VHP ಮುಖಂಡನ ಮೇಲೆ ಹಲ್ಲೆ: ಹಿಂಸೆ, ಉದ್ವಿಗ್ನ ಪರಿಸ್ಥಿತಿ; ಹೊತ್ತಿ ಉರಿದ ತರಾನಾ ಪಟ್ಟಣ!

Published : Jan 25, 2026, 09:41 AM IST

ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ತರಾನಾ ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್‌ನ ಯುವ ಮುಖಂಡನ ಮೇಲೆ ಹಲ್ಲೆ ನಡೆದ ನಂತರ ಕೋಮು ಹಿಂಸಾಚಾರ ಭುಗಿಲೆದ್ದಿದೆ. ಎರಡು ಗುಂಪುಗಳ ನಡುವಿನ ಈ ಸಂಘರ್ಷದಲ್ಲಿ ವಾಹನಗಳು ಮತ್ತು ಮನೆಗಳ ಮೇಲೆ ಕಲ್ಲುತೂರಾಟ ನಡೆದು, ವ್ಯಾಪಕ ವಿಧ್ವಂಸಕ ಕೃತ್ಯಗಳು ವರದಿಯಾಗಿವೆ. 

PREV
14
ವಿಶ್ವ ಹಿಂದೂ ಪರಿಷತ್‌ನ ಯುವ ಮುಖಂಡರೊಬ್ಬರ ಮೇಲೆ ಹಲ್ಲೆ

ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ತರಾನಾ ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್‌ನ ಯುವ ಮುಖಂಡರೊಬ್ಬರ ಮೇಲೆ ಹಲ್ಲೆ ನಡೆದ ಬೆನ್ನಲ್ಲೇ ತೀವ್ರ ಕೋಮು ಹಿಂಸಾಚಾರ ಸಂಭವಿಸಿದೆ. 2 ದಿನಗಳ ಕಾಲ ನಗರದಲ್ಲಿ ವ್ಯಾಪಕ ವಿಧ್ವಂಸಕ ಕೃತ್ಯಗಳು ನಡೆದಿದ್ದು, ವಾಹನಗಳು ಮತ್ತು ಮನೆಗಳ ಮೇಲೆ ಕಲ್ಲುತೂರಾಟ ವರದಿಯಾಗಿದೆ.

24
2 ಗುಂಪುಗಳ ನಡುವೆ ಸಂಘರ್ಷ

ಉಜ್ಜಯಿನಿಯು ಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ. ಮೋಹನ್ ಯಾದವ್ ಅವರ ತವರು ಜಿಲ್ಲೆಯಾಗಿರುವುದರಿಂದ ಈ ಘಟನೆ ಹೆಚ್ಚು ಸೂಕ್ಷ್ಮತೆ ಪಡೆದುಕೊಂಡಿದೆ. ಗುರುವಾರ ರಾತ್ರಿ ವಿಎಚ್‌ಪಿ ಮುಖಂಡ ಸೋಹಲ್‌ ಠಾಕೂರ್ ಬುಂದೇಲಾ ಮೇಲೆ ಮುಸ್ಲಿಂ ಯುವಕರ ಗುಂಪು ಹಲ್ಲೆ ನಡೆಸಿತ್ತು. ಅಲ್ಲಿಂದ 2 ಗುಂಪುಗಳ ನಡುವೆ ಸಂಘರ್ಷ ಆರಂಭವಾಗಿದೆ

34
ಶುಕ್ರವಾರ ಪ್ರಾರ್ಥನೆ ಬಳಿಕ ಮತ್ತೆ ಸಂಘರ್ಷ

ಕಿಡಿಗೇಡಿಗಳು ರಸ್ತೆಗಳಿದು ಕಲ್ಲುತೂರಾಟ ನಡೆಸಿ ಮೂಲಸೌಕರ್ಯಗಳ ಧ್ವಂಸದಲ್ಲಿ ತೊಡಗಿದ್ದಾರೆ. ಬಸ್‌ ಸ್ಟಾಂಡ್‌ನಲ್ಲಿದ್ದ ಕನಿಷ್ಠ 13 ಬಸ್‌ಗಳು ಮತ್ತು ಹಲವು ಬೈಕ್‌ಗಳಿಗೆ ಹಾನಿ ಮಾಡಿದ್ದಾರೆ. ನಂತರ ಪೊಲೀಸರು ಧಾವಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

ಶುಕ್ರವಾರ ಪ್ರಾರ್ಥನೆ ಬಳಿಕ ಮತ್ತೆ ಸಂಘರ್ಷ ಗರಿಗೆದರಿದೆ. ಶಸ್ತ್ರಸಜ್ಜಿತರಾಗಿ ಬಂದ ಎರಡೂ ಬಣಗಳವರು ಪರಸ್ಪರರ ಮೇಲೆ ದಾಳಿ ನಡೆಸಿದ್ದಾರೆ. ಮನೆಗಳು, ಅಂಗಡಿಗಳು ಮತ್ತು ವಾಹನಗಳಿಗೂ ಹಾನಿ ಮಾಡಿದ್ದಾರೆ.

44
ಪ್ರತಿಭಟನೆ

ಈ ನಡುವೆ, ಠಾಕೂರ್‌ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ ಬಂಧಿತರನ್ನು ಸಾರ್ವಜನಿಕವಾಗಿ ಮೆರವಣಿಗೆ ಮಾಡಬೇಕೆಂದು ಆಗ್ರಹಿಸಿ ಠಾಕೂರ್‌ ಪರ ಗುಂಪು ತರಾನಾ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿದೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories