ನಿಮ್ಮ ಲೈಫ್ ಸ್ಟೈಲ್ ಸುಧಾರಿಸೋ ಸೂತ್ರಗಳಿವು… ಟ್ರೈ ಮಾಡಿ ನೋಡಿ ಜೀವನ ಚೆನ್ನಾಗಿರುತ್ತೆ

First Published | Nov 22, 2024, 12:20 PM IST

ನಿಮಗಾಗಿ ಒಂದಿಷ್ಟು ಲೈಫ್ ಸ್ಟೈಲ್ ಟಿಪ್ಸ್ ಕೊಡ್ತಿದ್ದೀವಿ. ಇವುಗಳನ್ನ ನೀವು ಅಳವಡಿಸಿಕೊಂಡ್ರೆ ಲೈಫ್ ಚೆನ್ನಾಗಿರುತ್ತೆ ಅನ್ನೋದು ಖಂಡಿತಾ, ಕಷ್ಟ ಏನಿಲ್ಲ, ಹಾಗಾಗಿ ಈ ಸಿಂಪಲ್ ಟಿಪ್ಸ್ ನೀವೂ ಟ್ರೈ ಮಾಡಿ ನೋಡಿ.   
 

ಆರೋಗ್ಯ ಸಮಸ್ಯೆಗೆ ಪರಿಹಾರ, ಮಾನಸಿಕ ನೆಮ್ಮದಿಗಾಗಿ ಟಿಪ್ಸ್ ಹುಡುಕುತ್ತಿದ್ದರೆ, ನಿಮಗಾಗಿ ಒಂದಿಷ್ಟು ಟಿಪ್ಸ್ ಗಳು ಇಲ್ಲಿವೆ. ನಿಮ್ಮ ಲೈಫ್ ಸ್ಟೈಲ್ ಬದಲಾವಣೆ ಮಾಡಬೇಕು ಎಂದು ನೀವು ಬಯಸುತ್ತಿದ್ರೆ, ಖಂಡಿತವಾಗಿಯೂ ನಿಮಗೆ ಈ ಸಲಹೆಗಳು ಖಂಡಿತಾ ಇಷ್ಟವಾಗಬಹುದು. ಇಲ್ಲಿದೆ ಸಿಂಪಲ್ ಆಗಿರೋ ಟಿಪ್ಸ್..
 

ನಿಮಗೆ ಪದೇ ಪದೇ ಬೆನ್ನು ನೋವು (Back pain) ಕಾಣಿಸಿಕೊಳ್ಳುತ್ತಾ? ಹಾಗಿದ್ರೆ ಪ್ರತಿದಿನ ದಿಂಬನ್ನ ಬಳಕೆ ಮಾಡದೇ ನಿದ್ರೆ ಮಾಡಿ, ಇದರಿಂದ ನಿಮ್ಮ ಬೆನ್ನಿನ ಮೂಳೆಗಳು ಸ್ಟ್ರಾಂಗ್ ಆಗುತ್ತೆ. ದಿಂಬನ್ನು ಇಟ್ಟು ಮಲಗೋದ್ರಿಂದ ಹಲವು ಆರೋಗ್ಯ ಸಮಸ್ಯೆಗಳು ಕಾಣಿಸುತ್ತೆ, ಹಾಗಾಗಿ ಈ ಟಿಪ್ಸ್ ನೆನಪಿರಲಿ. 
 

Tap to resize

ಇದು ಸ್ಪೆಷಲ್ ಆಗಿ ವಿದ್ಯಾರ್ಥಿಗಳಿಗೆ ಅಥವಾ ಪರೀಕ್ಷೆ ಬರೆಯೋದಕ್ಕೆ ಸಜ್ಜಾಗಿರೋರಿಗೆ ಅನ್ವಯ ಆಗುತ್ತೆ. ನೀವು ಅಧ್ಯಯನ ಮಾಡ್ತಿದ್ರೆ, ನಿಮಗೆ ಯಾವುದೇ ಒಂದು ವಿಷ್ಯವನ್ನು ನೆನೆಪಿನಲ್ಲಿ ಇಡೋದಕ್ಕೆ ಕಷ್ಟ ಆಗ್ತಿದ್ರೆ, ಆವಾಗ ಚಾಕಲೇಟ್ (chocolate) ಬಾಯಿಗೆ ಹಾಕೋದನ್ನ ಮರಿಬೇಡಿ, ಇದರಿಂದ ಮೆದುಳು ಹೆಚ್ಚು ಜ್ಞಾನವನ್ನು ಹಿಡಿದಿಟ್ಟುಕೊಳ್ಳೋದಕ್ಕೆ ಸಹಾಯ ಮಾಡುತ್ತೆ. 

