ಮಕ್ಕಳು ಸರಿಯಾಗಿ ಊಟ ಮಾಡ್ತಿಲ್ವಾ? ಈ ವಿಧಾನಗಳನ್ನು ಅನುಸರಿಸಿ ನೋಡಿ...

Pavna Das   | Asianet News
Published : Nov 18, 2020, 04:32 PM IST

ಮಗು ಹುಟ್ಟಿ ಬೆಳೆಯುವವರೆಗೆ ತಾಯಿ ಆದವಳಿಗೆ ಅದೆಷ್ಟು ಜವಬ್ದಾರಿಗಳಿವೆ ಒಂದೋ ಎರಡೂ. ಮಕ್ಕಳ ಲಾಲನೆ ಪಾಲನೆಯಲ್ಲಿ ಅಧಿಕ ಸಮಯ ಕಳೆದೇಹೋಗುತ್ತದೆ. ಅವರ ತಿಂಡಿ, ಊಟ, ಪಾಠ, ನಿದ್ದೆ ಆಟ, ಎಲ್ಲ ಮಾಡುವಾಗ ತಾಯಂದಿರಿಗೆ ಹಲವು ಚಿಂತೆ ಕಾಡುತ್ತದೆ.  ಮಕ್ಕಳು ಸರಿಯಾಗಿ ಊಟ ಮಾಡದಿದ್ದರೆ, ನಿದ್ದೆ ಮಾಡದಿದ್ದರೆ, ಮಣ್ಣು ತಿನ್ನುತ್ತಿದ್ದರೆ, ಮಕ್ಕಳ ಆರೋಗ್ಯದ ಚಿಂತೆ ಕಾಡುತ್ತದೆ. ಯಾರಾದರೂ ಮಗು ತೆಳ್ಳಗೆ ಇದೆ ಅಂದರೆ ಸಾಕು ಇನ್ನೊಂದು ತಲೆ ನೋವು. 

PREV
19
ಮಕ್ಕಳು ಸರಿಯಾಗಿ ಊಟ ಮಾಡ್ತಿಲ್ವಾ? ಈ ವಿಧಾನಗಳನ್ನು ಅನುಸರಿಸಿ ನೋಡಿ...

ಏನೇ ಇರಲಿ ಮಗು ಅದರ ವಯಸ್ಸಿಗೆ ಸರಿಯಾಗಿ ತಿನ್ನುತ್ತಿದರೆ, ನಿದ್ದೆ ಮಾಡುತ್ತಿದ್ದರೆ, ಆಡುತ್ತಿದ್ದರೆ ಎಲ್ಲ ಸರಿಯಾಗಿದೆ ಎಂದು ಅರ್ಥ, ಮಗು ತೆಳ್ಳಗೆ ಇದ್ದರು ತೊಂದರೆ ಇಲ್ಲ, ಆರೋಗ್ಯವಾಗಿ ಇದ್ದರೆ ಸಾಕು. ಇದು ಇಂದಿನ ತಾಯಂದಿರಿಗೆ ಕಿವಿಮಾತು. ಇದಲ್ಲದೆ ಮಕ್ಕಳ ಆರೋಗ್ಯದ ಬಗ್ಗೆ ತಾಯಂದಿರುವ ತಿಳಿದುಕೊಳ್ಳಲೇಬೇಕು ಕೆಲವೊಂದು ಅಂಶಗಳು ಇಲ್ಲಿವೆ... 

29

ಮಕ್ಕಳಿಗೆ ಕೊಡುವ ಹಾಲಿನ ಬಗ್ಗೆ ತಿಳಿಯೋಣ. ಬಹುಮುಖ್ಯವಾಗಿ ಹಾಲಿನಲ್ಲಿ ಕ್ಯಾಲ್ಸಿಯಂ ಮೆಗ್ನೇಷಿಯಂ, ಪ್ರೊಟೀನ್ ವಿಟಮಿನ್ ಗಳು ಬಹಳ ಅವಶ್ಯ. ಹಾಲಿನಲ್ಲಿ ಕ್ಯಾಲ್ಸಿಯಂನಂಥ ಪೋಷಕಾಂಶ ಇದ್ದರು ಅದು ಸಂಪೂರ್ಣ ಆಹಾರ ಅಲ್ಲ. 

39

ಮಗುವಿನ ಬೆಳವಣಿಗೆಗೆ ಬೇಕಾಗುವ ಎಲ್ಲಾ ಪೋಷಕಾಂಶಗಳು ಇರುವುದಿಲ್ಲ. ಹಾಲನ್ನು ಅಧಿಕ ಪ್ರಮಾಣದಲ್ಲಿ ಸೇವಿಸುವುದರಿಂದ ಹಸಿವು ಕಡಿಮೆ ಆಗುತ್ತದೆ. ಬೇರೆ ಆಹಾರಗಳನ್ನು ಸೇವಿಸುವುದನ್ನು ಕಡಿಮೆ ಮಾಡುತ್ತದೆ. ಹಾಲು ಬದಲಿ ಆಹಾರ ಅಲ್ಲ. ಹಾಗಾಗಿ ಮಕ್ಕಳಿಗೆ 350 -400 ml  ನಷ್ಟು ಮಾತ್ರ ಹಾಲು ಕೊಡಿ ಇಷ್ಟು ಸಾಕ .

