ಚೀನಾದ ಗ್ರೀನ್ ಹೌಸಿಂಗ್ ಯೋಜನೆ ಈಗ ತಿರುಗಿಬಿದ್ದಿದೆ. ಡ್ರ್ಯಾಗನ್ ದೇಶದ ಚೆಂಗುಡು ಪ್ರದೇಶದಲ್ಲಿ ಯೋಜನೆಯೇ ಉಲ್ಟಾ ಹೊಡೆದು ತಲೆನೋವಾಗಿ ಪರಿಣಮಿಸಿದೆ.
undefined
ಉದ್ದನೆಯ ಅರಣ್ಯ ಎಂದು ವಿಚಾರದೊಂದಿಗೆ ಆರಂಭವಾದ ಗ್ರೀನ್ ಹೌಸಿಂಗ್ ಯೋಜನೆಯಲ್ಲಿ ಅಪಾರ್ಟ್‌ಮೆಂಟ್ ಬಾಲ್ಕನಿಯನ್ನು ಹಸಿರೀಕರಣಗೊಳಿಸಲು ಉದ್ದೇಶಿಲಾಗಿತ್ತು.
undefined
ಈ ಯೋಜನೆ ಜಾರಿಯಾಗಿ ಬಹಳಷ್ಟು ಅಪಾರ್ಟ್‌ಮೆಂಟ್‌ಗಳು ಹಸಿರಾದವು. ಆದರೆ ನಗರಗಳಲ್ಲಿ ಭಾರೀ ಸಮಸ್ಯೆಗೂ ಕಾರಣವಾಗಿದೆ.
undefined
ಪರಿಸರ ಸ್ನೇಹಿಯಾಗಿ ಬರಬೇಕಾಗಿದ್ದ ಯೋಜನೆ ಮಾರಕವಾಗಿ ಬದಲಾಗುತ್ತಿದೆ. ಖಿಯಿ ಸಿಟಿಯಲ್ಲಿ ಗಾರ್ಡ್‌ನ್‌ಗಳು ಸೊಳ್ಳೆಯ ಕಾಡಾಗಿದೆ.
undefined
ಸರ್ಕಾರ ತಿಳಿಸಿತು ಎಂದು ಜನ ಗಿಡಗಳನ್ನೇನೋ ನೆಟ್ಟರು. ಆದರೆ ಅದನ್ನು ನೋಡಿಕೊಳ್ಳಲಿಲ್ಲ.
undefined
ಪರಿಣಾಮ ಈಗ ಚೀನಾ ಮನೆಯ ಬಾಲ್ಕನಿಗಳಲ್ಲಿ ರಕ್ತ ಹೀರುವ ಅಪಾಯಕಾರಿ ಸೊಳ್ಳೆಗಳು ಕುಟುಂಬ ಸಮೇತ ವಾಸಿಸುತ್ತಿವೆ.
undefined
ಕಾರ್ಬನ್ ಡೈಆಕ್ಸೈಡ್ ಕಡಿಮೆ ಮಾಡಿ ಆಮ್ಲಜನಕದ ಪ್ರಮಾಣ ಹೆಚ್ಚಿಸಿ ವಾಯು ಮಾಲೀನ್ಯದೊಂದಿಗೆ ಹೋರಾಡಲು ಯೋಜನೆ ಮೂಲಕ ಗುರಿ ಇಡಲಾಗಿತ್ತು.
undefined
ಆದರೆ ಸದ್ಯ ಇವೆಲ್ಲವೂ ಉಲ್ಟಾ ಆಗಿದ್ದು, ಪ್ಲಾನ್ ವರ್ಕೌಟ್ ಆಗಿಲ್ಲ.
undefined
ವಸತಿ ಸಮುಚ್ಚಯಗಳ ಕಟ್ಟಡಗಳೇನೋ ಹಸಿರಾಗಿದೆ, ಆದರೆ ವಾಸಕ್ಕೆ ಯೋಗ್ಯವಲ್ಲ ಎಂಬಂತಾಗಿದೆ.
undefined
ಹಸಿರೀಕರಣ ಎಂದ ಬಾಲ್ಕನಿ ತುಂಬ ಗಿಡ ನೆಟ್ಟ ಜನ ಈಗ ಅಪಾಯಕಾರಿ ಸೊಳ್ಳೆ ಕಾಟಕ್ಕೆ ಬೇಸತ್ತಿದ್ದಾರೆ.
undefined