ಆಸೀಸ್‌ನಲ್ಲಿ ಪಾತ್ರೆ ತೊಳೆಯುತ್ತಿದ್ದೆವು.! ಪಾಕಿಸ್ತಾನ ಹಾಕಿ ಅವ್ಯವಸ್ಥೆ ಬಿಚ್ಚಿಟ್ಟ ನಾಯಕನಿಗೆ 2 ವರ್ಷ ಬ್ಯಾನ್!

Published : Feb 20, 2026, 03:14 PM IST

ಕರಾಚಿ: ಪಾಕಿಸ್ತಾನ ಹಾಕಿ ಫೆಡರೇಷನ್‌ನ ಅವ್ಯವಸ್ಥೆಯ ಬಗ್ಗೆ ಬಹಿರಂಗವಾಇ ಮಾತನಾಡಿದ್ದ ಪಾಕಿಸ್ತಾನದ ನಾಯಕನ ಮೇಲೆ ಪಾಕ್ ಹಾಕಿ ಫೆಡರೇಷನ್ ಎರಡು ವರ್ಷ ಬ್ಯಾನ್ ಮಾಡಿದೆ. ಇದರ ಬೆನ್ನಲ್ಲೇ ಪಾಕಿಸ್ತಾನ ಹಾಕಿ ಫೆಡರೇಷನ್ ಅಧ್ಯಕ್ಷ ಹುದ್ದೆಗೆ ತಾರಿಖ್ ಬುಗ್ತಿ ಕೂಡಾ ರಾಜೀನಾಮೆ ಸಲ್ಲಿಸಿದ್ದಾರೆ. 

PREV
16
ಪಾಕ್ ಹಾಕಿ ನಾಯಕ ಎರಡು ವರ್ಷ ಬ್ಯಾನ್

ಬುಧವಾರವಷ್ಟೇ ಪಾಕಿಸ್ತಾನ ಹಾಕಿ ತಂಡದ ಅವ್ಯವಸ್ಥೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದ ನಾಯಕ ಶಕೀಲ್‌ ಅಹ್ಮದ್‌ಗೆ ಪಾಕ್‌ ಹಾಕಿ ಫೆಡರೇಷನ್‌(ಪಿಎಚ್‌ಎಫ್‌) 2 ವರ್ಷ ನಿಷೇಧ ಶಿಕ್ಷೆ ವಿಧಿಸಿದೆ. ಈ ಆದೇಶ ಹೊರಡಿಸಿದ ಪಿಎಚ್‌ಎಫ್‌ ಅಧ್ಯಕ್ಷ ತಾರಿಖ್‌ ಬುಗ್ತಿ ಕೂಡ ಬಳಿಕ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

26
ಹೋಟೆಲ್ ಬಿಲ್ ಪಾವತಿಸಲಾಗದೇ ಪಾತ್ರೆ ತೊಳೆದ ಪಾಕ್ ಹಾಕಿ ಆಟಗಾರರು

ಆಸ್ಟ್ರೇಲಿಯಾದಲ್ಲಿ ಪ್ರೊ ಲೀಗ್‌ ಆಡಲು ತೆರಳಿದ್ದ ವೇಳೆ ತಮಗಾದ ಕಹಿ ಅನುಭವದ ಬಗ್ಗೆ ಶಕೀಲ್‌ ಬಹಿರಂಗವಾಗಿಯೇ ಮಾತನಾಡಿದ್ದರು. ತಾವು ಆಸೀಸ್ ಪ್ರವಾಸ ಕೈಗೊಂಡಾಗ ಹೋಟೆಲ್ ಬಿಲ್ ಪಾವತಿಸಲು ಹಣವಿಲ್ಲದೇ ಪಾತ್ರೆ ತೊಳೆದಿದ್ದೆವು ಎಂದು ಬಹಿರಂಗವಾಗಿ ತಮ್ಮ ನೋವು ನೋಡಿಕೊಂಡಿದ್ದರು.

