ಸೇನಾ ದಿನಾಚರಣೆ ಪ್ರಯುಕ್ತ ಹಳ್ಳಿ ಕ್ರೀಡೆ ಆಯೋಜನೆ; ಕುಣಿದು ಕುಪ್ಪಳಿಸಿದ ಕಾಶ್ಮೀರಿಗರು!

First Published Jan 14, 2021, 9:53 PM IST

ಸೇನಾ ದಿನಾಚರಣೆ ಅಂಗವಾಗಿ 15 ರಾಷ್ಟ್ರೀಯ ರೈಫಲ್ಸ್‌ನಿಂದ ಉತ್ತರ ಕಾಶ್ಮೀರದಲ್ಲಿ ಹಳ್ಳಿ ಕ್ರೀಡೆ ಆಯೋಜಿಸಲಾಗಿತ್ತು. ವಿಶೇಷ ಅಂದರೆ ಈ ಹಳ್ಳಿ ಸೊಗಡಿನ ಕ್ರೀಡೆಯಲ್ಲಿ 1,500ಕ್ಕೂ ಹೆಚ್ಚಿನ ಸ್ಥಳೀಯರು ಪಾಲ್ಗೊಂಡಿದ್ದರು. ಈ ಮೂಲಕ ಸೇನೆ ಕಾಶ್ಮೀರದಲ್ಲಿ ಸ್ಥಳೀಯರು ಹಾಗೂ ಸೇನೆ ಜೊತೆಗಿನ ಬಾಂಧವ್ಯಕ್ಕೆ ಹೊಸ ಮುನ್ನುಡಿ ಬರೆದಿದೆ. 

ಕಾಶ್ಮೀರದಲ್ಲಿ ಸೇನೆ ಹಾಗೂ ಸ್ಥಳೀಯರ ನಡುವಿನ ಬಾಂಧವ್ಯ ವೃದ್ಧಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕಳೆದ ಹಲವು ವರ್ಷಗಳಿಂದ ಇದು ನಡೆದುಕೊಂಡು ಬಂದಿದೆ. ಆದರೆ ಇದೀಗ ಸೇನಾ ಕಾರ್ಯಕ್ರಮಗಳಿಗೆ ಸ್ಥಳೀಯರಿಂದ ಹೆಚ್ಚಿನ ಸ್ಪಂದನೆ ಸಿಗುತ್ತಿದೆ.
undefined
ಸೇನಾ ದಿನಾಚರಣೆ ಪ್ರಯುಕ್ತ 15 ರಾಷ್ಟ್ರೀಯ ರೈಫಲ್ಸ್ ಬೆಟಾಲಿಯನ್ ವಿಲಿಗಂ ವಿಲೇಜ್ ಗೇಮ್ಸ್ ಫೆಸ್ಟಿವಲ್ 2021 ಕ್ರೀಡಾಕೂಟ ಆಯೋಜಿಸಿತ್ತು. ಈ ಕ್ರೀಡಾಕೂಟದಲ್ಲಿ 1,500ಕ್ಕೂ ಹೆಚ್ಚಿನ ಕಾಶ್ಮೀರಿಗರು ಪಾಲ್ಗೊಂಡಿದ್ದರು.
undefined
ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಕ್ರೀಡಾಕೂಟ ಆಯೋಜಿಸಲಾಗಿತ್ತು. ರಜವಾರ, ರಾಮ್‌ಹಲ್, ಮಗಮ್ ಹಳ್ಳಿಗಳಿಂದ ಕಾಶ್ಮೀರು ಈ ಕ್ರೀಡೆಯಲ್ಲಿ ಪಾಲ್ಗೊಂಡಿದ್ದರು. ವಿಶೇಷ ಅಂದರೆ ಆಶಾ ಕಾರ್ಯಕರ್ತೆಯರು ಈ ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು.
undefined
ಕಮಾಂಡರ್ 8 ಸೆಕ್ಟರ್, ಬ್ರಿಗೇಡಿಯರ್ ನೀರಜ್ ಶರ್ಮಾ ಈ ಕ್ರೀಡಾಕೂಟ ಉದ್ಘಾನೆ ಮಾಡಿದರು. ಹಗ್ಗ ಜಗ್ಗಾಟ, ಚಮಚ ಬಾಯಲ್ಲಿ ಹಿಡಿದು ಓಟ, ಆರ್ಮ್ ರಸ್ಲಿಂಗ್, ಕರಾಟೆ ಸೇರಿದಂತೆ 21 ಹಳ್ಳಿ ಕ್ರೀಡೆಯನ್ನು ಆಯೋಜಿಸಲಾಗಿತ್ತು.
undefined
ಈ ಕ್ರೀಡಾಕೂಟ ಕಾರ್ಯಕ್ರಮಲ್ಲಿ ಕೊರೋನಾ ವಾರಿಯರ್ಸ್‌ಗೆ ಸನ್ಮಾನ ಮಾಡಲಾಯಿತು. ತಮ್ಮ ನಿಸ್ವಾರ್ಥ ಸೇವೆಯನ್ನು ಗೌರವಿಸಲು ಸೇನೆ ಅತ್ಯಂತ ಪ್ರೀತಿಯಿಂದ ಆಶಾ ಕಾರ್ಯಕರ್ತೆಯರಿಗೆ ಸನ್ಮಾನ ಮಾಡಿತು.
undefined
ಹಳ್ಳಿ ಕ್ರೀಡಾ ಕೂಟ ಹಾಗೂ ಮನರಂಜನಾ ಕಾರ್ಯಕ್ರಮದಲ್ಲಿ ಮತ್ತೊಂದು ಕಾರ್ಯವನ್ನು ಸೇನೆ ಮಾಡಿತು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಲು NEET, IIT ಹಾಗೂ NDA ಪರೀಕ್ಷೆ ಬರೆಯುವ ಯುವಕರಿಗೆ ಪುಸ್ತಗಳನ್ನು ವಿತರಿಸಲಾಯಿತು.
undefined
ವಿಲೇಜ್ ಗೇಮ್ಸ್ ಕ್ರೀಡಾ ಕೂಟದ ಜೊತೆಗೆ ಸ್ಥಳೀಯರಿಗೆ ಮೆಡಿಕಲ್ ಕ್ಯಾಂಪ್ ಕೂಡ ಆಯೋಜಿಸಲಾಗಿತ್ತು. ಈ ಮೂಲಕ ಉಚಿತ ಆರೋಗ್ಯ ತಪಾಸಣೆಯನ್ನು ಸೇನೆ ನೀಡಿತು.
undefined
ಕಾರ್ಯಕ್ರಮದಲ್ಲಿ ಮಾಜಿ ಸೈನಿಕರು, ಯುದ್ಧ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಿ ತ್ಯಾಗ ಬಲಿದಾನಕ್ಕೆ ಗೌರವ ನೀಡಿದರು. ಬಳಿಕ ಕ್ರೀಡಾ ಕೂಟ ಆರಂಭಿಸಲಾಗಿತ್ತು
undefined
click me!