ಚಳಿಗಾಲದಲ್ಲಿ ಕಾಡುವ ನೋವಿಗೆ ಅಡುಗೆ ಮನೆಯಲ್ಲಿವೆ ಪೈನ್ ಕಿಲ್ಲರ್ಸ್!
First Published | Nov 11, 2020, 4:48 PM ISTಚರ್ಮದ ಸಮಸ್ಯೆಯಿಂದ ಹಿಡಿದು ಆರೋಗ್ಯ ಸಮಸ್ಯೆಗಳವರೆಗೆ ಚಳಿಗಾಲವು ನಿಮ್ಮ ದೇಹದ ಮೇಲೆ ಹಾನಿಯನ್ನುಂಟುಮಾಡುತ್ತದೆ. ಚಳಿಯ ವಾತಾವರಣದಲ್ಲಿ ನೀವು ಶೀತ, ಕೆಮ್ಮು, ಜ್ವರ ಮತ್ತು ಕೀಲು ನೋವು ಅನುಭವಿಸಬಹುದು.ಕೀಲು, ಸ್ನಾಯು ನೋವು ಈ ಸಮಯದಲ್ಲಿ ಸಾಮಾನ್ಯವಾಗಿ ಕಂಡುಬರುವ ಕೆಲವು ಸಮಸ್ಯೆಗಳು. ಸಂಧಿವಾತ ಇರುವವರಿಗೆ ಇದು ಇನ್ನೂ ಕೆಟ್ಟದಾಗಿದೆ. ಅವರ ಕೀಲುಗಳಲ್ಲಿನ ನೋವು ಹವಾಮಾನದೊಂದಿಗೆ ಉಲ್ಬಣಗೊಳ್ಳುತ್ತದೆ. ತಾಪಮಾನದಲ್ಲಿನ ಕುಸಿತದಿಂದ ಉಂಟಾಗುವ ದೇಹದ ನೋವನ್ನು ನೀವು ತೊಡೆದುಹಾಕಲು ಸಾಧ್ಯವಾದರೆ ಅದು ಉತ್ತಮವಲ್ಲವೇ?