49

2 ವರ್ಷದ ಬಳಿಕ ಹಾಲನ್ನು ಕುಡಿಸುವ ಪ್ರಮಾಣ ಕಡಿಮೆ ಮಾಡಿ ಉಳಿದ ಆಹಾರಗಳನ್ನು ಕೊಡಿ. ತರಕಾರಿ, ಹಣ್ಣು, ಧಾನ್ಯ, ಮೊಟ್ಟೆ ಒಣಹಣ್ಣುಗಳು ಹೆಚ್ಚು ಹೆಚ್ಚು ಹಸಿರು ತರಕಾರಿಗಳು ಮಕ್ಕಳಿಗೆ ಕೊಡಿ ಇದರಲ್ಲಿ ಇರುವ ಕಬ್ಬಿಣದ ಅಂಶ ಮಕ್ಕಳಲ್ಲಿ ರಕ್ತ ಹೀನತೆಯನ್ನು ತಡೆಗಟ್ಟುತ್ತದೆ. ಆದಷ್ಟು ಪೌಷ್ಟಿಕ ಆಹಾರಗಳಾದ ರಾಗಿ, ಗೋಧಿ, ಕಾಳುಗಳು, ಬೆಳೆಗಳು, ಉಪಯೋಗಿಸಿ ತಯಾರಿಸಿದ ಆಹಾರ ತಿನ್ನಿಸಿ. 

59

ಮಕ್ಕಳಿಗೆ ಆಹಾರ ಕೊಡುವಲ್ಲಿ ಕೆಲವು ಸಲಹೆಗಳು 
ಮಕ್ಕಳಿಗೆ ಆಹಾರ ಕೊಡುವಾಗ ಅವರಿಗೆ ಇಷ್ಟ ಇರುವ ಒಂದು ಪದಾರ್ಥವನ್ನು ಸೇರಿಸಿ. ಇದರಿಂದ ಮಕ್ಕಳು ಆಹಾರವನ್ನು ಇಷ್ಟಪಟ್ಟು ಸೇವಿಸುತ್ತಾರೆ. 

69

ಮಕ್ಕಳಿಗೆ ಪ್ರತಿದಿನ ಆಹಾರ ಕೊಡುವಾಗ ವೈವಿಧ್ಯತೆಯನ್ನು ಪಾಲಿಸಬೇಕು. ಅಕ್ಕಿ, ರಾಗಿ, ಗೋಧಿ, ಬೇಳೆ, ತರಕಾರಿ, ತುಪ್ಪ ಬೆಣ್ಣೆ ಹೀಗೆ ಇದ್ದಾರೆ ಮಕ್ಕಳಿಗೆ ಬೇಕಾಗುವ ಪೌಷ್ಟಿಕಾಂಶ ಸಿಗುತ್ತದೆ. 

79

ಆಹಾರವನ್ನು ಬಡಿಸುವಾಗ ಆಕರ್ಷಕ ವಾದ ಮಕ್ಕಳಿಗೆ ಆಸಕ್ತಿ ಹೆಚ್ಚಿಸಲು ಸುಂದರ ತಟ್ಟೆಗಳನ್ನು ಚಮಚಗಳನ್ನು ಬಳಸಬೇಕು. ಅದನ್ನು ನೋಡಿದರೆ ಮಕ್ಕಳು ಆಸಕ್ತಿಯಿಂದ ತಿಂಡಿ ತಿನ್ನುತ್ತಾರೆ. 

89

ಊಟದ ವಿಚಾರ ಬಿಟ್ಟು ನಡುವೆ ಸೇವಿಸುವ ತಿಂಡಿ ತಿನಿಸುಗಳು ಆರೋಗ್ಯಕರವಾಗಿರಲಿ ಅವುಗಳಲ್ಲಿ ಒಣಹಣ್ಣು ಚೀಸ್, ಲಡ್ಡು ಹಣ್ಣುಗಳು ಇತ್ಯಾದಿ ಇರಲಿ.  

99

ಊಟದ ಸಮಯ ನಿಗದಿಯಾಗಿರಬೇಕು ಅರ್ಧಗಂಟೆಯಲ್ಲಿ ಮುಗಿಯಬೇಕು. ನಿಮ್ಮ ಮಗುವಿನೊಂದಿಗೆ ಕುಳಿತು ಊಟಮಾಡಿ ಅವರಿಗೆ ಆಸಕ್ತಿ ಪ್ರೋತ್ಸಾಹ ದೊರೆಯುತ್ತದೆ.

click me!

Recommended Stories