ದಳಪತಿ ವಿಜಯ್ 13 ವರ್ಷಗಳ ಸೇಡಿಗೆ ಸಿಎಂ ಆಗಿ ಪ್ರತೀಕಾರ; ಕೂರಲು ಅವಕಾಶ ಕೊಡದವರಿಂದ ಸೆಲ್ಯೂಟ್ ಹೊಡೆಸಿಕೊಂಡ ರಿಯಲ್ ಹೀರೋ

Published : May 10, 2026, 03:36 PM IST

ದಳಪತಿ ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ, 13 ವರ್ಷಗಳ ಹಿಂದೆ ನಡೆದ ಒಂದು ಅವಮಾನಕಾರಿ ಘಟನೆಯೇ ಅವರ ಈ ರಾಜಕೀಯ ಯಶಸ್ಸಿಗೆ ಸ್ಫೂರ್ತಿಯಾಗಿದೆ. ಅಂದು ಅವಮಾನಿಸಿದವರೇ ಇಂದು ಸೆಲ್ಯೂಟ್ ಹೊಡೆಯುವಂತೆ ಮಾಡಿ,  'ರಿಯಲ್ ಲೈಫ್ ಮಾಸ್ ಹೀರೋ' ಆಗಿ ಹೊರಹೊಮ್ಮಿದ್ದಾರೆ.

PREV
15
13 ವರ್ಷದ ಹಿಂದಿನ ನೋವಿಕ ಕಥೆ

ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಇಂದು ಹೊಸ ಅಧ್ಯಾಯವೊಂದು ಬರೆಯಲ್ಪಟ್ಟಿದೆ. ಚಿತ್ರರಂಗದಲ್ಲಿ 'ದಳಪತಿ'ಯಾಗಿ ಮೆರೆದ ನಟ ವಿಜಯ್, ಈಗ ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ ಅವರ ಈ ಯಶಸ್ಸಿನ ಹಿಂದೆ 13 ವರ್ಷಗಳ ಹಿಂದಿನ ಒಂದು ನೋವಿನ ಕಥೆಯಿದೆ. ಅಂದು ಅವಮಾನಿಸಿದವರೇ ಇಂದು ಸೆಲ್ಯೂಟ್ ಹೊಡೆಯುವಂತೆ ಮಾಡುವ ಮೂಲಕ ವಿಜಯ್‌ ತಮ್ಮ ಜೀವನದ ಅತಿದೊಡ್ಡ 'ರಿಯಲ್ ಲೈಫ್ ಮಾಸ್' ದೃಶ್ಯವನ್ನು ಸೃಷ್ಟಿಸಿದ್ದಾರೆ.

25
2013ರ ಆ ಕಹಿ ಘಟನೆ: ಏನಾಗಿತ್ತು ಅಂದು?

ಸಿನಿಮಾ ರಂಗದಲ್ಲಿ ವಿಜಯ್ ಬೆಳೆಯುತ್ತಿದ್ದ ಕಾಲದಲ್ಲಿ, 'ಈ ಮುಖ ನೋಡೋಕೆ ಯಾರು ಬರ್ತಾರೆ?' ಎಂದು ಹೀಯಾಳಿಸಿದವರೇ ಹೆಚ್ಚು. ಆದರೆ 2013ರಲ್ಲಿ ನಡೆದ ಒಂದು ಘಟನೆ ವಿಜಯ್ ಅಭಿಮಾನಿಗಳ ಮನಸ್ಸಿನಲ್ಲಿ ಮಾಯದ ಗಾಯವಾಗಿ ಉಳಿದಿತ್ತು. ಅದು ಭಾರತೀಯ ಚಿತ್ರರಂಗದ 100ನೇ ವರ್ಷದ ಸಂಭ್ರಮಾಚರಣೆಯ ಕಾರ್ಯಕ್ರಮ. ದಕ್ಷಿಣ ಭಾರತದ ಎಲ್ಲಾ ದಿಗ್ಗಜ ನಟರು ಅಲ್ಲಿ ನೆರೆದಿದ್ದರು. ಅಂದಿನ ಮುಖ್ಯಮಂತ್ರಿ ಜಯಲಲಿತಾ ಅವರೇ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದರು.

