Laptop Expiry Date : ನಾವು ಬಳಸುವ ಯಾವ ವಸ್ತುವೂ ಶಾಶ್ವತ ಅಲ. ಲ್ಯಾಪ್ ಟಾಪ್ ಕೂಡ ಎಕ್ಸ್ಪೈರಿ ಡೇಟ್ ಹೊಂದಿದೆ. ಸೂಕ್ತ ಸಮಯಕ್ಕೆ ಅದನ್ನು ಬದಲಿಸೋದು ಅನಿವಾರ್ಯ.ಯಾವಾಗ ಬದಲಿಸಬೇಕು ಗೊತ್ತಾ?
ಡಿಜಿಟಲ್ ಜಗತ್ತಿನಲ್ಲಿ ಪ್ರತಿಯೊಬ್ಬರೂ ಲ್ಯಾಪ್ ಟಾಪ್ ಬಳಸ್ತಾರೆ. ಆಫೀಸ್, ವರ್ಕ್ ಫ್ರಮ್ ಹೋಮ್, ಕಾಲೇಜು- ಸ್ಕೂಲ್ ವಿದ್ಯಾರ್ಥಿಗಳು ಹೀಗೆ ಎಲ್ಲರಿಗೆ ಲ್ಯಾಪ್ ಟಾಪ್ ಉಪಯುಕ್ತ ಸಾಧನವಾಗಿದೆ. ಒಮ್ಮೆ ಖರೀದಿ ಮಾಡಿದ ಲ್ಯಾಪ್ ಟಾಪ್ ಜೀವನ ಪರ್ಯಂತ ಬರೋದಿಲ್ಲ. ಸ್ಮಾರ್ಟ್ಫೋನ್ಗಳಂತೆ, ಲ್ಯಾಪ್ಟಾಪ್ಗಳು ಒಂದು ನಿರ್ದಿಷ್ಟ ಅವಧಿಯ ನಂತ್ರ ಕೈಕೊಡುತ್ವೆ. ಲ್ಯಾಪ್ಟಾಪ್ಗಳಿಗೂ ಎಕ್ಸ್ಪೈರಿ ಡೇಟ್ ಇದ್ಯೆ ಅಂತ ನೀವು ಕೇಳ್ಬುದು. ಅದಕ್ಕೆ ನಿರ್ದಿಷ್ಟ ದಿನಾಂಕ ಇಲ್ದೆ ಹೋದ್ರೂ ಯಾವಾಗ ಬದಲಿಸಬೇಕು ಎಂಬುದು ನಿಮಗೆ ಗೊತ್ತಿರಬೇಕು.
26
ಅಪ್ಡೇಟ್ ಸಿಗೋದಿಲ್ಲ
ನಿಮ್ಮ ಲ್ಯಾಪ್ ಟಾಪ್ ತುಂಬಾ ಹಳೆಯದಾಗಿದ್ದರೆ ಅಪ್ಡೇಟ್ ಮಾಡಲು ಸಾಧ್ಯವಾಗೋದಿಲ್ಲ. ಹಳೆಯ ಲ್ಯಾಪ್ಟಾಪ್ಗಳು ಹೊಸ ಆಪರೇಟಿಂಗ್ ಸಿಸ್ಟಮ್ಗಳು ಮತ್ತು ಸಾಫ್ಟ್ವೇರ್ಗಳೊಂದಿಗೆ ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಅನೇಕ ಕಂಪನಿಗಳು ಹಳೆಯ ಮಾಡೆಲ್ ಭದ್ರತಾ ನವೀಕರಣಗಳನ್ನು ಒದಗಿಸೋದಿಲ್ಲ. ಆಗ ಡೇಟಾ ಸುರಕ್ಷತೆ ಕಷ್ಟವಾಗ್ಬಹುದು. ನಿಮ್ಮ ಲ್ಯಾಪ್ ಟಾಪ್ ನಲ್ಲಿ ಅಗತ್ಯ ಅಪ್ಡೇಟ್ ಸಿಗ್ತಿಲ್ಲ ಅಂದ್ರೆ ಅದನ್ನು ಬದಲಿಸಿ.