36
ಕಳೆದ ಬುಧವಾರ ಲಾಹೋರ್‌ಗೆ ಬಂದಿಳಿದ ಪಾಕಿಸ್ತಾನ ಹಾಕಿ ತಂಡ

ಆಸ್ಟ್ರೇಲಿಯಾ ಪ್ರವಾಸ ಮುಗಿಸಿಕೊಂಡ ಪಾಕಿಸ್ತಾನ ಹಾಕಿ ತಂಡವು ಕಳೆದ ಬುಧವಾರವಷ್ಟೇ ಪಾಕಿಸ್ತಾನದ ಲಾಹೋರ್‌ ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನ ಹಾಕಿ ಫೆಡರೇಷನ್ ವಿರುದ್ದ ಅಸಮಾಧಾನ ಹೊರಹಾಕಿದ್ದರು.

46
ಅಸಮಾಧಾನ ಹೊರಹಾಕಿದ ಪಾಕಿಸ್ತಾನ ನಾಯಕ

ನಾವು ಮ್ಯಾಚ್ ಆಡುವ ಮುನ್ನ ಹೋಟೆಲ್‌ನ ಕಿಚನ್ ಕ್ಲೀನ್ ಮಾಡಬೇಕಾಗಿತ್ತು. ಪಾತ್ರೆ ತೊಳೆಯಬೇಕಾಗಿತ್ತು. ಆಸೀಸ್ ಪ್ರವಾಸದಲ್ಲಿ ನಾವು ಇಂತಹ ಸ್ಥಿತಿ ಎದುರಿಸುತ್ತೇವೆ ಎಂದು ನಿರೀಕ್ಷಿಸಿರಲಿಲ್ಲ. ಇಂತಹ ಮ್ಯಾನೇಜ್‌ಮೆಂಟ್ ಜತೆ ಕೆಲಸ ಮಾಡಲು ಸಾಧ್ಯವೇ ಇಲ್ಲ ಎಂದು ಪಾಕಿಸ್ತಾನ ಹಾಕಿ ತಂಡದ ನಾಯಕ ಶಕೀಲ್ ಬಟ್ ಅಸಮಾಧಾನ ಹೊರಹಾಕಿದ್ದರು.

56
ಬೀದಿಯಲ್ಲಿ ಅಲೆದಾಡುವಂತಾಗಿದ್ದ ಪಾಕ್ ಆಟಗಾರರ ಪರಿಸ್ಥಿತಿ

ಪಾಕಿಸ್ತಾನದ ಮಿಸ್‌ ಮ್ಯಾನೇಜ್‌ಮೆಂಟ್‌ನಿಂದಾಗಿ ಪಾಕಿಸ್ತಾನ ಹಾಕಿ ಆಟಗಾರರು ರಸ್ತೆಯಲ್ಲೇ ಅಲೆದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದಷ್ಟೇ ಅಲ್ಲದೇ ಕಳಪೆ ಹೋಟೆಲ್‌ನಲ್ಲಿ ಆಟಗಾರರು ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಪಾಕ್ ಆಟಗಾರರು ಸೂಕ್ತ ವ್ಯವಸ್ಥೆ ಇಲ್ಲದೇ ಆಸ್ಟ್ರೇಲಿಯಾ ಹಾಗೂ ಜರ್ಮನಿ ಎದುರಿನ ಹಾಕಿ ಪಂದ್ಯಗಳಲ್ಲಿ ಹೀನಾಯ ಸೋಲು ಅನುಭವಿಸಿ ತವರಿಗೆ ವಾಪಾಸ್ಸಾಗಿದ್ದರು.

66
ಹಾಕಿ ಫೆಡರೇಷನ್‌ ಅಧ್ಯಕ್ಷ ಸ್ಥಾನಕ್ಕೆ ತಾರಿಖ್ ಗುಡ್‌ ಬೈ

ಈ ಬೆನ್ನಲ್ಲೇ ತಾರಿಖ್‌, ಪಾಕ್‌ಗೆ ಅಪಖ್ಯಾತಿ ತಂದಿದ್ದಕ್ಕಾಗಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಪಂದ್ಯಗಳಿಂದ ಶಕೀಲ್‌ಗೆ ನಿಷೇಧ ಹೇರಿ ಆದೇಶಿಸಿದ್ದಾರೆ. ಆ ಬಳಿಕ ತಾರಿಖ್‌ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ಪ್ರಧಾನಿ ಶೆಹಬಾಜ್‌ ಷರೀಫ್‌ಗೆ ಪತ್ರ ಕಳುಹಿಸಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories