ಈ ಗಿಡಮೂಲಿಕೆ ಮಸಾಲಾ ಚಹಾ ಕುಡಿದು ಮಲಗಿದ್ರೆ ತೂಕ ಇಳಿಯುತ್ತೆ!

Suvarna News   | Asianet News
Published : Sep 17, 2021, 06:07 PM IST

ಅನೇಕ ಪ್ರಯತ್ನಗಳ ನಂತರವೂ ತೂಕ ಕಳೆದುಕೊಳ್ಳಲು ಸಾಧ್ಯವಾಗುತ್ತಿಲ್ಲವೇ? ಹಾಗಿದ್ರೆ ಈ ಸೀಕ್ರೆಟ್ ಕೇಳಿ.. ಈಗ ನೀವು ಯಾವುದೇ ಪ್ರಯತ್ನವಿಲ್ಲದೆ ತೂಕ ಇಳಿಸಬಹುದು. ಮಸಾಲೆ ಅಥವಾ ಗಿಡಮೂಲಿಕೆಯ ಕುರಿತು ಇಲ್ಲಿ ಒಂದಿಷ್ಟು ಮಾಹಿತಿ ನೀಡಲಾಗಿದೆ. ಯಾವುದೇ ಖಾದ್ಯದ ರುಚಿ ಹೆಚ್ಚಿಸಲು ಈ ಮಸಾಲೆಯನ್ನು ಬಳಸಲಾಗುತ್ತಿದ್ದರೂ, ಅದು ದಾಲ್ಚಿನ್ನಿ. ಇದರಿಂದ ಚಹಾ ತಯಾರಿಸಬಹುದು ಮತ್ತು ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು.

PREV
19
ಈ ಗಿಡಮೂಲಿಕೆ ಮಸಾಲಾ ಚಹಾ ಕುಡಿದು ಮಲಗಿದ್ರೆ ತೂಕ ಇಳಿಯುತ್ತೆ!

ಈ ಪ್ರಾಚೀನ ಗಿಡಮೂಲಿಕೆ ಅಥವಾ ಮಸಾಲೆಯು ವೇಗವಾಗಿ ತೂಕ ಕಳೆದು ಕೊಳ್ಳುವಂತೆ ಮಾಡುವುದಲ್ಲದೆ ಉತ್ತಮ ನಿದ್ರೆಯನ್ನು ನೀಡುತ್ತದೆ. ಇಲ್ಲಿ ದಾಲ್ಚಿನ್ನಿ ಚಹಾ ಬಗ್ಗೆ ಸಂಪೂರ್ಣ ಮಾಹಿತಿ ಇದೆ. ತೂಕ ಇಳಿಸಲು ಈ ಟೀ ಸೇವನೆ ಮಾಡಲು ಪ್ರಾರಂಭಿಸಿದರೆ ಇದರ ಬಗ್ಗೆ ತಿಳಿದುಕೊಳ್ಳಬೇಕು.

29

ತೂಕ ಇಳಿಸಲು ದಾಲ್ಚಿನ್ನಿ ಚಹಾ ಏಕೆ?
ದಾಲ್ಚಿನ್ನಿಯನ್ನು ಸಾಮಾನ್ಯವಾಗಿ ಸುವಾಸನೆಯುಕ್ತ ಮತ್ತು ರುಚಿಕರವಾದ ಮಸಾಲೆಯಾಗಿ ಬಳಸಲಾಗುತ್ತದೆ. ಕರಿ, ಸೂಪ್, ಸ್ಟೂ ಮತ್ತು ಸ್ಮೂಥಿಯ ರುಚಿ ಮತ್ತು ವಾಸನೆಯನ್ನು ಹೆಚ್ಚಿಸಲು ಇದನ್ನು ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಅಷ್ಟೇ ಅಲ್ಲ, ಶತಮಾನಗಳಿಂದ ಈ ಗಿಡಮೂಲಿಕೆಯನ್ನು ಆಯುರ್ವೇದ ಮತ್ತು ಇತರ ಪ್ರಾಚೀನ ಔಷಧಿಗಳಲ್ಲಿ ಬಳಸಲಾಗುತ್ತಿದೆ.

39

ದಾಲ್ಚಿನ್ನಿ ಸ್ವಾಭಾವಿಕವಾಗಿ ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಇದು ದೀರ್ಘಾವಧಿಯಲ್ಲಿ ರಕ್ತದ ಸಕ್ಕರೆಯನ್ನು ನಿರ್ವಹಿಸಲು ಸುಲಭಗೊಳಿಸುತ್ತದೆ. ಈ ಸುವಾಸನೆಯುಕ್ತ ಮಸಾಲೆಯು ಚಯಾಪಚಯವನ್ನು ಸುಧಾರಿಸುವ ಮೂಲಕ ತೂಕ ಇಳಿಸುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.

49

ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಒಂದು ಚಿಟಿಕೆ ದಾಲ್ಚಿನ್ನಿ
2012ರಲ್ಲಿ ಜರ್ನಲ್ ಆಫ್ ನ್ಯೂಟ್ರಿಷನಲ್ ಸೈನ್ಸ್ ಮತ್ತು ವಿಟಮಿನ್ಲಾಜಿಯಲ್ಲಿ ಪ್ರಕಟವಾದ ಇಲಿಗಳ ಮೇಲಿನ ಅಧ್ಯಯನವು ದಾಲ್ಚಿನ್ನಿ ಇಲಿಗಳಿಗೆ ಸಾಕಷ್ಟು ಕರುಳಿನ ಕೊಬ್ಬನ್ನು ಕಳೆದುಕೊಳ್ಳಲು ಸಹಾಯ ಮಾಡಿದೆ.

