ಈ ಔಷಧೀಯ ಸಸ್ಯಗಳ ಮೂಲಕ ರಕ್ತದೊತ್ತಡ, ಡಯಾಬಿಟೀಸ್ ನಿಂದ ಮುಕ್ತಿ

First Published Feb 26, 2021, 3:11 PM IST

ದೇಶದಾದ್ಯಂತ ಲಕ್ಷಾಂತರ ಜನರು ಸಕ್ಕರೆ ಕಾಯಿಲೆ ಮತ್ತು ರಕ್ತದೊತ್ತಡದಿಂದ ಬಳಲುತ್ತಿದ್ದಾರೆ. ಈ ಎರಡು ರೋಗಗಳು ಇನ್ನೂ ಅನೇಕ ರೋಗಗಳಿಗೆ ಕಾರಣವಾಗಿವೆ, ಆದ್ದರಿಂದ ಈ ರೋಗಗಳನ್ನು ನಿಯಂತ್ರಿಸುವುದು ಅಗತ್ಯವಾಗಿದೆ. ಸಕ್ಕರೆ ಕಾಯಿಲೆಮತ್ತು ರಕ್ತದೊತ್ತಡಗಳು ಜೀವನಶೈಲಿಯ ಬದಲಾವಣೆಯಿಂದ ಬರುವಂತಹ ಕಾಯಿಲೆಗಳಾಗಿವೆ, ಇದು ಎಲ್ಲಾ ವಯಸ್ಸಿನ ಜನರನ್ನು ಕಾಡುತ್ತದೆ. ಈ ರೋಗವನ್ನು ನೀವು ನಿಯಂತ್ರಿಸಬೇಕಾದರೆ,  ಔಷಧವನ್ನು ಇಟ್ಟುಕೊಳ್ಳಬೇಕು. ಇದರ ಜೊತೆಗೆ ಆಯುರ್ವೇದವೂ ಮುಖ್ಯ. 
 

