ಮೆಸ್ಸಿಗೆ ಗೋಲು ಹೊಸದಲ್ಲ ಆದರೂ ಅಲ್ಜೆರಿಯಾ ವಿರುದ್ಧ ಹ್ಯಾಟ್ರಿಕ್ ಸಿಡಿಸಿ ಮೈದಾನದಲ್ಲೇ ಅತ್ತಿದ್ದೇಕೆ?

Published : Jun 17, 2026, 03:56 PM IST

ಫಿಫಾ ವಿಶ್ವಕಪ್‌ನಲ್ಲಿ ಲಿಯೋನಲ್ ಮೆಸ್ಸಿ ಅಲ್ಜೆರಿಯಾ ವಿರುದ್ದ ಹ್ಯಾಟ್ರಿಕ್ ಗೋಲು ಸಿಡಿಸಿ ದಾಖಲೆ ಬರೆದಿದ್ದಾರೆ. ಆದರೆ ಮೆಸ್ಸಿ ಗೋಲು ಸಿಡಿಸಿದ ಬೆನ್ನಲ್ಲೇ ಭಾವುಕರಾಗಿದ್ದಾರೆ. ಮೈದಾನದಲ್ಲಿ ಅತ್ತಿದ್ದೇಕೆ? ಈ ಮಾಹಿತಿ ಬಹಿರಂಗವಾಗಿದೆ.

PREV
16
ಮೈದಾನದಲ್ಲಿ ಕಣ್ಣೀರಿಟ್ಟ ಮೆಸ್ಸಿ

ಫಿಫಾ ವಿಶ್ವಕಪ್ ಕಾವು ಏರುತ್ತಿದೆ. ಅದರಲ್ಲೂ ಪ್ರಮುಖ ಫುಟ್ಬಾಲ್ ಪಟುಗಳ ಆಟವನ್ನು ಅಭಿಮಾನಿಗಳು ಕಣ್ತುಂಬಿಕೊಳ್ಳುತ್ತಿದ್ದಾರೆ. ಈ ಪೈಕಿ ಲಿಯೋನಲ್ ಮೆಸ್ಸಿ ಸಿಡಿಸಿದ ಹ್ಯಾಟ್ರಿಕ್ ಗೋಲಿನಿಂದ ವಿಶ್ವಾದ್ಯಂತ ಮೆಸ್ಸಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಫಿಫಾ ವಿಶ್ವಕಪ್, ಲೀಗ್ ಸೇರಿದಂತೆ ಹಲವು ಟೂರ್ನಿಗಳಲ್ಲಿ ಮೆಸ್ಸಿ ಅದ್ಭುತ ಗೋಲು ಸಿಡಿಸಿದ್ದಾರೆ. ಆದರೆ ಈ ಬಾರಿಯ ಫಿಫಾ ವಿಶ್ವಕಪ್‌ನಲ್ಲಿ ಅಲ್ಜೆರಿಯಾ ವಿರುದ್ದ ಮೊದಲ ಗೋಲು ಸಿಡಿಸುತ್ತಿದ್ದಂತೆ ಮೆಸ್ಸಿ ಭಾವುಕರಾಗಿ ಮೈದಾನದಲ್ಲೇ ಕಣ್ಣೀರಿಟ್ಟಿದ್ದಾರೆ.

26
ಜರ್ಸಿಯಲ್ಲಿ ಒರೆಸೆ ಆಟ ಮುಂದುವರಿಸಿದ ಮೆಸ್ಸಿ

38ರ ಹರೆಯದ ಮೆಸ್ಸಿ ಅಲ್ಜೆರಿಯಾ ವಿರುದ್ದ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಸಿಡಿಸಿ ದಾಖಲೆ ಬರೆದಿದ್ದಾರೆ. ಆದರೆ ಅಲ್ಜೆರಿಯಾ ವಿರುದ್ದ ಮೊದಲ ಗೋಲು ಸಿಡಿಸುತ್ತಿದ್ದಂತೆ ಮೆಸ್ಸಿ ಮೈದಾನದಲ್ಲಿ ಕಣ್ಣೀರಿಟ್ಟಿದ್ದಾರೆ. ಹಲವು ಬಾರಿ ನಿಯಂತ್ರಿಸಲು ಪ್ರಯತ್ನಿಸಿದರು ಕಣ್ಣೀರು ಸುರಿದಿತ್ತು. ಬಳಿಕ ತಮ್ಮ ಜರ್ಸಿಯಲ್ಲೇ ಒರೆಸಿಕೊಂಡು ಆಟ ಮುಂದುವರಿಸಿದ್ದರು.

36
ಮೆಸ್ಸಿ ಕಣ್ಣೀರಿಗೆ ಕಾರಣವೇನು?