59

ಪಾನೀಯಗಳು, ಸೂಪ್ ಗಳು ಮತ್ತು ಸಲಾಡ್ ಗಳಲ್ಲಿ ಒಂದು ಚಿಟಿಕೆ ದಾಲ್ಚಿನ್ನಿಯನ್ನು ಸಿಂಪಡಿಸುವುದು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದು ಅಪಧಮನಿಗಳ ತಡೆಯನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ. ಇದರ ಜೊತೆಗೆ ಈ ಮಸಾಲೆಯಲ್ಲಿ ಇರುವ ಆಂಟಿ ಆಕ್ಸಿಡೆಂಟುಗಳು ಉರಿಯೂತವನ್ನು ಗುಣಪಡಿಸುವುದಲ್ಲದೆ ದೇಹದಿಂದ ಹಾನಿಕಾರಕ ವಿಷವನ್ನು ಹೊರಹಾಕಲು ನೆರವಾಗುತ್ತದೆ.

69

ಚಹಾ ತಯಾರಿ ಮಾಡೋದು ಹೇಗೆ? ಇಲ್ಲಿದೆ ರೆಸಿಪಿ.: 
ಚಹಾ ತಯಾರಿಸಲು ಒಂದು ಪಾತ್ರೆಯನ್ನು ಬಿಸಿ ಮಾಡಿ ಮತ್ತು ಅದಕ್ಕೆ ಎರಡು ಕಪ್ ನೀರನ್ನು ಸೇರಿಸಿ.
ಈಗ ಈ ನೀರಿಗೆ ಒಂದು ಇಂಚು ದಾಲ್ಚಿನ್ನಿ ಮತ್ತು ಒಂದು ಇಂಚು ಶುಂಠಿಯನ್ನು ಸೇರಿಸಿ.
ಈ ಮಡಕೆಯನ್ನು ಮುಚ್ಚಳದಿಂದ ಮುಚ್ಚಿ ಕುದಿಯಲು ಬಿಡಿ.

79

ನಂತರ ಮಿಶ್ರಣಕ್ಕೆ ಅರ್ಧ ಟೀ ಚಮಚ ಹಸಿರು ಚಹಾವನ್ನು ಸೇರಿಸಿ ಮತ್ತು ಗ್ಯಾಸ್ ಆಫ್ ಮಾಡಿ.
ಚಹಾವನ್ನು 3 ನಿಮಿಷಗಳ ಕಾಲ ಇರಿಸಿ.
ಈಗ ಚಹಾವನ್ನು ಸೋಸಿ ಮತ್ತು ಅದಕ್ಕೆ ಒಂದು ಟೀ ಚಮಚ ಜೇನುತುಪ್ಪ ಮತ್ತು ಎರಡು ನಿಂಬೆ ತುಂಡುಗಳನ್ನು ಸೇರಿಸಿ.
ಈಗ ರುಚಿಕರವಾದ ದಾಲ್ಚಿನ್ನಿ ಚಹಾ ಸೇವನೆ ಮಾಡಲು ತಯಾರಿರುತ್ತದೆ. 

89

ದಾಲ್ಚಿನ್ನಿ ಚಹಾ ತಯಾರಿಸಲು ಮತ್ತೊಂದು ವಿಧಾನ 
ಒಂದು ಬೌಲ್ ನಲ್ಲಿ ಅರ್ಧ ಕಪ್ ನೀರನ್ನು ತೆಗೆದುಕೊಳ್ಳಿ ಮತ್ತು ಅದಕ್ಕೆ ಒಂದು ಟೀ ಚಮಚ ದಾಲ್ಚಿನ್ನಿ ಪುಡಿಯನ್ನು ಸೇರಿಸಿ.
ಈಗ ಅದನ್ನು ಕುದಿಯಲು ಬಿಡಿ.
ಟೀ ಚೆನ್ನಾಗಿ ಕುದಿಸಿದ ಮೇಲೆ ಅದಕ್ಕೆ ನಿಂಬೆ ರಸ ಮತ್ತು ಜೇನುತುಪ್ಪ ಹಾಕಿ.
ಈಗ ದೇಹವನ್ನು ನಿರ್ವಿಷಗೊಳಿಸಲು ಮತ್ತು  ಚೆನ್ನಾಗಿ ನಿದ್ರೆ ಮಾಡಲು ಚಹಾ ತಯಾರಾಗಿದೆ. 

99

ನೀವು ಅಧಿಕ ತೂಕವನ್ನು ಹೊಂದಿದ್ದರೆ, ಸೀಮಿತ ಪ್ರಮಾಣದ ದಾಲ್ಚಿನ್ನಿ ಚಹಾವನ್ನು ಕುಡಿಯುವುದು ದೇಹದ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ಈ ಪಾನೀಯದಲ್ಲಿ ಅಪಾಯಕಾರಿ ಕೂಮರಿನ್ ಇದೆ ಎಂಬುದನ್ನು ನೆನಪಿನಲ್ಲಿಡಿ, ಆದ್ದರಿಂದ ಅತಿಯಾದ ಸೇವನೆ ಹಾನಿಕಾರಕ. ಹಾಗಾಗಿ ಮಿತಿಯಲ್ಲಿ ಸೇವನೆ ಮಾಡೋದು ಉತ್ತಮ. 

click me!

Recommended Stories