Cristiano Ronaldo: ಮಡೈರಾದ ಒಂದು ಸಣ್ಣ ಮನೆಯಲ್ಲಿ ಬೆಳೆದ ರೊನಾಲ್ಡೊ ಈಗ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟುಗಳಲ್ಲಿ ಒಬ್ಬರಾಗಿದ್ದಾರೆ. ಸ್ಪೇನ್ ವಿರುದ್ಧ ಪೋರ್ಚುಗಲ್ ಸೋಲಿನ ನಂತರ ವಿಶ್ವಕಪ್‌ನಿಂದ ನಿರ್ಗಮಿಸಿದ ರೊನಾಲ್ಡೋ ಒಟ್ಟು ನೆಟ್ ವರ್ತ್ ಎಷ್ಟು ಗೊತ್ತಾ? ಇಲ್ಲಿದೆ ಮಾಹಿತಿ.
ಸ್ಪೇನ್ ವಿರುದ್ಧ ಪೋರ್ಚುಗಲ್ ಸೋಲಿನೊಂದಿಗೆ, ಶ್ರೇಷ್ಠ ಫುಟ್ಬಾಲ್ ಆಟಗಾರರಲ್ಲಿ ಒಬ್ಬರಾದ ಕ್ರಿಸ್ಟಿಯಾನೊ ರೊನಾಲ್ಡೊ ಅವರ ವಿಶ್ವಕಪ್ ವೃತ್ತಿಜೀವನ ಕೊನೆಗೊಂಡಿದೆ. ರೊನಾಲ್ಡೊ ಫುಟ್ಬಾಲ್ ಪ್ರಿಯರ ಪಾಲಿನ ದೇವರು. ಅವರ ಹೆಸರು ದಾಖಲೆ ಪುಸ್ತಕಗಳಲ್ಲಿ ಕೆತ್ತಲ್ಪಟ್ಟಿದೆ. ಆದರೆ ಪೋರ್ಚುಗೀಸ್ ಸ್ಟಾರ್ ವಿಶ್ವಕಪ್ ಗೆಲ್ಲದೇ, ಖಾಲಿ ಕೈಯಲ್ಲಿ ಕಣ್ಣೀರಿಡುತ್ತಾ ವಿದಾಯ ಹೇಳಿದ್ದು ಮಾತ್ರ ಅಭಿಮಾನಿಗಳ ಕಣ್ಣಂಚನ್ನು ಒದ್ದೆ ಮಾಡಿದೆ. ರೊನಾಲ್ಡೊ ವಿಶ್ವಕಪ್ ಟ್ರೋಫಿಯನ್ನು ಗೆದ್ದಿಲ್ಲದಿರಬಹುದು, ಆದರೆ ಫುಟ್‌ಬಾಲ್‌ನಲ್ಲಿ ಅವರು ಬಿಟ್ಟ ಗುರುತು, ಅವರ ಸಾಧನೆ ನೂರು ಜನ್ಮಕ್ಕೆ ಆಗುವಂತಹುದು.
26
ತಂದೆ ತೋಟದ ಮಾಲಿ, ತಾಯಿ ಸೇವಕಿ ಬಡತನದಲ್ಲಿ ಬೆಳೆದ ರೊನಾಲ್ಡೋ
ರೊನಾಲ್ಡೊ ಇಂದು ವಿಶ್ವದ ಅತ್ಯಂತ ಶ್ರೀಮಂತ ಫುಟ್ಬಾಲ್ ಆಟಗಾರ. ಅವರ ಆಸ್ತಿ ಶತಕೋಟಿಗಳಷ್ಟು. ಆದರೆ ಈ ಹಂತಕ್ಕೆ ತಲುಪುವ ಅವರ ಪ್ರಯಾಣ ಸುಲಭವಾಗಿರಲಿಲ್ಲ. ವರದಿಗಳ ಪ್ರಕಾರ ರೊನಾಲ್ಡೋ ತಂದೆ ಮದ್ಯವ್ಯಸನಿಯಾಗಿದ್ದರು, ತೋಟದ ಮಾಲಿಯಾಗಿ ಕೆಲಸ ಮಾಡುತ್ತಿದ್ದರು. ತಾಯಿ ಇತರರ ಮನೆಗೆ ಹೋಗಿ ಕೆಲಸ ಮಾಡುತ್ತಿದ್ದರು. ಮನೆ ನಡೆಸುವ ಜವಾಬ್ಧಾರಿ ತಾಯಿಯ ಹೆಗಲ ಮೇಲೆ. ಕಠಿಣ ಪರಿಸ್ಥಿತಿಯ ನಡುವೆ ಶಾಲೆ ಹೋದ ರೊನಾಲ್ಡೋಗೆ ಜೀವನವನ್ನು ಬದಲಾಯಿಸಲೇಬೇಕು ಎಂಬ ಹಠ ಬೆಳೆಯಿತು.