ಲಿಯೋನಲ್ ಮೆಸ್ಸಿ ಗೋಲು ಸಿಡಿಸಿ ಕಣ್ಣೀರಿಟ್ಟ ಘಟನೆಗೆ ಅಭಿಮಾನಿಗಳು ಭಾವುಕರಾಗಿದ್ದರು. ಜೊತೆಗೆ ಅಚ್ಚರಿಗೂ ಕಾರಣವಾಗಿತ್ತು. ಮೆಸ್ಸಿ ಗೋಲು ಸಿಡಿಸುವುದು ಹೊಸದೇನಲ್ಲ. ಆದರೆ ಕಣ್ಣೀರು ಯಾಕೆ ಆನ್ನೋ ಪ್ರಶ್ನೆ ಎದುರಾಗಿತ್ತು ಈ ಕುರಿತು ಮೆಸ್ಸಿಗೆ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆ ಕೇಳಳಾಗಿತ್ತು. ಇದಕ್ಕೆ ಮೆಸ್ಸಿ ಕಾರಣ ಬಿಚ್ಚಿಟ್ಟಿದ್ದಾರೆ.

46
ಹೌದು ನಾನು ಕಣ್ಣೀರಿಟ್ಟೆ, ಅದಕ್ಕೆ ಕಾರಣ

ಅಲ್ಜೆರಿಯಾ ವಿರುದ್ಧ ಮೊದಲ ಗೋಲು ಸಿಡಿಸಿದ ಬಳಿಕ ನಾನು ಕಣ್ಣೀರಿಟ್ಟೆ. ಆದರೆ ಈ ಕಣ್ಣೀರಿಗೂ ಫುಟ್ಬಾಲ್‌ಗೂ ಸಂಬಂಧವಿಲ್ಲ. ಕಳೆದ ಹಲವು ದಿನಗಳಿಂದ ನಾನು ಸಂಕಷ್ಟದ ದಿನಗಳನ್ನು ಎದುರಿಸಿದ್ದೇನೆ. ಹಲವು ಸವಾಲುಗಳನ್ನು ಎದುರಿಸಬೇಕಾಯಿತು. ಈ ವೇಳೆ ಇಡೀ ತಂಡ, ಆಟಗಾರರು ನನ್ನ ಜೊತೆಗಿದ್ದರು. ಇದು ನನ್ನ ಹೋರಾಟಕ್ಕೆ ಶಕ್ತಿ ನೀಡಿತ್ತು. ಇದರಿಂದ ನಾನು ಭಾವುಕರಾದೆ ಎಂದು ಮೆಸ್ಸಿ ಹೇಳಿದ್ದಾರೆ.

56
ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಮೆಸ್ಸಿ

ಅಲ್ಜೆರಿಯಾ ವಿರುದ್ದದ ಪಂದ್ಯದಲ್ಲಿ ಕ್ರೀಡಾಂಗಣದಲ್ಲಿ ಅರ್ಜೈಂಟೀನಾ ಅಭಿಮಾನಿಗಳೇ ಕಾಣುತ್ತಿದ್ದರು. ಅಭಿಮಾನಿಗಳ ಬೆಂಬಲದಿಂದ ನಾವು ಉತ್ತಮವಾಗಿ ಆಡಲು ಸಾಧ್ಯವಾಯಿತು. ನಾನು ಚಿಕ್ಕವನಿಂದ ಫುಟ್ಬಾಲ್ ಆಡುತ್ತಿದ್ದೇನೆ. ಫುಟ್ಬಾಲ್ ನನ್ನ ಪ್ಯಾಶನ್ ಎಂದು ಮೆಸ್ಸಿ ಹೇಳಿದ್ದಾರೆ.

66
ಗರಿಷ್ಠ ಗೋಲು ದಾಖಲೆ ಸರಿಗಟ್ಟಿದ ಮೆಸ್ಸಿ

ಫುಟ್ಬಾಲ್ ವಿಶ್ವಕಪ್ ಟೂರ್ನಿಯಲ್ಲಿ ಹ್ಯಾಟ್ರಿಕ್ ಗೋಲು ಸಿಡಿಸುವ ಮೂಲಕ ಜರ್ಮನ್ ದಿಗ್ಗಜ ಮಿರೋಸ್ಲಾವ್ ಕ್ಲೋಸೆ ದಾಖಳೆ ಸರಿಗಟ್ಟಿದ್ದಾರೆ. ಕ್ಲೋಸೆ ಫುಟ್ಬಾಲ್ ವಿಶ್ವಕಪ್‌ನಲ್ಲಿ 16 ಗೋಲು ಸಿಡಿಸಿ ಗರಿಷ್ಠ ಸ್ಕೋರರ್ ದಾಖಲೆ ಬರೆದಿದ್ದಾರೆ. ಇದೀಗ ಮೆಸ್ಸಿ ಕೂಡ 16 ಗೋಲು ಸಿಡಿಸಿ ದಾಖಲೆ ಸರಿಗಟ್ಟಿದ್ದಾರೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories