ವಾಣಿಜ್ಯ ಪಾಲುದಾರರ ಕೊರತೆಯಿಂದ ಹಲವು ದಿನಗಳಿಂದ ಸ್ಥಗಿತವಾಗಿದ್ದ ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ ಟೂರ್ನಿ ಕೊನೆಗೂ ಕೇಂದ್ರ ಸರ್ಕಾರ ಮಧ್ಯಸ್ಥಿತಿಯೊಂದಿಗೆ ಆರಂಭಗೊಳ್ಳುತ್ತಿದೆ.
25
ಫೆಬ್ರವರಿ 14ರಿಂದ ಆರಂಭ
ಫೆ.14ರಿಂದ 12ನೇ ಆವೃತ್ತಿ ಶುರುವಾಗಲಿದೆ. ಎಲ್ಲಾ 14 ತಂಡಗಳು ಪಾಲ್ಗೊಳ್ಳಲಿವೆ ಎಂದು ಕೇಂದ್ರ ಕ್ರೀಡಾ ಸಚಿವ ಮನ್‌ಸುಖ್ ಮಾಂಡವೀಯ ಮಂಗಳವಾರ ಘೋಷಿಸಿದರು.
35
ಕೇಂದ್ರ ಕ್ರೀಡಾ ಸಚಿವರ ಮಹತ್ವದ ಮಾಹಿತಿ
‘ಐಎಸ್‌ಎಲ್ ಬಗ್ಗೆ ಸಾಕಷ್ಟು ಗೊಂದಲಗಳಿದ್ದವು. ಆದರೆ ಇಂದು ಸರ್ಕಾರ, ಫುಟ್ಬಾಲ್ ಫೆಡರೇಶನ್ ಹಾಗೂ ಎಲ್ಲಾ 14 ಕ್ಲಬ್‌ಗಳು ಸೇರಿ ಸಭೆ ನಡೆಸಿದ್ದು, ಫೆ.14ರಿಂದ ಟೂರ್ನಿಯನ್ನು ಆರಂಭಿಸಲು ನಿರ್ಧರಿಸಲಾಗಿದೆ’ ಎಂದು ಮಾಂಡವೀಯ ತಿಳಿಸಿದರು.
ಟೂರ್ನಿಯಲ್ಲಿ ಒಟ್ಟು 91 ಪಂದ್ಯಗಳು ನಡೆಯಲಿದ್ದು, ವೇಳಾಪಟ್ಟಿಯನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಫುಟ್ಬಾಲ್ ಫೆಡರೇಶನ್ ತಿಳಿಸಿದೆ.
55
ಟೂರ್ನಿ ಆಯೋಜನೆಗೆ ಬೇಕಿದೆ 25 ಕೋಟಿ ರುಪಾಯಿ
ಟೂರ್ನಿ ಆಯೋಜನೆಗೆ ₹25 ಕೋಟಿ ರು. ಅಗತ್ಯವಿದ್ದು, ಫುಟ್ಬಾಲ್ ಫೆಡರೇಶನ್ ₹14 ಕೋಟಿ ಒದಗಿಸಲಿದೆ. ಉಳಿದ ಹಣವನ್ನು ಕ್ಲಬ್‌ಗಳು ಹೊಂದಿಸಬೇಕು ಎಂದು ಒಪ್ಪಂದವಾಗಿದೆ ಎಂದು ತಿಳಿದುಬಂದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.