ವಿವಾಹಕ್ಕೂ ಮುನ್ನ ನೀವು ಮಾಡಿಸಲೇಬೇಕಾದ 8 ವೈದ್ಯಕೀಯ ಪರೀಕ್ಷೆಗಳಿವು..!

First Published | Nov 22, 2020, 11:33 AM IST

ನಿಮ್ಮ ಉಳಿದೆಲ್ಲ ಜೀವನವನ್ನು ಒಬ್ಬರೊಂದಿಗೆ ಕಳೆಯಲು ನೀವು ನಿರ್ಧರಿಸುವಾಗ ಅವರ ಆರೋಗ್ಯ ಸ್ಥಿತಿಯನ್ನು ಅರಿತುಕೊಳ್ಳುವುದು ತುಂಬಾ ಮುಖ್ಯ. ಈ ಮೂಲಕ ಭವಿಷ್ಯದಲ್ಲಿ ಉಂಟಾಗವಹುದಾದ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬಹುದು

ರಕ್ತ ಪರೀಕ್ಷೆ: ಎಲ್ಲರೂ ಎಲ್ಲರಿಗೂ ರಕ್ತ ದಾನ ಮಾಡುವಂತಿಲ್ಲ. ಹಾಗಾಗಿ ಮದುವೆಯಾಗುವದಾಗ ರಕ್ತದ ಪರೀಕ್ಷೆ ತುಂಬಾ ಮುಖ್ಯ. ರಕ್ತದ ಗುಂಪುಗಳ ಹೊಂದಾಣಿಕೆಯಾಗದಿದ್ದರೆ ಪ್ರೆಗ್ನೆನ್ಸಿ ಸಮಯದಲ್ಲಿ ಸಮಸ್ಯೆಗಳು ಉಂಟಾಗುತ್ತದೆ.
ಫರ್ಟಿಲಿಟಿ ಟೆಸ್ಟ್: ಮದುವೆಯಾದ ಮೇಲೆ ಮಕ್ಕಳಾಗಬೇಕು. ಆದ್ದರಿಂದ ಮದುವೆಯಾಗುವ ಮುನ್ನ ಫರ್ಟಿಲಿಟಿ ಪರೀಕ್ಷೆ ಮಾಡಿಸಿಕೊಳ್ಳುವುದು ಅಗತ್ಯ
Tap to resize

ಅನುವಂಶಿಕ ಕಾಯಿಲೆಗಳು: ಡಯಾಬಿಟಿಸ್ ಇರಲಿ, ಹೃದಯ ಸಂಬಂಧಿ ಕಾಯಿಲೆ ಇರಲಿ ಎಲ್ಲವನ್ನೂ ಅರಿತುಕೊಳ್ಳುವುದು ಬಹಳ ಮುಖ್ಯ. ಸಾಮಾನ್ಯವಾಗಿ ಅನುವಂಶಿಕ ಕಾಯಿಲೆಗಳು ದಿರ್ಘ ಕಾಲಿಕ ಆರೋಗ್ಯ ಸಮಸ್ಯೆಗಳಾಗಿರುತ್ತವೆ. ಈ ಬಗ್ಗೆ ಮೊದಲೇ ಪರೀಕ್ಷೆ ಮಾಡುವುದು ಅಗತ್ಯ
ಮಾನಸಿಕ ಆರೋಗ್ಯ: ಖುಷಿಯಾದ ದಾಂಪತ್ಯ ಜೀವನಕ್ಕೆ ಇಬ್ಬರ ಮಾನಸಿಕ ಆರೋಗ್ಯ ಚೆನ್ನಾಗಿರುವುದು ಅಗತ್ಯ. ಹೀಗಿರದಿದ್ದರೆ ಜೀವನದಲ್ಲಿ ಹೆಚ್ಚಿನ ಸಮಸ್ಯೆಗಳಾಗುತ್ತವೆ. ಆದ್ದರಿಂದ ಸಮತೋಲನದ ಸರಿಯಾದ ಮಾನಸಿಕ ಆರೋಗ್ಯ ಇದೆಯೇ ಎಂಬುದನ್ನು ಖಚಿತಪಡಿಸುವುದು ಮುಖ್ಯ
HIV & STDs: ಎಚ್‌ಐವಿ ಮತ್ತು ಎಸ್‌ಟಿಡಿ ಬೇಗನೆ ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಹರಡಬಲ್ಲದು. ಹಾಗಾಗಿ ಇವುಗಳ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ
ಕ್ರೊನಿಕ್ ಡಿಸೀಸ್ ಟೆಸ್ಟ್: ಕ್ರೋನಿಕ್ ಡಿಸೀಸ್ ಹುಟ್ಟುವ ಮಕ್ಕಳಿಗೆ ತೊಂದರೆ ತರುವ ಸಾಧ್ಯತೆ ಇದೆ. ಹಾಗಾಗಿ ಕ್ರೋನಿಕ್ ಟೆಸ್ಟ್ ಮಾಡಿಸಿಕೊಳ್ಳುವುದು ಬಹಳ ಮುಖ್ಯ
ತಲಸೇಮಿಯಾ ಟೆಸ್ಟ್: ತಲಸೇಮಿಯಾ ಹುಟ್ಟುವ ಮಕ್ಕಳ ಮೇಲೆ ಪರಿಣಾಮ ಬೀರುವ ಆರೋಗ್ಯ ಸಮಸ್ಯೆ. ಹಾಗಾಗಿ ಇದನ್ನು ಮದುವೆಗೆ ಮುನ್ನವೇ ಪರೀಕ್ಷೆ ಮಾಡಿಸಿಕೊಳ್ಳಬೇಕು.
ಜೆನೋಟೈಪ್ ಟೆಸ್ಟ್: ಜೆನೋಟೈಪ್ ಟೆಸ್ಟ್ ಬಹಳ ಅಗತ್ಯ. ಇದು ಪೋಷಕರಿಂದ ಮಕ್ಕಳಿಗೆ ಸಿಗುವ ಅಂಶ. ಕೆಲವೊಂದು ಪ್ರದೇಶಗಳಲ್ಲಿ ಈ ಟೆಸ್ಟ್ ಅತೀ ಅಗತ್ಯ

Latest Videos

click me!