BSNL vs Jio vs Airtel: ಏರ್ಟೆಲ್ ಜಿಯೋ ಬಿಎಸ್ ಎನ್ ನಲ್ಲಿ ಯಾವ ಕಂಪನಿ 51 ರೂ.ಗೆ ನೀಡ್ತಿದೆ ಬೆಸ್ಟ್ ಪ್ಲಾನ್ ?

Published : Jul 09, 2026, 12:12 PM IST

ಕಡಿಮೆ ಬೆಲೆಯಲ್ಲಿ ಹೆಚ್ಚು ಪ್ರಯೋಜನ ಇರುವ ಡೇಟಾ ಪ್ಲಾನ್ ಗ್ರಾಹಕರು ಬಯಸ್ತಾರೆ. ಟೆಲಿಕಾಂ ಕಂಪನಿಯಲ್ಲಿ ಸ್ಪರ್ಧೆ ಹೆಚ್ಚಾಗಿದೆ. 51 ರೂಪಾಯಿಗೆ ಯಾವ ಕಂಪನಿ ಹೆಚ್ಚು ಪ್ರಯೋಜನ ನೀಡುವ ಯೋಜನೆ ನೀಡ್ತಿದೆ ಎನ್ನುವ ಮಾಹಿತಿ ಇಲ್ಲಿದೆ.

PREV
14
ಬಿಎಸ್ ಎನ್ ಎಲ್ (BSNL) ಪ್ಲಾನ್

ಬಿಎಸ್ ಎನ್ ಎಲ್ ತನ್ನ 51 ರೂಪಾಯಿ ಸ್ಮಾರ್ಟ್ ಸ್ಟಾರ್ಟ್ ಯೋಜನೆಯಲ್ಲಿ ಅನಿಯಮಿತ ಧ್ವನಿ ಕರೆ ನೀಡ್ತಿದೆ. ಈ ಯೋಜನೆ 28 ದಿನಗಳ ವ್ಯಾಲಿಡಿಟಿ ಜೊತೆ ಬರ್ತಿದೆ. ದೇಶಾದ್ಯಂತ ಯಾವುದೇ ನೆಟ್ವರ್ಕ್ನಲ್ಲಿ ಬಳಕೆದಾರರಿಗೆ ಅನಿಯಮಿತ ಧ್ವನಿ ಕರೆಯನ್ನು ಸಹ ನೀಡಲಾಗ್ತಿದೆ. ಡೇಟಾದ ಬಗ್ಗೆ ಹೇಳೋದಾದ್ರೆ ಬಿಎಸ್ ಎನ್ ಎಲ್ 51 ರೂಪಾಯಿ ಪ್ಲಾನ್ ನಲ್ಲಿ ದಿನಕ್ಕೆ 2GB ಹೈ-ಸ್ಪೀಡ್ ಡೇಟಾವನ್ನು ನೀಡುತ್ತಿದೆ. 28 ದಿನಗಳಲ್ಲಿ ಒಟ್ಟು 56GB ಡೇಟಾ ಗ್ರಾಹಕರಿಗೆ ಸಿಗ್ತಿದೆ. ಕಂಪನಿ ದಿನಕ್ಕೆ 100 ಎಸ್ ಎಂಎಸ್ ಫ್ರೀಯಾಗಿ ನೀಡ್ತಿದೆ.

24
ಏರ್ಟೆಲ್ನ 51 ರೂ. ಪ್ಲಾನ್

ಏರ್ಟೆಲ್ ಕೂಡ 51 ರೂಪಾಯಿ ಪ್ಲಾನ್ ಹೊಂದಿದೆ. ಇದು ಡೇಟಾ ಬೂಸ್ಟರ್ ಯೋಜನೆಯಾಗಿದೆ. ಈ ರೀಚಾರ್ಜ್ 1GB ಹೈ-ಸ್ಪೀಡ್ ಡೇಟಾವನ್ನು ನೀಡುತ್ತದೆ. ಇದಕ್ಕೆ ಯಾವುದೇ ಮಾನ್ಯತೆ ಇಲ್ಲ. ಇದು ನಿಮ್ಮ ಪ್ರಸ್ತುತ ಸಕ್ರಿಯ ಯೋಜನೆಯ ಅವಧಿಗೆ ಮಾತ್ರ ಮಾನ್ಯವಾಗಿರುತ್ತದೆ. ಈ ಯೋಜನೆ ಅನಿಯಮಿತ ಕರೆ ಮತ್ತು SMS ಪ್ರಯೋಜನಗಳ ಜೊತೆ ಬರ್ತಿಲ್ಲ. ಈಗಾಗಲೇ ನಿಮ್ಮ ಸಂಖ್ಯೆಯಲ್ಲಿ ಸಕ್ರಿಯ ಏರ್ಟೆಲ್ ಪ್ರಿಪೇಯ್ಡ್ ಯೋಜನೆಯನ್ನು ಹೊಂದಿದ್ದರೆ ಮತ್ತು ಕೆಲವು ಹೆಚ್ಚುವರಿ ಡೇಟಾ ಅಗತ್ಯವಿದ್ದರೆ, ಕಂಪನಿಯ 51 ರೂ ಡೇಟಾ ಆಡ್-ಆನ್ ಯೋಜನೆ ಪಡೆಯಬಹುದು.

