ರಂಜಾನ್ ಉಪವಾಸಕ್ಕೂ ಮುನ್ನ ಅನುಸರಿಸಬೇಕಾದ ಮಾರ್ಗಸೂಚಿಗಳು

Published : Mar 21, 2023, 04:52 PM IST

ರಂಜಾನ್ ಸಮಯದಲ್ಲಿ, ಮುಸ್ಲಿಂ ಸಮುದಾಯದ ಜನರು ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವೆ ಆಹಾರವನ್ನು ತಿನ್ನುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಆರೋಗ್ಯವಾಗಿರಲು ಡಬ್ಲ್ಯುಎಚ್ಒ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ, ಅವುಗಳನ್ನು ಅನುಸರಿಸುವ ಮೂಲಕ ನೀವು ಆರೋಗ್ಯವಾಗಿರಬಹುದು.

PREV
18
ರಂಜಾನ್ ಉಪವಾಸಕ್ಕೂ ಮುನ್ನ ಅನುಸರಿಸಬೇಕಾದ ಮಾರ್ಗಸೂಚಿಗಳು

ಪವಿತ್ರ ರಂಜಾನ್ ತಿಂಗಳು ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಇಸ್ಲಾಂ ಸಮುದಾಯದ ಅತಿದೊಡ್ಡ ಹಬ್ಬವಾದ ರಂಜಾನ್ ತಿಂಗಳಲ್ಲಿ ಹೆಚ್ಚಿನವರು ಉಪವಾಸ (ramadan fasting) ಮಾಡುತ್ತಾರೆ. ಇಸ್ಲಾಮಿಕ್ ಕ್ಯಾಲೆಂಡರ್‌ನ ಈ ಪವಿತ್ರ ತಿಂಗಳಲ್ಲಿ ದೇಶಾದ್ಯಂತ ಮುಸ್ಲಿಮರು ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ಉಪವಾಸ ಮಾಡುತ್ತಾರೆ. ಒಂದು ತಿಂಗಳ ಉಪವಾಸದ ನಂತರ ಈದ್-ಉಲ್-ಫಿತರ್ ಅನ್ನು ಆಚರಿಸಲಾಗುತ್ತದೆ. ರಂಜಾನ್ ಸಮಯದಲ್ಲಿ, ಮುಸ್ಲಿಂ ಸಮುದಾಯದ ಜನರು ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವಿನ ಸಮಯದಲ್ಲಿ ಆಹಾರ ಸೇವಿಸುವುದಿಲ್ಲ. ಸೂರ್ಯೋದಯಕ್ಕೆ ಮುಂಚಿತವಾಗಿ ಆಹಾರ ತಿನ್ನುವ ಮೂಲಕ ಉಪವಾಸ ಪ್ರಾರಂಭಿಸಿ ಮತ್ತು ನಂತರ ಸೂರ್ಯಾಸ್ತದ ನಂತರ ಉಪವಾಸ ಮುಗಿಸುತ್ತಾರೆ.

28

ಈ ವರ್ಷ ರಂಜಾನ್ ಮಾರ್ಚ್ 22 ರಂದು ಪ್ರಾರಂಭವಾಗಿ ಏಪ್ರಿಲ್ 21 ರಂದು ಕೊನೆಗೊಳ್ಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ವಿಶ್ವ ಆರೋಗ್ಯ ಸಂಸ್ಥೆ (WHO) ಉಪವಾಸದ ಬಗ್ಗೆ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದೆ, ಇದರಿಂದಾಗಿ ತಿಂಗಳಾದ್ಯಂತ ಆರೋಗ್ಯವಾಗಿ ಉಳಿಯುವ ಮೂಲಕ ನೀವು ಉಪವಾಸ ಮಾಡಬಹುದು.

38

ಮಾರ್ಗಸೂಚಿಗಳ ಬಗ್ಗೆ ತಿಳಿದುಕೊಳ್ಳೋಣ -
ನೀರು ಕುಡಿಯುವುದು: ಉಪವಾಸವು (fasting) ಸೂರ್ಯೋದಯಕ್ಕೆ ಮೊದಲು ಆಹಾರ ಸೇವಿಸಿದಾಗ ಆರಂಭವಾಗಿ ಮತ್ತು ಇಫ್ತಾರ್ ನಲ್ಲಿ (Iftar) ಕೊನೆಗೊಳ್ಳುತ್ತದೆ. ಆದಾಗ್ಯೂ, ಈ ಮಧ್ಯೆ, ನಾವು ಸಾಕಷ್ಟು ನೀರು ಕುಡಿಯಲು ಮತ್ತು ಹೈಡ್ರೇಟೆಡ್ ಆಗಿರಲು ನೆನಪಿಟ್ಟುಕೊಳ್ಳಬೇಕು, ಇದರಿಂದ ದೇಹವು ಕೊರತೆಯಿರುವ ಪೋಷಕಾಂಶಗಳನ್ನು ಪಡೆಯಬಹುದು.

