ಸರ್ವ ರೋಗಕ್ಕೂ ಮದ್ದಾಗಬಲ್ಲದು ಸಾಂಬಾರ್ ಪದಾರ್ಥದ ಅರಿಶಿನ
First Published | Jun 7, 2021, 1:55 PM ISTವೈಜ್ಞಾನಿಕವಾಗಿ ಅರಿಶಿನದ ಉಪಯೋಗ ಒಳ್ಳೆಯದು ಎಂದು ಸಾಭೀತಾಗಿದೆ. ಇದು ಶುಂಠಿ ಜಾತಿಗೆ ಸೇರಿದ ಗೆಡ್ಡೆ. ಅಂದರೆ ಇದು ಭೂಮಿಯ ಒಳಗೆ ಬೆಳೆಯುವ ಕಾರಣ ಇದನ್ನು ಆಯುರ್ವೇದದಲ್ಲಿ, ಮನೆ ಮದ್ದುಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ ಇದು ಗಾಯವಾದ ಜಾಗಕ್ಕೆ ಹಚ್ಚಬಹುದು. ಚರ್ಮದ ಕೆಲವು ಖಾಯಿಲೆಗಳಿಗೆ ಅರಶಿನ ರಾಮಬಾಣ. ಭಾರತದಲ್ಲಿ ಅರಶಿನವನ್ನು ಆಹಾರದಲ್ಲಿ ಬಳಸುತ್ತಾರೆ. ಇದು ಆಹಾರಕ್ಕೆ ಬಣ್ಣ ಕೊಡುತ್ತದೆ. ಸ್ವಲ್ಪ ಬಳಸಿದಲ್ಲಿ, ಆಹಾರದ ರುಚಿಯಲ್ಲಿ ಬದಲಾವಣೆ ಕಾಣಲ್ಲ .ಹೆಚ್ಚು ಬಳಸಿದಲ್ಲಿ ಅರಶಿನದ ಒಂದು ಒಗರು ಇರುತ್ತದೆ.