Health Tips: ರಾತ್ರಿಯಲ್ಲಿ ಆಗಾಗ್ಗೆ ಶೌಚಾಲಯಕ್ಕೆ ಹೋಗ್ತೀರಾ? ಇದು ಅಪಾಯಕಾರಿ

First Published | Nov 24, 2021, 6:01 PM IST

ರಾತ್ರಿ ಎದ್ದು ಮತ್ತೆ ಮತ್ತೆ ಶೌಚಾಲಯಕ್ಕೆ (toilet) ಹೋದರೆ ನಿಮ್ಮ ಅಭ್ಯಾಸ ಕ್ಯಾನ್ಸರ್  ನಂತಹ ಗಂಭೀರ ಕಾಯಿಲೆಯ ಸಂಕೇತವೂ ಆಗಬಹುದು. ಈ ಸ್ಥಿತಿಯನ್ನು ನೊಕ್ಟೂರಿಯಾ ಎಂದು ಕರೆಯಲಾಗುತ್ತದೆ, ಇದರಲ್ಲಿ ನೀವು ರಾತ್ರಿ ಯಲ್ಲಿ ಆಗಾಗ್ಗೆ ಎದ್ದು ಮೂತ್ರ ವಿಸರ್ಜನೆಗೆ ಹೋಗುತ್ತಿದ್ದರೆ ಏನಾಗುತ್ತದೆ ನೋಡೋಣ. 
 

prostate cancer

ಪ್ರಾಸ್ಟೇಟ್ ಕ್ಯಾನ್ಸರ್ ನ (prostate cancer) ಚಿಹ್ನೆಗಳು : ಅಮೇರಿಕನ್ ಅಕಾಡೆಮಿಕ್ ಮೆಡಿಕಲ್ ಸೆಂಟರ್ ಕ್ಲೀವ್ ಲ್ಯಾಂಡ್ ಕ್ಲಿನಿಕ್ ಪ್ರಕಾರ, ರಾತ್ರಿಯಲ್ಲಿ ಆಗಾಗ್ಗೆ ಶೌಚಾಲಯಕ್ಕೆ ಹೋಗುವ ನಿಮ್ಮ ಅಭ್ಯಾಸವು ಪ್ರಾಸ್ಟೇಟ್ ಕ್ಯಾನ್ಸರ್ ನ ಸಂಕೇತವಾಗಿರಬಹುದು.ಆದುದರಿಂದ ಎಚ್ಚರಿಕೆ ಅಗತ್ಯ. 

ವೈದ್ಯಕೀಯ ತಜ್ಞರ ಪ್ರಕಾರ, ಪುರುಷರಲ್ಲಿ ಚರ್ಮದ ಕ್ಯಾನ್ಸರ್ (skin cancer) ನಂತರ ಇದು ಎರಡನೇ ಸಾಮಾನ್ಯ ಕಾಯಿಲೆಯಾಗಿದೆ ಮತ್ತು ರಾತ್ರಿ ಶೌಚಾಲಯಕ್ಕೆ ಹೋಗುವ ಅಭ್ಯಾಸವು ರೋಗಕ್ಕೆ ಎಚ್ಚರಿಕೆಯ ಸಂಕೇತವೂ ಆಗಿರಬಹುದು.ಆದುದರಿಂದ ಜಾಗರೂಕರಾಗಿರುವುದು ಮುಖ್ಯ. 

Tap to resize

ರಾತ್ರಿಯಿಡೀ ಆಗಾಗ ಮೂತ್ರ ವಿಸರ್ಜನೆ (urine passing) ಮಾಡಿದರೆ ನೀವು ಜಾಗರೂಕರಾಗಿರಬೇಕು. ನೊಕ್ಚುರಿಯಾದ ಈ ಪರಿಸ್ಥಿತಿಯಲ್ಲಿ, ನೀವು ಎಚ್ಚರವಾಗಿರಿ ಏಕೆಂದರೆ ನೀವು ಮತ್ತೆ ಮತ್ತೆ ಶೌಚಾಲಯಕ್ಕೆ ಹೋಗುವ ಅಗತ್ಯವನ್ನು ಅನುಭವಿಸುತ್ತೀರಿ. ಇದನ್ನು ತಡೆಹಿಡಿಯಲು ಸಾಧ್ಯವಿಲ್ಲ. 

ಆರಂಭಿಕ ಹಂತದಲ್ಲಿ ಕ್ಯಾನ್ಸರ್ ಪತ್ತೆ ಹಚ್ಚುವುದು ಕಷ್ಟ: 25 ಪ್ರತಿಶತ ಪ್ರಾಸ್ಟೇಟ್ ಕ್ಯಾನ್ಸರ್ ಪ್ರಕರಣಗಳಲ್ಲಿ, ರೋಗಿಗಳಿಗೆ ತೀವ್ರವಾದ ನೊಕ್ಟುರಿಯಾ ತೊಂದರೆ ಅನುಭವಿಸುತ್ತಾರೆ. ಅಧ್ಯಯನದ ಪ್ರಕಾರ, ಇವು ವಿಕಿರಣ ಚಿಕಿತ್ಸೆಯ ಅಡ್ಡ ಪರಿಣಾಮಗಳೂ ಆಗಿರಬಹುದು.

