210 ರೂ.ನಲ್ಲಿ ಕೋವಿಶೀಲ್ಡ್ ಲಸಿಕೆ ಲಭ್ಯ; ಕೇಂದ್ರದಿಂದ ಮಹತ್ವದ ನಿರ್ಧಾರ!

First Published Jan 11, 2021, 8:14 PM IST

ಕೊರೋನಾ ಲಸಿಕೆ ವಿತರಣೆ ಕುರಿತು ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದ್ದಾರೆ. ಜನವರಿ 16 ರಿಂದ ಲಸಿಕೆ ಎಲ್ಲಾ ರಾಜ್ಯಗಳಲ್ಲಿ ಲಭ್ಯವಾಗಲಿದೆ. ಇದೀಗ ಕೋವಿಶೀಲ್ಡ್ ಲಸಿಕೆಗೆ ಬೆಲೆ ಕೂಡ ನಿಗದಿ ಮಾಡಲಾಗಿದೆ. 210 ರೂಪಾಯಿಗಳಲ್ಲಿ ಲಸಿಕೆ ಸಿಗಲಿದೆ.

ಕೊರೋನಾ ವೈರಸ್ ವಿರುದ್ಧ ತುರ್ತು ಬಳಕೆಗೆ ಭಾರತದಲ್ಲಿ ಕೋವಿಶೀಲ್ಡ್ ಹಾಗೂ ಕೋವಾಕ್ಸಿನ್ ಲಸಿಕೆಗೆ ಭಾರತೀಯ ಡ್ರಗ್ ನಿಯಂತ್ರಕ ಮಂಡಳಿ ಅನುಮತಿ ನೀಡಲಾಗಿದೆ.
undefined
ಜನವರಿ 16 ರಿಂದ ಲಸಿಕೆ ವಿತರಣೆ ಆರಂಭಗೊಳ್ಳಲಿದೆ. ಇದಕ್ಕಾಗಿ ಇಂದು ಪ್ರಧಾನಿ ನರೇಂದ ಮೋದಿ ಎಲ್ಲಾ ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿ ಮಹತ್ವದ ಸೂಚನೆ ನೀಡಿದ್ದಾರೆ.
undefined
ಇದೀಗ ಪುಣೆಯ ಸೆರಂ ಸಂಸ್ಥೆ ಅಭಿವೃದ್ಧಿ ಪಡಿಸಿರುವ ಕೋವೀಶೀಲ್ಡ್ ಲಸಿಕೆಗೆ ದರ ನಿಗದಿ ಮಾಡಲಾಗಿದೆ. ಕೋವಿಶೀಲ್ಡ್ ಲಸಿಕೆಗೆ 200 ರೂಪಾಯಿ ನಿಗದಿ ಮಾಡಲಾಗಿದೆ.
undefined
ಕೋವಿಶೀಲ್ಡ್‌ಗೆ 200 ರೂಪಾಯಿಗಳಾಗಿದ್ದರೆ, ಇನ್ನು 10 ರೂಪಾಯಿ ಜಿಎಸ್‌ಟಿ ಸೇರಿಕೊಳ್ಳಲಿದೆ. ಹೀಗಾಗಿ ಕೋವಿಶೀಲ್ಡ್ ಲಸಿಕೆ ಒಟ್ಟು ದರ 210 ರೂಪಾಯಿ.
undefined
ಪುಣೆಯ ಸೆರಂ ಸಂಸ್ಥೆಯಿಂದ ಕೇಂದ್ರ ಸರ್ಕಾರ ಈಗಾಗಲೇ 11 ಮಿಲಿಯನ್ ಕೊರೋನಾ ಲಸಿಕೆಯನ್ನು ಖರೀದಿಸಿದೆ. ಇನ್ನು ಭಾರತ್ ಬಯೋಟೆಕ್ ಸಂಸ್ಥೆಯ ಕೋವಾಕ್ಸಿನ್ ಲಸಿಕೆಯನ್ನು ಶೀಘ್ರದಲ್ಲೇ ಕೇಂದ್ರ ಖರೀದಿಸಲಿದೆ.
undefined
ಪ್ರತಿ ರಾಜ್ಯಗಳ ಕೊರೋನಾ ಲಸಿಕೆ ಶೇಖರಿಸಿಡಲು, ಆಯಾ ಜಿಲ್ಲೆಗಳಿಗೆ ರವಾನೆ ಮಾಡಲು ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳು ಭರ್ಜರಿ ತಯಾರಿ ಮಾಡಿಕೊಂಡಿದೆ.
undefined
ಭಾರತದ ಕೊರೋನಾ ಲಸಿಕೆ ವಿಶ್ವಾಸಾರ್ಹ ಎಂದು ಚೀನಾ ಹೇಳಿದೆ. ವಿಶ್ವದಲ್ಲಿ ಅತೀ ದೊಡ್ಡ ಔಷಧ ಉತ್ಪಾದನೆಗೆ ಭಾರತ ಪಾತ್ರವಾಗಿದೆ ಎಂದು ಚೀನಾ ಹೇಳಿದೆ.
undefined
ಕೊರೋನಾ ಲಸಿಕೆಗೆ ಅನುಮತಿ ಕುರುತಿ ಕಾಂಗ್ರೆಸ್ ಸೇರಿದಂತೆ ಕೆಲ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಆದರೆ ಚೀನಾ ಭಾರತದ ಲಸಿಕೆ ಬೆಸ್ಟ್ ಎಂದು ಸರ್ಟಿಫಿಕೇಟ್ ನೀಡಿದೆ
undefined
click me!