ಲಿ ದೊಡ್ಡ ಬಂಡಾಯ ಶುರುವಾಗಿದೆ. ಪಕ್ಷದ ಒಂದು ಬಣದ ಶಾಸಕರು ಪ್ರತ್ಯೇಕ ಸಭೆ ನಡೆಸುತ್ತಿದ್ದಾರೆ. ಇದರಿಂದ ಎಐಎಡಿಎಂಕೆ ಇಬ್ಭಾಗವಾಗುವ ಸಾಧ್ಯತೆ ದಟ್ಟವಾಗಿದೆ. ಮಾಜಿ ಸಚಿವರಾದ ಎಸ್.ಪಿ. ವೇಲುಮಣಿ, ಸಿ.ವಿ. ಷಣ್ಮುಗಂ ಮತ್ತು ವಿಜಯಭಾಸ್ಕರ್ ನೇತೃತ್ವದಲ್ಲಿ ಈ ಸಭೆ ನಡೆಯುತ್ತಿದೆ. ಸುಮಾರು 30ಕ್ಕೂ ಹೆಚ್ಚು ಶಾಸಕರು ಈ ಸಭೆಯಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಬಂಡಾಯ ಶಾಸಕರು ನಟ ವಿಜಯ್‌ಗೆ ಬೆಂಬಲ ನೀಡುವ ಕುರಿತು ಪಕ್ಷದಲ್ಲಿ ಇಬ್ಬಗೆ ಅಭಿಪ್ರಾಯ ವ್ಯಕ್ತವಾಗಿತ್ತು.
35
ಇಪಿಎಸ್ ಮನೆಗೆ ಶಾಸಕರ ದೌಡು
ಎಐಎಡಿಎಂಕೆ ಪಕ್ಷ ಎರಡು ಹೋಳಾಗುವ ಎಲ್ಲಾ ಸಾಧ್ಯತೆ ಇವೆ. ನಟ ವಿಜಯ್ ಆಗಮನದಿಂದ ಕಳೆದ 50 ವರ್ಷಗಳ ತಮಿಳುನಾಡು ರಾಜಕೀಯದಲ್ಲಿ ಹೊಸ ಬೆಳವಣಿಗೆಯಾಗಿದೆ. ಎಡಪ್ಪಾಡಿ ಕೆ ಪಳನಿಸ್ವಾಮಿ ನಿವಾಸಕ್ಕೆ ಒಂದು ಬಣದ ನಾಯಕರು ಆಗಮಿಸಿ ಸಭೆ ಸೇರಿದ್ದಾರೆ. 30 ಶಾಸಕರು ಇಪಿಎಸ್ ಮನೆಯಲ್ಲಿ ಸಭೆ ಸೇರಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ.
ಸರ್ಕಾರ ರಚಿಸಲು ತೀವ್ರ ಪ್ರಯತ್ನ ನಡೆಸುತ್ತಿದ್ದ ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ (ಇಪಿಎಸ್) ಮತ್ತು ಎಐಎಡಿಎಂಕೆ ತಮ್ಮ ಪ್ರಯತ್ನವನ್ನು ಕೈಬಿಟ್ಟಿದ್ದಾರೆ. ಶಾಸಕರೊಂದಿಗೆ ಮಹತ್ವದ ಚರ್ಚೆ ನಡೆಸಿದ ಬಳಿಕ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ. ತಾನು ಹೊಸ ಸರ್ಕಾರ ರಚಿಸುವುದಿಲ್ಲ ಮತ್ತು ಮುಖ್ಯಮಂತ್ರಿಯಾಗುವುದಿಲ್ಲ ಎಂದು ಇಪಿಎಸ್ 'ಎಕ್ಸ್' (X) ಖಾತೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಅಧಿಕಾರ ಹಿಡಿಯುವ ಎಲ್ಲಾ ದಾರಿಗಳು ಮುಚ್ಚಿಹೋದ ಕಾರಣ ಇಪಿಎಸ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿದೆ.
55
ನಟ ವಿಜಯ್ ಸರ್ಕಾರ
ಸರ್ಕಾರ ರಚನೆಯಲ್ಲಿ ರಾಜ್ಯಪಾಲರ ನಿಲುವು ನಿರ್ಣಾಯಕವಾಗಿದೆ. ಈ ಎಲ್ಲಾ ರಾಜಕೀಯ ಬೆಳವಣಿಗೆಗಳ ಮಧ್ಯೆ, ರಾಜ್ಯಪಾಲರು ಕೇರಳಕ್ಕೆ ವಿಮಾನ ಟಿಕೆಟ್ ಬುಕ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇತ್ತ, ಲೀಗ್ ಮತ್ತು ವಿಸಿಕೆ ಪಕ್ಷಗಳು ಟಿವಿಕೆಗೆ ಬೆಂಬಲ ಘೋಷಿಸಿರುವುದರಿಂದ, ನಟ ವಿಜಯ್ ಸರಳ ಬಹುಮತವನ್ನು ಖಚಿತಪಡಿಸಿಕೊಂಡಿದ್ದಾರೆ. ಎರಡೂ ಪಕ್ಷಗಳು ಬೇಷರತ್ ಬೆಂಬಲ ನೀಡುವುದಾಗಿ ತಮ್ಮ ಪತ್ರಗಳಲ್ಲಿ ತಿಳಿಸಿವೆ.
ನಟ ವಿಜಯ್ ಸರ್ಕಾರ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