22 ದಿನಗಳ ಹಸುಗೂಸಿನೊಂದಿಗೆ ಡ್ಯೂಟಿಗೆ ಮರಳಿದ IAS ಅಫೀಸರ್‌

First Published | Apr 13, 2020, 4:53 PM IST

ಕೊರೋನಾ ವಿರುದ್ಧ ಯುದ್ಧ ಮಾಡುತ್ತಿರುವ ಅನೇಕ ಯೋಧರು ತಮ್ಮ ಕುಟುಂಬಕ್ಕಿಂತ ತಮ್ಮ ಕರ್ತವ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ತಮ್ಮ ಪ್ರಾಣದ ಹಂಗು ತೊರೆದು ದೇಶಕ್ಕಾಗಿ ಸೇವೆ ಸಲ್ಲಿಸುತ್ತಿದ್ದಾರೆ ಡಾಕ್ಟರ್‌, ನರ್ಸ್‌, ಪೋಲಿಸ್‌ರು ಹಾಗೂ ಹಲವು ಸರ್ಕಾರಿ ನೌಕರರು ಇವರಲ್ಲಿ ಕೆಲವರು. 22 ದಿನದ ಬಾಣಂತಿ ಲೇಡಿ IAS ಅಫೀಸರ್‌ ಅಂತಹ  ಒಬ್ಬ ಕೊರೋನಾ ಯೋಧರಲ್ಲಿ ಒಬ್ಬರು. ಮಹಾನಗರ ಪಾಲಿಕೆ ಆಯುಕ್ತ ಮತ್ತು ವಿಶಾಖಪಟ್ಟಣಂನ ಮಹಿಳಾ ಐಎಎಸ್ ಅಧಿಕಾರಿ ಗುಮ್ಮಲಾ ತಮ್ಮ ಹಸುಗೂಸನ್ನು ಮಡಿಲಲ್ಲಿ ಇಟ್ಟು ಕೊಂಡು, ಡ್ಯೂಟಿ ಮಾಡುತ್ತಿದ್ದಾರೆ. ಇವರ ಕರ್ತವ್ಯ ನಿಷ್ಠೆಗೊಂದು ಸಲಾಮ್‌.

ಮಗನಿಗೆ ಜನ್ಮ ನೀಡಿದ ಕೇವಲ 22 ದಿನಗಳಿಗೆ ತನ್ನ ಕಚೇರಿಗೆ ಮರಳಿರುವ ಕಮಿಷನರ್ ಸೃಜನಾ.
undefined
ಈ ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಅನೇಕ ತಾಯಂದಿರು ದೇಶದಲ್ಲಿದ್ದಾರೆ. ಹಾಗಾಗಿ ಮನೆಯಲ್ಲಿ ನಾನು ಹೇಗೆ ವಿಶ್ರಾಂತಿ ಪಡೆಯಲು ಸಾಧ್ಯ ಎಂದು ಹೇಳುತ್ತಾರೆ IAS ಅಫೀಸರ್‌ ಸೃಜನಾ ಗುಮ್ಮಲಾ
undefined

Latest Videos


ಕೆಲವೊಮ್ಮೆ ಅವರು ಮಗುವನ್ನು ಮನೆಯಲ್ಲಿ ಬಿಟ್ಟು ಬಂದರೆ, ಕೆಲವೊಮ್ಮೆ ಅಫೀಸ್‌ಗೇ ಕರೆದು ಬರುತ್ತಾರೆ.
undefined
ಮಗುವಿನ ಆರೈಕೆಯ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ತನ್ನ ಮಗನಿಗೆ ಹಾಲು ಕುಡಿಸಲು ಪ್ರತಿ ನಾಲ್ಕು ಗಂಟೆಗಳಿಗೊಮ್ಮೆ ಮನೆಗೆ ಹೋಗುವುದಾಗಿ , ಉಳಿದ ಸಮಯದಲ್ಲಿ, ನನ್ನ ವಕೀಲ ಪತಿ ಮತ್ತು ತಾಯಿ ಸಂಪೂರ್ಣ ಸಾಥ್‌ ನೀಡುತ್ತಿರುವುದಾಗಿ ಹೇಳಿದ್ದಾರೆ.
undefined
ಮಹಿಳಾ ಅಧಿಕಾರಿ ಶ್ರೀಜನ್ ಗುಮ್ಮಲಾ ಪತಿ ಮತ್ತು ಮಗುವಿನೊಂದಿಗೆ.
undefined
IAS ಅಧಿಕಾರಿ ಸೃಜನಾ ನಮ್ಮ ರಾಜ್ಯದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರ ಆದೇಶ ಮತ್ತು ಜಿಲ್ಲೆಯ ಎಲ್ಲಾ ಅಧಿಕಾರಿಗಳು ಮತ್ತು ನೌಕರರ ಸಹಕಾರದೊಂದಿಗೆ ನಾನು ಕೊರೋನಾ ನಿಯಂತ್ರಣಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಮುಖ್ಯವಾಗಿ ಜನರಿಗೆ ಕುಡಿಯುವ ನೀರನ್ನು ಪೂರೈಸುವುದು ಮತ್ತು ಸ್ವಚ್ಛತೆಯನ್ನು ಕಾಪಾಡುವುದಾಗಿದೆ ಎಂದು ಮೀಡಿಯಾಗಳಿಗೆ ಹೇಳಿದ್ದಾರೆ.
undefined
ಸ್ಟ್ರಿಕ್ಟ್‌ ಅಫಿಸರ್‌ ಹಾಗೂ ಸಂವೇದನಾಶೀಲ ತಾಯಿಯ ಮಿಶ್ರಣವೇ ಈ IAS ಅಧಿಕಾರಿ.
undefined
ಪ್ರಧಾನಿ ಮೋದಿಯವರ ಮನವಿ ಮೇರೆಗೆ ಐಎಎಸ್ ಮಹಿಳಾ ಅಧಿಕಾರಿ ಸೃಜನಾ ಗುಮ್ಮಲಾ ಕೂಡ ತಮ್ಮ ಮನೆಯ ಹೊರಗೆ ದೀಪ ಬೆಳಗಿಸಿದರು.
undefined
IAS ಅಧಿಕಾರಿಗಳು ಡ್ಯೂಟಿ ಮುಗಿಸಿ ಮನೆಗೆ ಹೋದ ನಂತರವೂ ಮೊಬೈಲ್ ಮೂಲಕ ನೌಕರರಿಗೆ ಮಾರ್ಗದರ್ಶನ ಮತ್ತು ಸೂಚನೆಯನ್ನು ನೀಡುತ್ತಿರುವುದು ಅನಿವಾರ್ಯ. ಜಿಲ್ಲೆಯ ಸಿಬ್ಬಂದಿ ಮತ್ತು ಜನರಿಗೆ 24 ಗಂಟೆಗಳ ಕಾಲ ಸಹಾಯ ಮಾಡುತ್ತಿದ್ದಾರೆ ಸರ್ಕಾರಿ ನೌಕರರು.
undefined
click me!