SAFF Championship: ಏಷ್ಯಾ ಕಪ್ ಗೆದ್ದ ಬೆನ್ನಲ್ಲೇ ಇಂದು ಮತ್ತೆ ಭಾರತ-ಪಾಕಿಸ್ತಾನ ಮುಖಾಮುಖಿ!

Published : Nov 17, 2026, 07:58 AM IST

ಅಂಡರ್-19 ಏಷ್ಯಾ ಕಪ್ ಕ್ರಿಕೆಟ್‌. ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ರೋಚಕ ಹೋರಾಟದ ಮೂಲಕ ಟೀಮ್ ಇಂಡಿಯಾ ಪಾಕಿಸ್ತಾನವನ್ನು ಒಂದು ವಿಕೆಟ್ ನಿಂದ ಸೋಲಿಸಿ ಒಂಭತ್ತನೇ ಬಾರಿಗೆ ಅಂಡರ್-19 ಏಷ್ಯಾ ಕಪ್ ಗೆದ್ದುಕೊಂಡು ಬೆನ್ನಲ್ಲೇ ಇಂದು ಮತ್ತೆ ಭಾರತ ಪಾಕಿಸ್ತಾನ ಮುಖಾಮುಖಿಯಾಗಲಿವೆ.

PREV
14
SAFF Championship ಫುಟ್ಬಾಲ್ ಫೈನಲ್: ಇಂದು ಭಾರತ ಪಾಕಿಸ್ತಾನ ಮುಖಾಮುಖಿ

ಅಂಡರ್-19 ಏಷ್ಯಾ ಕಪ್ ಕ್ರಿಕೆಟ್‌. ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ರೋಚಕ ಹೋರಾಟದ ಮೂಲಕ ಟೀಮ್ ಇಂಡಿಯಾ ಪಾಕಿಸ್ತಾನವನ್ನು ಒಂದು ವಿಕೆಟ್ ನಿಂದ ಬಗ್ಗು ಬಡಿಯುವ ಮೂಲಕ ಭಾರತ ಒಂಭತ್ತನೇ ಬಾರಿಗೆ ಅಂಡರ್-19 ಏಷ್ಯಾ ಕಪ್ ಗೆದ್ದುಕೊಂಡು ಬೀಗಿತು. ಈ ಗೆಲುವಿಗಾಗಿ ಇಡೀ ದೇಶ ಸಂಭ್ರಮಿಸಿತು. ಆ ಕುರಿತು ಇನ್ನೂ ಚರ್ಚೆ ನಡೆಯುತ್ತಿರುವಾಗ ಇದೀಗ ಮತ್ತೆ ಭಾರತ ಪಾಕಿಸ್ತಾನ ಇಂದು ಮುಖಾಮುಖಿಯಾಗಲಿವೆ. ಆದರೆ ಈ ಬಾರಿ ಕ್ರಿಕೆಟ್ ಅಲ್ಲ ಫುಟ್ಬಾಲ್!

24
ಭಾರತ ತಂಡ ದಾಖಲೆಯ 10ನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ!

ಹೌದು. ಇಂದು(ಮಂಗಳವಾರ) ಸ್ಯಾಫ್‌ ಚಾಂಪಿಯನ್‌ಶಿಪ್‌ ಫುಟ್ಬಾಲ್‌ ಟೂರ್ನಿ(SAFF Championship Football Tournament)ಯ ಫೈನಲ್‌ ಪಂದ್ಯ ನಡೆಯಲಿದ್ದು, ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ಸೆಣಸಾಡಲಿದೆ. ಈ ಪಂದ್ಯವೂ ಕೂಡ ರೋಚಕವಾಗಿಸುವ ಎಲ್ಲ ಲಕ್ಷಣಗಳು ಕಾಣುತ್ತಿವೆ.

ವಿಶೇಷ ಎಂದರೆ ಕ್ರಿಕೆಟ್‌ನಲ್ಲಿ ಭಾರತ ಒಂಬತ್ತನೇ ಬಾರಿ ಏಷ್ಯಾಕಪ್ ಗೆದ್ದುಕೊಂಡರೆ, ಫುಟ್ಬಾಲ್‌ನಲ್ಲೂ ಹಾಲಿ ಚಾಂಪಿಯನ್‌ ಭಾರತ ತಂಡ ದಾಖಲೆಯ 10ನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ!

34
ಪಾಕಿಸ್ತಾನ ಗೆಲ್ಲುತ್ತಾ?

ಇನ್ನು ಇದೇ ಮೊದಲ ಬಾರಿಗೆ ಫೈನಲ್‌ಗೆ ಬಂದಿರುವ ಪಾಕ್‌ ತಂಡ ಚೊಚ್ಚಲ ಟ್ರೋಫಿ ಗೆಲ್ಲಲು ಹೋರಾಡಲಿದೆ. ಭಾರತ ಈ ಹಿಂದೆ 1993, 1997, 1999, 2005, 2009, 2011, 2015, 2021 ಮತ್ತು 2023ರಲ್ಲಿ ಚಾಂಪಿಯನ್‌ ಆಗಿತ್ತು. ಈ ಬಾರಿ ಟೂರ್ನಿಯ ಗುಂಪು ಹಂತದ 2 ಪಂದ್ಯಗಳಲ್ಲೂ ಭಾರತ ಗೆದ್ದಿದೆ.

ಆರಂಭಿಕ ಪಂದ್ಯದಲ್ಲಿ ಪಾಕಿಸ್ತಾನವನ್ನು 3-2 ಗೋಲುಗಳಿಂದ ಸೋಲಿಸಿದ್ದ ಭಾರತ, ಬಳಿಕ ಮಾಲ್ಡೀವ್ಸ್‌ ವಿರುದ್ಧ 1-0 ಜಯಗಳಿಸಿತ್ತು. ಸೆಮಿಫೈನಲ್‌ನಲ್ಲಿ ಭೂತಾನ್‌ ವಿರುದ್ಧ 2-1ರಲ್ಲಿ ಗೆದ್ದಿತ್ತು. ಅತ್ತ ಪಾಕ್‌ ತಂಡ ಸೆಮೀಸ್‌ನಲ್ಲಿ ಬಾಂಗ್ಲಾದೇಶವನ್ನು ಮಣಿಸಿತ್ತು.

44
ಪಂದ್ಯ ಆರಂಭವಾಗುವ ಸಮಯ

ಭಾರತ vs ಪಾಕಿಸ್ತಾನ SAFF ಚಾಂಪಿಯನ್‌ಶಿಪ್ 2026 ಫೈನಲ್ ಪಂದ್ಯವನ್ನು ನೇರ ಪ್ರಸಾರದಲ್ಲಿ ವೀಕ್ಷಿಸಬಹುದಾಗಿದೆ. ಇಂದಿನ. IND vs PAK ಫುಟ್‌ಬಾಲ್ ಪಂದ್ಯ ಸಮಯ ಸಂಜೆ 7:30 ಕ್ಕೆ ಪ್ರಾರಂಭವಾಗಲಿದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories