ಕನಸುಗಳು
ರಾತ್ರಿ ಮಲಗಿದ್ದಾಗ ಕನಸುಗಳು ಕಾಣೋದು ಸಮಯ. ಆದ್ರೆ ಇಡೀ ರಾತ್ರಿ ನಿಮ್ಮನ್ನು ಕಾಡಿದ ಕನಸುಗಳು ಬೆಳಗಾಗುವಷ್ಟರಲ್ಲಿ ನೆನಪಿನಲ್ಲಿಯೇ ಉಳಿಯಲ್ಲ. ಎಷ್ಟೇ ಪ್ರಯತ್ನಿಸಿದರೂ ಕೆಲ ಕನಸುಗಳು ಮಾತ್ರ ನೆನಪಿಗೆ ಬರಲ್ಲ.
ನಿದ್ರೆಯ ಸಮಯದಲ್ಲಿ, ನೋರ್‌ಪೈನ್‌ಫ್ರಿನ್ ಎಂಬ ಮೆದುಳಿನ ರಾಸಾಯನಿಕವು ಸ್ರವಿಸುತ್ತದೆ, ಇದು ಸ್ಮರಣೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಕನಸುಗಳನ್ನು ನೆನಪಿಟ್ಟುಕೊಳ್ಳುವುದನ್ನು ಕಷ್ಟಕರವಾಗಿಸುತ್ತದೆ. ಈ ಕಾರಣದಿಂದಲೂ ರಾತ್ರಿ ಕಂಡ ಕನಸುಗಳು ಬೆಳಗ್ಗೆ ಮರೆತು ಹೋಗುತ್ತವೆ.
REM (Rapid eye movement) ನಿದ್ರೆಯ ಸಮಯದಲ್ಲಿ ಕನಸುಗಳು ಸಂಭವಿಸುತ್ತವೆ, ನಾವು REM ಅಲ್ಲದ ನಿದ್ರೆಗೆ ಹೋಗುವ ಮೊದಲು ಎಚ್ಚರವಾದರೆ, ಕನಸುಗಳು ದೀರ್ಘಾವಧಿಯ ಸ್ಮರಣೆಯಲ್ಲಿ ಸಂಗ್ರಹವಾಗದೆ ಕಳೆದು ಹೋಗಬಹುದು. ಈ ಕಾರಣದಿಂದಲೂ ನಾವು ಎಷ್ಟೇ ಪ್ರಯತ್ನಿಸಿದರೂ ಕನಸುಗಳು ನೆನಪು ಮಾಡಿಕೊಳ್ಳಲು ಸಾಧ್ಯವಾಗಲ್ಲ.
ಸಿರೊಟೋನಿನ್ ಮತ್ತು ಅಸೆಟೈಲ್ಕೋಲಿನ್ ನಂತಹ ನರಪ್ರೇಕ್ಷಕಗಳ ಹೆಚ್ಚಿನ ಮಟ್ಟಗಳು ಕನಸಿನ ನೆನಪುಗಳನ್ನು ನಿಗ್ರಹಿಸಬಹುದು. ಹಾಗಾಗಿ ರಾತ್ರಿ ಕಂಡ ಕನಸುಗಳು ನಮ್ಮ ಮೆದುಳಿನಲ್ಲಿ ಸ್ಟೋರ್ ಆಗಲ್ಲ.
sleeping
ಕಳಪೆ ನಿದ್ರೆಯ ಗುಣಮಟ್ಟ, ನಿದ್ರಾಹೀನತೆ ಅಥವಾ ವಿಘಟಿತ ನಿದ್ರೆಯು ಸಾಮಾನ್ಯ ನಿದ್ರೆಯ ಚಕ್ರಗಳನ್ನು ಅಡ್ಡಿಪಡಿಸುತ್ತದೆ ಮತ್ತು ಕನಸಿನ ನೆನಪುಗಳನ್ನು ಕಡಿಮೆ ಮಾಡುತ್ತದೆ. ಯಾವುದೇ ಒತ್ತಡವಿಲ್ಲದೇ ಸಮಯಕ್ಕೆ ಸರಿಯಾಗಿ ಮಲಗಿದ್ದಾಗ ಕಂಡ ಕೆಲ ಕನಸುಗಳು ನೆನಪಿನಲ್ಲಿ ಉಳಿಯುತ್ತವೆ.
ವಯಸ್ಸಾದಂತೆ ಕನಸಿನ ನೆನಪು ಕ್ಷೀಣಿಸುತ್ತದೆ. ವಯಸ್ಸಾದವರಿಗಿಂತ ಚಿಕ್ಕವರು ಹೆಚ್ಚು ಕನಸುಗಳನ್ನು ನೆನಪಿಸಿಕೊಳ್ಳುತ್ತಾರೆ. ನಾವು ಕನಸಿನ ನೆನಪಿಗೆ ಆದ್ಯತೆ ನೀಡದಿದ್ದರೆ ಅಥವಾ ನಮ್ಮ ಕನಸುಗಳನ್ನು ದಾಖಲಿಸಲು ಅಭ್ಯಾಸ ಮಾಡದಿದ್ದರೆ, ಕನಸುಗಳು ನೆನಪಿನಲ್ಲಿ ಉಳಿಯುವುದಿಲ್ಲ.