ಗಡ್ಡೆಯು ಗಾತ್ರದಲ್ಲಿ ಬೆಳೆಯುತ್ತಿರುವಾಗ ಮತ್ತು ಮೂತ್ರನಾಳದ (bladder) ಮೇಲೆ ಒತ್ತಡ ಹೇರಿದಾಗ ಈ ಸ್ಥಿತಿಯೂ ಸಂಭವಿಸಬಹುದು. ಪ್ರಾಸ್ಟೇಟ್ ಕ್ಯಾನ್ಸರ್ ಅನ್ನು ಆರಂಭಿಕ ಹಂತಗಳಲ್ಲಿ ಕಂಡುಹಿಡಿಯುವುದು ಕಷ್ಟ ಏಕೆಂದರೆ, ರೋಗಲಕ್ಷಣಗಳು ಗೋಚರಿಸುವುದಿಲ್ಲ. ಕ್ಲೀವ್ ಲ್ಯಾಂಡ್ ಕ್ಲಿನಿಕ್ ಪ್ರಕಾರ, ಆಗಾಗ್ಗೆ ಮೂತ್ರ ವಿಸರ್ಜನೆಯು ರೋಗದ ಹೆಚ್ಚಳದ ಲಕ್ಷಣವಾಗಿರಬಹುದು, ಅಂದರೆ ನೀವು ತಕ್ಷಣವೇ ಚಿಕಿತ್ಸೆಯನ್ನು ಪ್ರಾರಂಭಿಸಬೇಕು. 

ತಜ್ಞರ ಪ್ರಕಾರ, ಪ್ರೊಸ್ಟೇಟ್ ಕ್ಯಾನ್ಸರ್ ಹೆಚ್ಚು ಹೆಚ್ಚಾಗದ ಹೊರತು ಮತ್ತು ಮೂತ್ರಕೋಶದಿಂದ ಮೂತ್ರವನ್ನು ಸಾಗಿಸುವ ಟ್ಯೂಬ್ ಮೇಲೆ ಒತ್ತಡ (stress on tube)ಹೇರದ ಹೊರತು ರೋಗಲಕ್ಷಣಗಳನ್ನು ತೋರಿಸುವುದಿಲ್ಲ. ಪ್ರಾಸ್ಟೇಟ್ ಕ್ಯಾನ್ಸರ್ ನ ಸಂದರ್ಭದಲ್ಲಿ,  ಮತ್ತೆ ಮತ್ತೆ ಮೂತ್ರ ವಿಸರ್ಜನೆಗೆ ಹೋಗುವ ಅಗತ್ಯವನ್ನು ಅನುಭವಿಸುತ್ತೀರಿ. ಅದರಲ್ಲೂ ರಾತ್ರಿ ಸಮಯದಲ್ಲಿ ಹೆಚ್ಚು.

ಪ್ರಾಸ್ಟೇಟ್ ಕ್ಯಾನ್ಸರ್ ತಡೆಗಟ್ಟುವಿಕೆ: ತರಕಾರಿಗಳು (vegetables) ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಅದರ ಬೆಳವಣಿಗೆಯ ವೇಗವನ್ನು ನಿಧಾನಗೊಳಿಸುತ್ತದೆ. ಆಹಾರದಲ್ಲಿ ಹಣ್ಣು, ತರಕಾರಿ, ಬೇಳೆಕಾಳು, ದ್ವಿದಳ ಧಾನ್ಯಗಳು ಮತ್ತು ಮೀನುಗಳಂತಹ ವಸ್ತುಗಳನ್ನು ಸೇರಿಸಿದರೆ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಬಹುದು. 

-ಹಣ್ಣುಗಳು ಸ್ವಾಭಾವಿಕವಾಗಿ ಕ್ಯಾರೊಟಿನಾಯ್ಡ್  ಸಂಯುಕ್ತಗಳನ್ನು ಹೆಚ್ಚಿಸುತ್ತದೆ, ಇದು ದೇಹವನ್ನು ಡಿಎನ್ ಎ ಹಾನಿಯಿಂದ ರಕ್ಷಿಸುತ್ತದೆ.
-ಕೆಂಪು ಹಣ್ಣುಗಳನ್ನು (red fruits) ತಿನ್ನುವುದು ಪ್ರಯೋಜನಕಾರಿಯಾಗಿದೆ ಏಕೆಂದರೆ ಇದರಲ್ಲಿ ಲೈಕೋಪೀನ್ ಅಂಶವಿರುತ್ತದೆ, ಇದು ದೇಹವನ್ನು ಕ್ಯಾನ್ಸರ್ ನಿಂದ ರಕ್ಷಿಸುತ್ತದೆ.

- ತಜ್ಞರ ಪ್ರಕಾರ, ನಿಮ್ಮ ಆಹಾರ ಅಭ್ಯಾಸವು ಪ್ರಾಸ್ಟೇಟ್ ಕ್ಯಾನ್ಸರ್ ಅನ್ನು (prostate cancer) ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಅದು ಹರಡದಂತೆ ತಡೆಯುತ್ತದೆ, ಆದ್ದರಿಂದ ಪ್ರಾಸ್ಟೇಟ್ ಕ್ಯಾನ್ಸರ್ ತಡೆಗಟ್ಟಲು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಿ.

Latest Videos

click me!