35
ಜನರ ನಡುವೆ ಹೋಗಿ ಕುಳಿತಿದ್ದ ವಿಜಯ್

ಆ ಸಮಾರಂಭದಲ್ಲಿ ವಿಜಯ್ ಅವರಿಗಿಂತ ಕಿರಿಯ ನಟರಿಗೆ ಮುಂಚೂಣಿ ಸಾಲಿನಲ್ಲಿ ಆಸನ ಕಾಯ್ದಿರಿಸಲಾಗಿತ್ತು. ಆದರೆ, ಸೂಪರ್‌ಸ್ಟಾರ್ ಪಟ್ಟದಲ್ಲಿದ್ದ ವಿಜಯ್‌ ಅವರಿಗೆ ಕೂರಲು ಸರಿಯಾದ ಸೀಟನ್ನೇ ನೀಡಿರಲಿಲ್ಲ. ಅನಿವಾರ್ಯವಾಗಿ ವಿಜಯ್ ಕೊನೆಯ ಸಾಲಿನಲ್ಲಿ ಜನರ ಗುಂಪಿನ ನಡುವೆ ಹೋಗಿ ಕುಳಿತುಕೊಳ್ಳಬೇಕಾಯಿತು. ಆವತ್ತು ವಿಜಯ್ ಅವರ ಬೆಂಬಲಕ್ಕೆ ನಿಂತ ನಟ ವಿಕ್ರಮ್ ಕೂಡ ಅವರ ಪಕ್ಕದಲ್ಲೇ ಹೋಗಿ ಕುಳಿತಿದ್ದರು. ಈ ಅವಮಾನದ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ವೈರಲ್ ಆಗುತ್ತಿದೆ.

45
ಸೇಡನ್ನು ತೀರಿಸಿಕೊಂಡ 'ರಿಯಲ್ ಹೀರೋ'

ಯಾವುದೇ ದೂರು ಅಥವಾ ಬೇಸರ ವ್ಯಕ್ತಪಡಿಸದೆ ಅಂದು ಜನರ ನಡುವೆ ಕುಳಿತಿದ್ದ ಅದೇ ವ್ಯಕ್ತಿ, ಇಂದು ಅದೇ ಆಯೋಜಕರು ಮತ್ತು 9 ಕೋಟಿ ಜನರನ್ನು ಆಳುವ ಮುಖ್ಯಮಂತ್ರಿಯಾಗಿ ಹೊರಹೊಮ್ಮಿದ್ದಾರೆ. ಅಂದು ಕೂರಲು ಸೀಟು ಕೊಡದವರ ಮುಂದೆ, ಇಂದು ತಾನೇ ರಾಜ್ಯದ ಅತ್ಯುನ್ನತ ಸ್ಥಾನದಲ್ಲಿ ಕುಳಿತು ರಾಜ್ಯಭಾರ ಮಾಡುವ ಮೂಲಕ ವಿಜಯ್ 'ಹಳೆಯ ಸೇಡು' ತೀರಿಸಿಕೊಂಡಿದ್ದಾರೆ.

ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

55
ಈತನೇ ನಿಜವಾದ ರಿಯಲ್ ಸ್ಟಾರ್

'ಇದಕ್ಕಿಂತ ದೊಡ್ಡ ರಿಯಲ್ ಲೈಫ್ ಮಾಸ್ ಸೀನ್ ಬೇರೆ ಇಲ್ಲ' ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಕೋಟ್ಯಂತರ ಸಂಭಾವನೆ ಮತ್ತು ಸ್ಟಾರ್‌ಡಮ್ ಬದಿಗಿಟ್ಟು ಜನರಿಗಾಗಿ ರಾಜಕೀಯಕ್ಕೆ ಬಂದ ವಿಜಯ್ ಅವರ ಈ ನಿರ್ಧಾರಕ್ಕೆ ಕನ್ನಡಿಗರು ಸೇರಿದಂತೆ ಇಡೀ ದಕ್ಷಿಣ ಭಾರತವೇ ಮೆಚ್ಚುಗೆ ಸೂಚಿಸುತ್ತಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories