ಆರೋಗ್ಯದ ಬಗ್ಗೆ ಕಾಳಜಿಯಾ? ಬೇಸಿಗೆಯಲ್ಲಿ ಪಾಲಕ್ ಜ್ಯೂಸ್ ಸೇವಿಸಿ

First Published May 6, 2021, 12:29 PM IST

ಕೊರೊನಾ ಅವಧಿಯಲ್ಲಿ ದೇಹವನ್ನು ಆರೋಗ್ಯವಾಗಿಡುವುದು ಬಹಳ ಮುಖ್ಯ. ಇದೇ ವೇಳೆ ಏರುತ್ತಿರುವ ಬಿಸಿಲಿನಲ್ಲೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಪಾಲಕ್ ಸೊಪ್ಪು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಹೆಚ್ಚಿನ ಜನರು ಚಳಿಗಾಲದ ಋತುವಿನಲ್ಲಿ ಪಾಲಕ್ ತಿನ್ನಲು ಬಯಸುತ್ತಾರೆಯಾದರೂ, ಬೇಸಿಗೆಯಲ್ಲಿ ಪಾಲಕ್ ರಸವನ್ನು ಸೇವಿಸುವುದರಿಂದ ದೇಹಕ್ಕೆ ತುಂಬಾ ಪ್ರಯೋಜನ. ಪಾಲಕ್ ಸೊಪ್ಪಿನಲ್ಲಿ ಸಾಕಷ್ಟು ಆಂಟಿ ಆಕ್ಸಿಡೆಂಟುಗಳಿವೆ, ಅದು ದೇಹವನ್ನು ಆರೋಗ್ಯವಾಗಿರಿಸುತ್ತದೆ. ಪಾಲಕ್ ಅನ್ನು ಆಹಾರದಲ್ಲಿ ಸೇರಿಸುವ ಮೂಲಕ ಅನೇಕ ದೈಹಿಕ ರೋಗಗಳನ್ನು ತಪ್ಪಿಸಬಹುದು. 

ಪಾಲಕ್ ಸೊಪ್ಪು ಮುಖ್ಯವಾಗಿ ಕ್ಯಾಲ್ಸಿಯಂ, ಸೋಡಿಯಂ, ಕ್ಲೋರಿನ್, ರಂಜಕ, ಕಬ್ಬಿಣ, ಖನಿಜ ಲವಣಗಳು, ಪ್ರೋಟೀನ್ ಗಳು, ಕಬ್ಬಿಣ, ವಿಟಮಿನ್ ಎ ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ. ಪಾಲಕ್ ಸೊಪ್ಪಿನ ರಸವನ್ನು ಸೇವಿಸುವುದರಿಂದ ವೈರಲ್ ಸೋಂಕುಗಳ ಅಪಾಯಕಡಿಮೆ ಮಾಡಬಹುದು.
undefined
ಪಾಲಕ್ ಸೊಪ್ಪಿನ ಜ್ಯೂಸ್ ಕಣ್ಣಿನ ದೃಷ್ಟಿಯನ್ನೂ ಹೆಚ್ಚಿಸುತ್ತದೆ. ಅಲ್ಲದೆ ಪಾಲಕ್ ರಸದ ಸೇವನೆಯಿಂದ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸಬಹುದು. ಬೇಸಿಗೆಯಲ್ಲಿ ನೀವು ಪಾಲಕ್ ಜ್ಯೂಸ್ ಅನ್ನು ಏಕೆ ಕುಡಿಯಬೇಕು ಎಂದು ತಿಳಿಯೋಣ...
undefined
ಮೂಳೆಗಳು ಬಲಪಡಿಸುತ್ತದೆಪಾಲಕ್ನಲ್ಲಿ ಕ್ಯಾಲ್ಸಿಯಂ ಮತ್ತು ಆಂಟಿ ಆಕ್ಸಿಡೆಂಟ್ಗಳ ಗುಣಗಳಿವೆ, ಇದು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಮೂಳೆಗಳು ದುರ್ಬಲಗೊಳ್ಳದಂತೆ ತಡೆಯಲು ಪಾಲಕ್ ರಸವನ್ನು ಆಹಾರದಲ್ಲಿ ಸೇರಿಸಬಹುದು.
undefined
ಜೀರ್ಣಕ್ರಿಯೆಯನ್ನು ಉತ್ತಮಪಾಲಕ್ ಸೊಪ್ಪಿನ ರಸವನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮಗೊಳಿಸುವಾಗುತ್ತದೆ. ಪಾಲಕ್ನಲ್ಲಿ ಕಂಡುಬರುವ ಅಂಶಗಳು ದೇಹದಿಂದ ಕೆಟ್ಟ ವಸ್ತುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.
undefined
ಮಲಬದ್ಧತೆ ನಿವಾರಣೆ :ಪಾಲಕ್ ಸೊಪ್ಪಿನ ರಸ ಸೇವಿಸಿದರೆ ಹೊಟ್ಟೆ ಹಗುರಾಗಿರುತ್ತದೆ, ಮಲಬದ್ಧತೆಯನ್ನು ನಿವಾರಿಸುವಲ್ಲಿಯೂ ಇದು ನೆರವಾಗುತ್ತದೆ.
undefined
ಕಣ್ಣಿನ ದೃಷ್ಟಿಯನ್ನು ಹೆಚ್ಚಿಸುತ್ತದೆಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಇದ್ದು, ಇದು ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಕಣ್ಣಿನ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ. ಪಾಲಕ್ ಸೊಪ್ಪಿನ ಜ್ಯೂಸ್ ಕುಡಿಯುವುದರಿಂದ ಕಣ್ಣಿನ ದೃಷ್ಟಿ ಹೆಚ್ಚುತ್ತದೆ.
undefined
ತೂಕ ನಷ್ಟಸ್ಥೂಲಕಾಯದಿಂದ ಬಳಲುತ್ತಿದ್ದರೆ, ಖಂಡಿತವಾಗಿಯೂ ಪಾಲಕ್ ರಸವನ್ನು ಆಹಾರದಲ್ಲಿ ಸೇರಿಸಿ. ಪಾಲಕ್ ಸೊಪ್ಪಿನಲ್ಲಿ ಫೈಬರ್ ಅಂಶ ಅಧಿಕವಾಗಿದ್ದು, ಇದರಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆಯಿರುವುದು ಕಂಡು ಬರುತ್ತದೆ. ಇದು ತೂಕ ಇಳಿಸಲು ನೆರವಾಗುತ್ತದೆ.
undefined
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆರೋಗ ನಿರೋಧಕ ಶಕ್ತಿ ಹೆಚ್ಚಿಸಲು ಪಾಲಕ್ ರಸವನ್ನು ಆಹಾರದಲ್ಲಿ ಸೇರಿಸಬಹುದು. ಇದರಲ್ಲಿ ಇರುವ ಮೆಗ್ನೀಷಿಯಮ್ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ.
undefined
ಪಾಲಕ್ ಸೊಪ್ಪಿನ ಜ್ಯೂಸ್ ಸೇವನೆಯಿಂದ ರೋಗ ನಿರೋಧಕ ಶಕ್ತಿ ಬಲಗೊಳ್ಳುವ ಮೂಲಕ ವಿವಿಧ ರೀತಿಯ ವೈರಲ್ ಸೋಂಕನ್ನು ತಡೆಯಬಹುದು.
undefined
click me!