ಹೌದು ಔಷಧಿಯ ಜೊತೆಗೆ ತುಳಸಿ, ಬೇವಿನ ಎಲೆಗಳು ಮತ್ತು ತುಳಸಿ ಎಲೆಗಳನ್ನು ಬಳಸಿ ರಕ್ತದೊತ್ತಡ ಮತ್ತು ಸಕ್ಕರೆಯನ್ನು ನಿಯಂತ್ರಿಸಬಹುದು. ಸಕ್ಕರೆ ಮತ್ತು ರಕ್ತದೊತ್ತಡವನ್ನು ಸಾಮಾನ್ಯಸ್ಥಿತಿಗೆ ತಗೆದುಕೊಳ್ಳಲು ಈ ಎಲೆಗಳು ಹೇಗೆ ಪರಿಣಾಮಕಾರಿ ಎಂದು ತಿಳಿದುಕೊಳ್ಳೋಣ.
undefined
ತುಳಸಿ ಸೇವನೆ:ತುಳಸಿಯನ್ನು ಗಿಡಮೂಲಿಕೆಗಳ ರಾಣಿ ಎಂದು ಕರೆಯಲಾಗುತ್ತದೆ, ಇದು ನಮ್ಮ ದೇಹವನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ. ಖಾಲಿ ಹೊಟ್ಟೆಯಲ್ಲಿ ತುಳಸಿ ಎಲೆಗಳ ಬಳಕೆಯಿಂದ ಟೈಪ್ 2 ಮಧುಮೇಹದಿಂದ ಬಳಲುತ್ತಿರುವವರ ರಕ್ತದಲ್ಲಿ ಸಕ್ಕರೆ ಯ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಎಂದು ಅನೇಕ ಅಧ್ಯಯನಗಳು ತೋರಿಸಿವೆ.
undefined
ಅಷ್ಟೇ ಅಲ್ಲ ಪ್ರತಿದಿನ ತುಳಸಿ ಸೇವನೆಯಿಂದ ಅಥವಾ ತುಳಸಿ ಟೀ ಮಾಡಿ ಸೇವನೆ ಮಾಡಿದರೆ ರಕ್ತದೊತ್ತಡ ಕಡಿಮೆ ಮಾಡಲು ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ದೂರವಿಡಲೂ ಪರಿಣಾಮಕಾರಿ.
undefined
ಬೇವಿನ ಎಲೆ:ಬೇವಿನ ಎಲೆಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಬೇವಿನ ಎಲೆಗಳನ್ನು ಪ್ರತಿದಿನ ಬಳಸುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಬಹುದು ಎಂಬುದಕ್ಕೆ ಹಲವಾರು ಪುರಾವೆಗಳಿವೆ. ಬೇವಿನ ಎಲೆಗಳ ಕಷಾಯ ಅಥವಾ ಹಾಗೆ ಸೇವನೆ ಮಾಡುವುದರಿಂದ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
undefined
ಮಧುಮೇಹ ವಿದ್ದರೆ, ರಕ್ತದೊತ್ತನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಿ, ಏಕೆಂದರೆ ಬೇವಿನ ಸೇವನೆಯು ಸಕ್ಕರೆಯ ಮಟ್ಟವನ್ನು ಸಹ ಕಡಿಮೆ ಮಾಡಬಹುದು. ಈ ಸಂದರ್ಭದಲ್ಲಿ ಸಕ್ಕರೆ ಔಷಧವನ್ನು ಕಡಿಮೆ ಮಾಡಬೇಕಾಗುತ್ತದೆ. ಒಂದು ತಿಂಗಳ ಕಾಲ ಬೇವಿನ ಸಾರ ಅಥವಾ ಕ್ಯಾಪ್ಸೂಲ್ ತೆಗೆದುಕೊಳ್ಳುವುದರಿಂದ ಕೊಲೆಸ್ಟ್ರಾಲ್ ಮಟ್ಟವೂ ಕಡಿಮೆಯಾಗಬಹುದು.
undefined
ಕರಿಬೇವಿನ ಎಲೆಬಳಸಿ:ಸಿಹಿ ಬೇವಿನ ಎಲೆ ಎಂದೂ ಕರೆಯುತ್ತಾರೆ. ಭಾರತೀಯ ಆಹಾರದಲ್ಲಿ ಕರಿಬೇವಿನ ಸೊಪ್ಪನ್ನು ಹೆಚ್ಚಾಗಿ ಬಳಸುತ್ತಾರೆ. ಕರಿಬೇವಿನ ಎಲೆಗಳು ಆಹಾರದಲ್ಲಿ ಪರಿಮಳವನ್ನು ನೀಡುವುದು ಮಾತ್ರವಲ್ಲದೆ, ವಿವಿಧ ಆರೋಗ್ಯ ಗುಣಗಳನ್ನು ಹೊಂದಿವೆ.
undefined
ಕರಿಬೇವಿನ ಸೊಪ್ಪನ್ನು ನಿಯಮಿತವಾಗಿ ಬಳಸುವುದರಿಂದ ಇನ್ಸುಲಿನ್ ಉತ್ಪತ್ತಿ ಮಾಡುವ ಜೀವಕೋಶಗಳನ್ನು ಗುಣಪಡಿಸಲು ಸಹಾಯಮಾಡುತ್ತದೆ. ಈ ಜೀವಕೋಶಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
undefined
ಪುದೀನಾ :ಬೇಸಿಗೆಕಾಲದಲ್ಲಿ ಪುದಿನಾ ಜ್ಯೂಸ್ ಮಾಡಿ ಸೇವನೆ ಮಾಡುತ್ತಿದ್ದಾರೆ ಇದರಿಂದ ರಕ್ತದೊತ್ತಡ ಕಡಿಮೆ ಮಾಡಬಹುದು ಎಂದು ಹೇಳಲಾಗುತ್ತದೆ. ಕುಡಿಯುವ ನೀರಿಗೆ ಪುದೀನಾ ಎಲೆಗಳನ್ನು ಹಾಕುವ ಮೂಲಕ ಉತ್ತಮ ಅರೋಗ್ಯ ಕಾಪಾಡಿಕೊಳ್ಳಬಹುದು.
undefined
click me!