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ಬಳಕೆ ಮಾಡೋದು ಗ್ರೀನ್ ಟೀ. ಈ ಗ್ರೀನ್ ಟೀ ಬಳಕೆ ಮಾಡಿದ ನಂತ್ರ ಬ್ಯಾಗ್ (tea bag) ಬಿಸಾಕೋ ಬದಲು, ಆ ಬ್ಯಾಗ್ ಗಳನ್ನು ವಾಸನೆಯುಕ್ತ ಶೂ ಒಳಗೆ ಹಾಕಿಡಿ. ಇದರಿಂದ ಶೂಗಳ ವಾಸನೆ ಆದಷ್ಟು ಬೇಗನೆ ನಿವಾರಣೆಯಾಗುತ್ತೆ. ಶೂಗಳ ಗಬ್ಬು ವಾಸನೆಯಿಂದ ಮುಕ್ತಿ ಪಡೆಯೋದಕ್ಕೆ ಇದು ಬೆಸ್ಟ್ ಉಪಾಯ. 
 

ಮ್ಯೂಸಿಕ್ (music) ಅನ್ನೋದನ್ನ ಒಂದು ಥೆರಪಿ ಅಂತಾನೆ ಹೇಳಬಹುದು. ಕೃಷ್ಣನ ಕೊಳಲಿನ ಧ್ವನಿ ಕೇಳುತ್ತಿದ್ದರೆ ಹಸುಗಳೇ ಸಾಲು ಸಾಲಾಗಿ ಬಂದು ತಲೆದೂಗಿ ನಿಂತಿರುತ್ತಿದ್ದವಂತೆ, ಇನ್ನು ನಾವು ಕೇವಲ ಮಾನವರು ನಮ್ಮಲ್ಲೇನಿದೆ ಅಲ್ವಾ?  ನೀವು ಮ್ಯೂಸಿಕ್ ಕೇಳುತ್ತಿದ್ದರೆ, ಬ್ರೈನ್ ಚೆನ್ನಾಗಿ ವರ್ಕ್ ಆಗೋದಕ್ಕೆ ಇದು ಸಹಾಯ ಮಾಡುತ್ತೆ. ಇದರಿಂದ ಮೈಂಡ್ ಕೂಡ ಫ್ರೀ ಆಗುತ್ತೆ. 
 

ಯಾರನ್ನಾದರೂ ಮೊದಲಿಗೆ ಭೇಟಿಯಾದಾಗ ಅವರು ನಿಮ್ಮಲ್ಲಿ ಏನನ್ನು ಗಮನಿಸ್ತಾರೆ ಅನ್ನೋದು ನಿಮಗೆ ಗೊತ್ತಾ? ನಿಜ ಹೇಳ್ಬೇಕು ಅಂದ್ರೆ, ಜನರು ಗೊತ್ತಿದೋ ಗೊತ್ತಿಲ್ಲದೆಯೋ ಮೊದಲಿಗೆ ನಿಮ್ಮ ಕಾಲುಗಳಲ್ಲಿ ಶೂ, ಚಪ್ಪಲಿಗಳನ್ನ ನೋಟಿಸ್ ಮಾಡ್ತಾರೆ. ಹಾಗಾಗಿ ಉತ್ತಮ ಗುಣಮಟ್ಟದ ಶೂ, ಚಪ್ಪಲಿ ಬಳಕೆ ಮಾಡಿ. 
 

ಬಲ ಕೈಯಲ್ಲಿ ಅಕ್ಷರಗಳನ್ನು ಬರೆಯುವವರು ಹೆಚ್ಚಾಗಿ ಬಾಯಿಯ ಬಲ ಬದಿಯ ಮೂಲಕ ಆಹಾರಗಳನ್ನು ಸೇವನೆ ಮಾಡುವಂತಹ ಅಭ್ಯಾಸವನ್ನು ಹೊಂದಿರುತ್ತಾರೆ. ಇದನ್ನ ಬೇಕಾದ್ರೆ ನೀವು ಗಮನಿಸಿ ನೋಡಿ, ಎಡಗೈಯಲ್ಲಿ ಬರೆಯುವವರು ಎಡಬದಿಯಲ್ಲಿ ಆಹಾರ ಸೇವಿಸೋದಕ್ಕೆ ಇಷ್ಟಪಡ್ತಾರೆ. 
 

Latest Videos

click me!