10 ವರ್ಷ ಹಳೆಯದಾದ 30 ಟನ್‌ ತೂಕವಿರುವ ಕಬ್ಬಿಣದ ಸೇತುವೆಯೇ ರಾತ್ರೋರಾತ್ರಿ ಕಳ್ಳತನ

Published : Jan 25, 2026, 10:00 AM IST

Korba Iron bridge, water pipeline theft ಸ್ಥಳೀಯಾಡಳಿತವು 20-30 ಟನ್‌ ತೂಗುವ ಗಟ್ಟಿಮುಟ್ಟಾದ ಕಬ್ಬಿಣದ ಸೇತುವೆಯನ್ನು ಕಟ್ಟಿಸಿತ್ತು. ಶುಕ್ರವಾರ ರಾತ್ರಿವರೆಗೂ ಜನರು ಇದರ ಮೇಲೆ ಓಡಾಡಿದ್ದಾರೆ.

PREV
13
40 ವರ್ಷ ಹಳೆಯ ಕಬ್ಬಿಣದ ಸೇತುವೆ

ಕೋರ್ಬಾ: ವಾಹನ, ಆಭರಣ ಕಳ್ಳತನ ಸಾಮಾನ್ಯ. ಆದರೆ ಛತ್ತೀಸ್‌ಗಢದಲ್ಲಿ ಕಳ್ಳರು ಒಂದು ಹೆಜ್ಜೆ ಮುಂದಕ್ಕೆ ಹೋಗಿ 40 ವರ್ಷ ಹಳೆಯ ಕಬ್ಬಿಣದ ಸೇತುವೆಯನ್ನೇ ಕದ್ದೊಯ್ದಿದ್ದಾರೆ. ಕೋರ್ಬಾ ಜಿಲ್ಲೆಯಲ್ಲಿ ಈ ಐನಾತಿ ಕಳ್ಳತನ ನಡೆದಿದೆ.

23
30 ಟನ್‌ ತೂಗುವ ಗಟ್ಟಿಮುಟ್ಟಾದ ಕಬ್ಬಿಣದ ಸೇತುವೆ

40 ವರ್ಷಗಳ ಹಿಂದೆ ಜನರು ಸುಲಲಿತವಾಗಿ ಕಾಲುವೆ ದಾಟುವ ಸಲುವಾಗಿ ಸ್ಥಳೀಯಾಡಳಿತವು 20-30 ಟನ್‌ ತೂಗುವ ಗಟ್ಟಿಮುಟ್ಟಾದ ಕಬ್ಬಿಣದ ಸೇತುವೆಯನ್ನು ಕಟ್ಟಿಸಿತ್ತು. ಶುಕ್ರವಾರ ರಾತ್ರಿವರೆಗೂ ಜನರು ಇದರ ಮೇಲೆ ಓಡಾಡಿದ್ದಾರೆ.

33
ಕಳ್ಳರ ಗುರುತು ಪತ್ತೆಯಾಗಿಲ್ಲ.

ಮುಂಜಾನೆ ನೋಡಿದರೆ, ಸೇತುವೆಯೇ ಇಲ್ಲ. ಇದರೊಂದಿಗೆ ನೀರಿನ ಪೈಪ್‌ಲೈನ್‌ಗೆ ಬಳಸಿದ್ದ ಕಬ್ಬಿಣವೂ ಕಾಣೆ. ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಕಳ್ಳರು ಗ್ಯಾಸ್‌ ಕಟರ್‌ ಬಳಸಿ ಸೇತುವೆಯನ್ನು ತುಂಡರಿಸಿದ್ದು ಈ ವೇಳೆ ಗೊತ್ತಾಗಿದೆ. ಎಲ್ಲ ಗುಜರಿ ಅಂಗಡಿಗಳಿಗೂ ತೆರಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆದರೆ ಈವರೆಗೆ ಕಳ್ಳರ ಗುರುತು ಪತ್ತೆಯಾಗಿಲ್ಲ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories