ಗಣರಾಜ್ಯೋತ್ಸವಕ್ಕೆ ಅತಿಥಿ ಯಾರು? 55 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಮಹತ್ವದ ನಿರ್ಧಾರ!

First Published Jan 14, 2021, 8:47 PM IST

ಜನವರಿ 26 ರಂದು ಆಚರಿಸಲಾಗುವ ಗಣರಾಜ್ಯೋತ್ಸವ ದಿನಾಚರಣೆಗೆ ಪ್ರತಿ ವರ್ಷ ವಿದೇಶಿ ಗಣ್ಯರು ಅತಿಥಿಗಳಾಗಿ ಪಾಲ್ಗೊಂಡಿದ್ದಾರೆ. ಭಾರತ ಗಣತಂತ್ರವಾದ  ಬಳಿಕ ಇದೇ ಮೊದಲ ಬಾರಿಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
 

ಜನವರಿ 26ರಂದು ಗಣರಾಜ್ಯೋತ್ಸವ ದಿನಾಚರಣೆಗೆ ಕೇಂದ್ರ ಸರ್ಕಾರ ಎಲ್ಲಾ ತಯಾರಿ ಮಾಡಿಕೊಂಡಿದೆ. ಇತ್ತ ಅತಿಥಿ ಯಾರು ಅನ್ನೋದಕ್ಕೂ ಸ್ಪಷ್ಟೆ ನೀಡಿದೆ.
undefined
ಈ ಬಾರಿಯ ಗಣರಾಜ್ಯೋತವಕ್ಕೆ ಬ್ರಿಟೀಷ್ ಪ್ರಧಾನಿ ಬೋರಿಸ್ ಜಾನ್ಸನ್ ಅವರನ್ನು ಆಹ್ವಾನಿಸಲಾಗಿತ್ತು. ಆದರೆ ರೂಪಂತಾರ ಕೊರೋನಾ ವೈರಸ್ ಕಾರಣ ಬೊರಿಸ್ ಜಾನ್ಸನ್ ಆಗಮಿಸುತ್ತಿಲ್ಲ. ಈಗಾಗಲೇ ಈ ಕುರಿತು ಜಾನ್ಸನ್ ಮೋದಿ ಜೊತೆ ಮಾತುಕತೆ ನಡೆಸಿದ್ದಾರೆ
undefined
ಜಾನ್ಸನ್ ಬದಲು ಇತರ ಗಣ್ಯ ವ್ಯಕ್ತಿಗಳನ್ನು ಆಹ್ವಾನಿಸುವ ಕುರಿತು ಕೇಂದ್ರ ಸರ್ಕಾರ ಸಭೆ ನಡೆಸಿ ಇದೀಗ ನಿರ್ಧಾರ ಪ್ರಕಟಿಸಿದೆ. 55 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಯಾವುದೇ ವಿದೇಶಿ ಅತಿಥಿಗಳಲ್ಲದೆ ನಡೆಯಲಿದೆ.
undefined
ಭಾರತ ವಿದೇಶಾಂಗ ಸಚಿವಾಲಯ ವಕ್ತಾರ ಅನುರಾಗ್ ಶ್ರೀವತ್ಸವ್ ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಯಾವುದೇ ವಿದೇಶಿ ಅತಿಥಿಗಳಲ್ಲಿದೆ ಈ ಬಾರಿಯ ಗಣರಾಜ್ಯೋತ್ಸವ ದಿನಾಚರಣೆ ನಡೆಯಲಿದೆ ಎಂದಿದ್ದಾರೆ.
undefined
1966ರ ಬಳಿಕ ಪ್ರತಿ ವರ್ಷ ಭಾರತ ಸರ್ಕಾರ ಗಣರಾಜ್ಯೋತ್ಸವ ದಿನಾಚರಣೆಗೆ ಒಬ್ಬ ವಿದೇಶಿ ಅತಿಥಿಗಳನ್ನು ಆಹ್ವಾನಿಸಿದೆ. ಭಾರತ ಆಹ್ವಾನಿಸಿದ ಎಲ್ಲಾ ಗಣ್ಯ ವ್ಯಕ್ತಿಗಳ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡಿದ್ದಾರೆ.
undefined
1966ರ ಗಣರಾಜ್ಯೋತ್ಸವ ದಿನಾಚರಣೆ ಯಾವುದೇ ವಿದೇಶಿ ಅತಿಥಿಗಳಲ್ಲದೆ ಆಚರಿಸಲಾಗಿದೆ. ಕಾರಣ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅಕಾಲಿಕ ನಿಧನ ಕಾರಣ ಯಾರಿಗೂ ಆಹ್ವಾನ ಕಳುಹಿಸಲಿಲ್ಲ.
undefined
ಲಾಲ್ ಬದ್ದೂರ್ ಶಾಸ್ತ್ರಿ ನಿಧನ ಬಳಿಕ ರಾಜಕೀಯದಲ್ಲಿ ಹಲವು ಕ್ಷಿಪ್ರ ಬೆಳವಣಿಗೆಗಳು ನಡೆದಿತ್ತು. ಜನವರಿ 24 ರಂದು ಇಂದಿರಾ ಗಾಂಧಿ ಪ್ರಧಾನಿಯಾಗಿ ಪ್ರಮಾಣವ ವಚನ ಸ್ವೀಕರಿಸಿದ್ದರು.
undefined
ಗಣರಾಜ್ಯೋತ್ಸವ ದಿನಾಚರಣೆಗೆ 2 ದಿನ ಮೊದಲು ಇಂಧಿರಾ ಗಾಂಧಿ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಹೀಗಾಗಿ ಯಾವ ವಿದೇಶಿ ಅತಿಥಿಗೂ ಆಹ್ವಾನ ನೀಡಲು ಸಾಧ್ಯವಾಗಿಲ್ಲ.
undefined
click me!