36
8ನೇ ವಯಸ್ಸಿನಲ್ಲಿ ಫುಟ್ಬಾಲ್ ಕ್ರೇಜ್ ಶುರು
ರೊನಾಲ್ಡೊ ಕೇವಲ ಎಂಟು ವರ್ಷ ವಯಸ್ಸಿನವನಾಗಿದ್ದಾಗ ಫುಟ್ಬಾಲ್ ಆಡಲು ಪ್ರಾರಂಭಿಸಿದರು. 14 ನೇ ವಯಸ್ಸಿನಲ್ಲಿ, ಕೋಪದಿಂದ ತನ್ನ ಶಾಲಾ ಶಿಕ್ಷಕನ ಮೇಲೆ ಕುರ್ಚಿಯನ್ನು ಎಸೆದಿದ್ದರು ರೊನಾಲ್ಡೋ. ಆದರೆ ಅವರ ತಾಯಿ ಕೋಪವನ್ನೆಲ್ಲಾ ಫುಟ್ಬಾಲ್ ಮೇಲೆ ಹರಿಸುವಂತೆ ಮಾಡಿದರು. ಆದರೆ ಕ್ರಿಸ್ಟಿಯಾನೊರನ್ನು ಜಗತ್ತಿಗೆ ಪರಿಚಯಿಸಿದರು ಜೋಸ್ ದಿನಿಸ್ ಅವೆರೊ.
ಇಂದು, ರೊನಾಲ್ಡೊ ವಿಶ್ವದ ಅತ್ಯಂತ ಶ್ರೀಮಂತ ಕ್ರೀಡಾಪಟುವಾಗಿದ್ದು, ಅವರ ನೆಟ್ ವರ್ತ್ ಶತಕೋಟಿ ಡಾಲರ್. ಫೋರ್ಬ್ಸ್ ಪ್ರಕಾರ, ರೊನಾಲ್ಡೋ ಕಳೆದ 10 ವರ್ಷಗಳಿಂದ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಜೂನ್ 2025 ರಲ್ಲಿ, ರೊನಾಲ್ಡೊ ಸೌದಿ ಕ್ಲಬ್‌ನೊಂದಿಗಿನ ತನ್ನ ಒಪ್ಪಂದವನ್ನು ಇನ್ನೂ ಎರಡು ವರ್ಷಗಳ ಕಾಲ ವಿಸ್ತರಿಸಿದರು. ಈ ಕ್ಲಬ್‌ನಿಂದಲೇ ಅವರ ವಾರ್ಷಿಕ ವೇತನ ಸುಮಾರು $200 ರಿಂದ $235 ಮಿಲಿಯನ್ ದೊರೆಯುತ್ತದೆ. ಸೌದಿ ಅರೇಬಿಯಾದ ಟ್ಯಾಕ್ಸ್-ಫ್ರೀ ರಚನೆಯಿಂದಾಗಿ ಈ ಹಣದ ಬಹುಪಾಲು ಅವರ ಖಾತೆಗೆ ತಲುಪುತ್ತದೆ, ಇದರಿಂದಾಗಿ ರೊನಾಲ್ಡೋ ನೆಟ್ ವರ್ತ್ ಹೆಚ್ಚುತ್ತಲೇ ಇದೆ.