48

ಹಣ್ಣುಗಳು (Fruits): ಈ ಸಮಯದಲ್ಲಿ, ನೀರಿನ ಅಂಶವನ್ನು ಹೊಂದಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸಿ, ಇದು ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ ಮತ್ತು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.
 

58

ತಂಪಾದ ಮತ್ತು ನೆರಳಿನ ಸ್ಥಳ: 15 ರಿಂದ 16 ಗಂಟೆಗಳ ಉಪವಾಸದ ಸಮಯದಲ್ಲಿ ನಿಮ್ಮನ್ನು ಹೈಡ್ರೇಟ್ ಮತ್ತು ಆರೋಗ್ಯಕರವಾಗಿಡಲು ತಂಪಾದ ಮತ್ತು ನೆರಳಿನ ಸ್ಥಳದಲ್ಲಿ ಉಳಿಯಲು ಪ್ರಯತ್ನಿಸಿ. ಹೆಚ್ಚು ಬಿಸಿಲಿನಲ್ಲಿ ಹೋಗಬೇಡಿ. ಇದರಿಂದ ಡಿಹೈಡ್ರೇಟ್ ಆಗುವ ಮೂಲಕ ನಿಮಗೆ ಸಮಸ್ಯೆ ಉಂಟಾಗಬಹುದು. 

68

ಸುಹೂರ್: ಸುಹೂರ್ ಸಮಯದಲ್ಲಿ ದೇಹದ ಶಕ್ತಿಯನ್ನು (body energy) ಹೆಚ್ಚಿಸಲು, ಕಾರ್ಬೋಹೈಡ್ರೇಟ್ಸ್ ಮತ್ತು ಪ್ರೋಟೀನ್ಸ್‌ನಿಂದ ಸಮೃದ್ಧವಾಗಿರುವ ತರಕಾರಿ ಮತ್ತು ಹಣ್ಣು ಸೇವಿಸಿ. ಇವು ದಿನವಿಡೀ ನಿಮಗೆ ಬೇಕಾದ ಶಕ್ತಿ ಮತ್ತು ಸಾಮಾರ್ಥ್ಯವನ್ನು ನೀಡುತ್ತದೆ. 
 

78

ಸಿಹಿತಿಂಡಿಗಳು (Sweets): ಇಫ್ತಾರ್ ನಂತರ ಹೆಚ್ಚಿನ ಪ್ರಮಾಣದಲ್ಲಿ ಸಿಹಿತಿಂಡಿಗಳನ್ನು ತಿನ್ನುವುದನ್ನು ತಪ್ಪಿಸುವುದು ಒಳ್ಳೆಯದು. ಅಲ್ಲದೆ, ಹೆಚ್ಚಿನ ಕೊಬ್ಬಿನ ಆಹಾರದ ಸೇವನೆಯನ್ನು ಸಹ ತಪ್ಪಿಸಬೇಕು. ಯಾಕೆಂದರೆ ಹೆಚ್ಚು ಸಿಹಿ ತಿಂದಾಗ ದೇಹಕ್ಕೆ ಹೆಚ್ಚಿನ ನೀರಿನ ಅವಶ್ಯಕತೆ ಉಂಟಾಗುತ್ತದೆ. ಅಲ್ಲದೇ ಸಿಹಿ ಹೆಚ್ಚಾಗಿ ತಿನ್ನೋದು ಸಹ ಒಳ್ಳೆಯದಲ್ಲ.

88

ಕರಿದ ಆಹಾರ (fried food): ರಂಜಾನ್ ಉದ್ದಕ್ಕೂ ದೇಹವನ್ನು ಆರೋಗ್ಯಕರವಾಗಿಡಲು ಎಣ್ಣೆಯಲ್ಲಿ ಕರಿದ ಆಹಾರ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸೋದನ್ನು ಅವಾಯ್ಡ್ ಮಾಡಿ. ಇದರಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತದೆ. ಪ್ರತಿದಿನ ಎಣ್ಣೆಯ ಆಹಾರ ಸೇವಿಸೋದ್ರಿಂದ ಕೊಲೆಸ್ಟ್ರಾಲ್ ಸಹ ಹೆಚ್ಚುತ್ತದೆ. 

Read more Photos on
click me!

Recommended Stories