34
ಜಿಯೋದ 49 ರೂ. ಪ್ಲಾನ್

ಜಿಯೋ 51 ರೂಪಾಯಿ ಬದಲು 49 ರೂಪಾಯಿಗೆ ಪ್ಲಾನ್ ನೀಡ್ತಿದೆ. ಅಲ್ಪಾವಧಿಗೆ ಹೆಚ್ಚಿನ ಇಂಟರ್ನೆಟ್ ಡೇಟಾ ಬೇಕು ಅನ್ನೋರು ಜಿಯೋದ 49 ಡೇಟಾ ಆಡ್-ಆನ್ ಪ್ಲಾನ್ ಪಡೆಯಬಹುದು. ಈ ಪ್ಲಾನ್ ಕೇವಲ 1 ದಿನದ ವ್ಯಾಲಿಡಿಟಿ ಹೊಂದಿದೆ. ಬಳಕೆದಾರರರು ಅನಿಯಮಿತ ಡೇಟಾವನ್ನು ಇದ್ರಲ್ಲಿ ಪಡೆಯುತ್ತಾರೆ. ಈ ಯೋಜನೆಗೆ 25GB ಯ FUP ಮಿತಿ ಅನ್ವಯಿಸುತ್ತದೆ. ಇದರರ್ಥ ನೀವು ದಿನಕ್ಕೆ 25GB ವರೆಗೆ ಹೈ-ಸ್ಪೀಡ್ ಇಂಟರ್ನೆಟ್ ಬಳಸಬಹುದು. ಇದ್ರ ನಂತ್ರ ಸಂಪೂರ್ಣ ಡೇಟಾ ಬಂದ್ ಆಗೋದಿಲ್ಲ. ಆದ್ರೆ ಇಂಟರ್ನೆಟ್ ವೇಗ 64Kbps ಗೆ ಇಳಿಯುತ್ತದೆ.

44
ಯಾವುದು ಬೆಸ್ಟ್?

ನೀವು ಮೂರೂ ಕಂಪನಿ ಪ್ಲಾನ್ ಹೋಲಿಸಿ ನೋಡಿದ್ರೆ ಸದ್ಯ ಬಿಎಸ್ ಎನ್ ಎಲ್ 51 ರೂಪಾಯಿ ಪ್ಲಾನ್ ಉಪಯುಕ್ತವಾಗಿದೆ. ಕಡಿಮೆ ಬೆಲೆಯಲ್ಲಿ ಡೇಟಾ, ಕರೆ ಮತ್ತು SMS ನೊಂದಿಗೆ ಸಂಪೂರ್ಣ ಪ್ಯಾಕೇಜ್ ಪಡೆಯಲು ನೀವು ಬಯಸಿದರೆ, ಬಿಎಸ್ ಎನ್ ಎಲ್ ಈ ಪ್ಲಾನ್ ಖರೀದಿ ಮಾಡ್ಬಹುದು.

ಸ್ಮಾರ್ಟ್‌ಫೋನ್‌ಗಳು ಮತ್ತು AI ನಿಂದ ಸೈಬರ್‌ ಭದ್ರತೆ ಮತ್ತು ವಿಜ್ಞಾನದ ಪ್ರಗತಿಯವರೆಗೆ ಇತ್ತೀಚಿನ ಟೆಕ್ನಾಲಜಿ (Technology News in Kannada) ಬಗ್ಗೆ ನಿರಂತರವಾದ ಅಪ್‌ಡೇಟ್‌. ಡಿಜಿಟಲ್ ಟ್ರೆಂಡ್‌ಗಳ ಕುರಿತು ತಜ್ಞರ ಮಾತುಗಳು, ವಿವರವಾದ ಮಾಹಿತಿ ಮತ್ತು ಬ್ರೇಕಿಂಗ್ ನ್ಯೂಸ್‌ ಸಿಗುವ ಏಕೈಕ ತಾಣ ಏಷ್ಯಾನೆಟ್‌ ಸುವರ್ಣ ನ್ಯೂಸ್‌. ಹೊಸ ಗ್ಯಾಜೆಟ್‌ ರಿಲೀಸ್‌ ಆಯ್ತಾ? ಹೊಸ ಸ್ಟಾರ್ಟ್‌ಅಪ್‌ಗಳು ಬಂದಿದ್ಯಾ? ಭವಿಷ್ಯವನ್ನು ಬದಲಿಸುವ ಟೆಕ್‌ ಪಾಲಿಸಿ ಯಾವುದು? ಇವುಗಳ ಇಂಚಿಂಚೂ ಮಾಹಿತಿ ಸಿಗಲಿದೆ. ಟೆಕ್‌ ಎಕ್ಸ್‌ಪ್ಲೇನರ್ಸ್‌ ಹಾಗೂ ಗ್ಯಾಜೆಟ್‌ ಡೆಮೋ ವಿಡಿಯೋಗಳು ಕೂಡ ನೀವು ಕಾಣಬಹುದು.

Read more Photos on
click me!

Recommended Stories