56
ಕರಿಯರ್ ನಲ್ಲಿ ಗಳಿಸಿದ್ದೆಷ್ಟು?
2003 ರಲ್ಲಿ ಸ್ಪೋರ್ಟಿಂಗ್ ಸಿಪಿಯಲ್ಲಿ ಪ್ರೊಫೆಶನಲ್ ಆಟಗಾರರಾಗಿ ಎಂಟ್ರಿ ಕೊಟ್ಟ ಬಳಿಕ, ಮ್ಯಾಂಚೆಸ್ಟರ್ ಯುನೈಟೆಡ್, ರಿಯಲ್ ಮ್ಯಾಡ್ರಿಡ್, ಜುವೆಂಟಸ್ ಮತ್ತು ಅಲ್ ನಾಸರ್ ಜೊತೆಗೆ ಒಪ್ಪಂದಗಳನ್ನು ಮಾಡಿಕೊಳ್ಳುವ ಮೂಲಕ ತಮ್ಮ ಫುಟ್ಬಾಲ್ ಕರಿಯರ್ ನಲ್ಲಿ US$550 ಮಿಲಿಯನ್ ಗಳಿಸಿದ್ದಾರೆ. ರೊನಾಲ್ಡೋ ನೈಕ್ ಜೊತೆ ಜೀವಮಾನದ ಒಪ್ಪಂದವನ್ನು ಸಹ ಮಾಡಿಕೊಂಡಿದ್ದಾರೆ. ಇದು $1 ಬಿಲಿಯನ್‌ಗಿಂತಲೂ ಹೆಚ್ಚು ಮೌಲ್ಯವನ್ನು ಹೊಂದಿದೆ.
66
ಬ್ರಾಂಡ್, ಕೊಲಾಬರೇಶನ್ ಹಾಗೂ ಸೋಶಿಯಲ್ ಮೀಡಿಯಾ
ತಮ್ಮದೇ ಆದ ಹಲವಾರು ಬ್ರಾಂಡ್ ಗಳನ್ನು ಹೊಂದಿದ್ದಾರೆ ರೊನಾಲ್ಡೋ. ಹೋಟೆಲ್‌ಗಳು, ಬಟ್ಟೆ, ಸುಗಂಧ ದ್ರವ್ಯಗಳು ಮತ್ತು ತಮ್ಮ CR7 ಬ್ರ್ಯಾಂಡ್‌ನಿಂದ ಹಣ ಸಂಪಾದಿಸುತ್ತಾರೆ. ರೊನಾಲ್ಡೋ ಲಿಸ್ಬನ್, ಮಡೈರಾ, ಮ್ಯಾಡ್ರಿಡ್, ನ್ಯೂಯಾರ್ಕ್ ಮತ್ತು ಮರ್ಕೆಚ್‌ನಲ್ಲಿ CR7 ಹೋಟೆಲ್‌ಗಳನ್ನು ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ ಹರ್ಬಲೈಫ್, ಕ್ಲಿಯರ್ ಮತ್ತು ಅರ್ಮಾನಿಯಂತಹ ಕಂಪನಿಗಳನ್ನು ಸಹ ಅನುಮೋದಿಸುತ್ತಾರೆ, ಇವುಗಳಿಂದಾಗಿ ವಾರ್ಷಿಕವಾಗಿ ಸುಮಾರು $50 ರಿಂದ $60 ಮಿಲಿಯನ್ ಗಳಿಸುತ್ತಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಪಂಚದಲ್ಲೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವವರು ಅಂದರೆ ರೊನಾಲ್ಡೊ. ಪ್ರತಿ ವರ್ಷ ತಮ್ಮ ಪೋರ್ಟ್‌ಫೋಲಿಯೊಗೆ $125 ರಿಂದ $175 ಮಿಲಿಯನ್ ಗಳಿಸುತ್ತಾರೆ. ಇದರಲ್ಲದೇ ಶೇರ್ ಹಾಗೂ ಇತರ ಮೂಲಗಳಿಂದಲೂ ರೊನಾಲ್ಡೊ ಹಣ ಗಳಿಸುತ್ತಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.