36
ಬೇಗ ಬ್ಯಾಟರಿ ಖಾಲಿ
ಪ್ರತಿ ಲ್ಯಾಪ್ಟಾಪ್ನ ಬ್ಯಾಟರಿ ಬಾಳಿಕೆ ಕಾಲಾನಂತರದಲ್ಲಿ ಕಡಿಮೆಯಾಗುತ್ತದೆ. ನಿಮ್ಮ ಲ್ಯಾಪ್ ಟಾಪ್ ಬ್ಯಾಟರಿ ಜಾರ್ಜ್ ಮಾಡಿದ ಕೆಲವೇ ನಿಮಿಷದಲ್ಲಿ ಖಾಲಿ ಆದ್ರೆ ಅಥವಾ ಬಳಸುವ ಸಮಯದಲ್ಲಿ ಚಾರ್ಜರ್ ಹಾಕಿರ್ಲೇಬೇಕು ಎನ್ನುವವರು ಲ್ಯಾಪ್ ಟಾಪ್ ಬದಿಗಿಡೋದು ಉತ್ತಮ.
ಮೊದಲಿಗಿಂತ ಲ್ಯಾಪ್ಟಾಪ್ ನಿಧಾನವಾಗಿದ್ದರೆ, ಆಗಾಗ್ಗೆ ಹ್ಯಾಂಗ್ ಆಗುತ್ತಿದ್ದರೆ ಅಥವಾ ಓಪನ್ ಆಗಲು ಬಹಳ ಸಮಯ ತೆಗೆದುಕೊಂಡರೆ, ಇದು ಸಿಸ್ಟಮ್ ಹಾರ್ಡ್ವೇರ್ ಹಳೆಯದಾಗಿದೆ ಎಂಬ ಸೂಚನೆ. ಕೆಲವೊಮ್ಮೆ RAM ಅಥವಾ SSD ಅನ್ನು ಅಪ್ಗ್ರೇಡ್ ಮಾಡುವುದರಿಂದ ಸಮಸ್ಯೆಯನ್ನು ಪರಿಹರಿಸಬಹುದು.
56
ಆಗಾಗ ರಿಪೇರಿ
ಲ್ಯಾಪ್ಟಾಪ್ ಕೀಬೋರ್ಡ್, ಸ್ಕ್ರೀನ್, ಮದರ್ಬೋರ್ಡ್ ಅಥವಾ ಇತರ ಹಾರ್ಡ್ವೇರ್ನಲ್ಲಿ ಆಗಾಗ್ಗೆ ಸಮಸ್ಯೆಗಳು ಕಾಣಿಸಿಕೊಳ್ತಿದ್ದರೆ, ಪದೇ ಪದೇ ರಿಪೇರಿ ಮಾಡುವ ಅನಿವಾರ್ಯ ಎದುರಾದರೆ ರಿಪೇರಿಗೆ ಖರ್ಚು ಮಾಡುವ ಬದಲು ಹೊಸ ಲ್ಯಾಪ್ ಟಾಪ್ ಖರೀದಿ ಮಾಡೋದು ಸೂಕ್ತ.
66
ಲ್ಯಾಪ್ ಟಾಪ್ ಹೀಗೆ ರಕ್ಷಿಸಿ
ಲ್ಯಾಪ್ಟಾಪ್ನ ಹೆಚ್ಚುಕಾಲ ಬಾಳಿಕೆ ಬರ್ಬೇಕು ಅಂದ್ರೆ ಕೆಲ ವಿಷ್ಯ ನೆನಪಿಟ್ಟುಕೊಳ್ಳಿ. ನಿಯಮಿತವಾಗಿ ಸಿಸ್ಟಮ್ ಸ್ವಚ್ಛಗೊಳಿಸಿ. ಅನಗತ್ಯ ಫೈಲ್ಗಳನ್ನು ತೆಗೆದುಹಾಕಿ. ಸಾಫ್ಟ್ವೇರ್ ನವೀಕರಿಸಿ. ವಿಶ್ವಾಸಾರ್ಹ ಆಂಟಿವೈರಸ್ ಬಳಸಿ. SSD ಮತ್ತು RAM ಅನ್ನು ಅಪ್ಗ್ರೇಡ್ ಮಾಡುವುದರಿಂದ ಅನೇಕ ಹಳೆಯ ಲ್ಯಾಪ್ಟಾಪ್ಗಳ ವೇಗವನ್ನು ಗಮನಾರ್ಹವಾಗಿ ಸುಧಾರಿಸಬಹುದು.
ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್ ಸಿಗುವ ಏಕೈಕ ತಾಣ ಏಷ್ಯಾನೆಟ್ ಸುವರ್ಣ ನ್ಯೂಸ್. ಹೊಸ ಗ್ಯಾಜೆಟ್ ರಿಲೀಸ್ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್ ಎಕ್ಸ್‌ಪ್ಲೇನರ್ಸ್ ಹಾಗೂ ಗ್ಯಾಜೆಟ್ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.