ಕಪ್ ಗೆದ್ರೂ ಕೈಗೆ ಸಿಗೋದಿಲ್ಲ ವಿಶ್ವದ ಅತ್ಯಂತ ದುಬಾರಿ ಟ್ರೋಫಿ, ಬೆಲೆ ಕೇಳಿದ್ರೆ ಶಾಕ್

Published : Jun 03, 2026, 01:16 PM IST

FIFA World Cup : ವಿಶ್ವದ ಅತಿದೊಡ್ಡ ಕ್ರೀಡಾಕೂಟಕ್ಕೆ ದಿನಗಣನೆ ಶುರುವಾಗಿದೆ. ಇಡೀ ಜಗತ್ತೇ ಫಿಪಾ ವಿಶ್ವಕಪ್ ಗೆ ಕಾಯ್ತಿದೆ. ಈ ಬಾರಿ, ದಾಖಲೆಯ 48 ತಂಡಗಳು ಫಿಫಾ ವಿಶ್ವಕಪ್ನಲ್ಲಿ ಭಾಗವಹಿಸಲಿವೆ. ಅತ್ಯಂತ ದುಬಾರಿ ಟ್ರೋಫಿ ಮೇಲೆ ಸದ್ಯ ಎಲ್ಲರ ಕಣ್ಣಿದೆ. 

PREV
15
ಫಿಫಾ ವಿಶ್ವಕಪ್ ಆರಂಭ ಯಾವಾಗ?

ಜೂನ್ 12 ರಂದು ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾದಲ್ಲಿ ವಿಶ್ವದ ಅತಿದೊಡ್ಡ ಫಿಫಾ ವಿಶ್ವಕಪ್ ಪ್ರಾರಂಭವಾಗಲಿದೆ. 48 ತಂಡಗಳು ಈ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿವೆ. ವಿಶ್ವದ ಅತ್ಯಂತ ಪ್ರಸಿದ್ಧ ಮತ್ತು ಅತ್ಯಂತ ದುಬಾರಿ ಟ್ರೋಫಿಗಾಗಿ ದಿಗ್ಗಜ ಆಟಗಾರರು ಸಜ್ಜಾಗಿದ್ದಾರೆ.

25
ವಿಶ್ವದ ದುಬಾರಿ ಟ್ರೋಫಿ

ವಿಶ್ವದ ಅತ್ಯಂತ ದುಬಾರಿ ಟ್ರೋಫಿ ಅಂದ್ರೆ ಅದು ಫಿಫಾ ಟ್ರೋಫಿ. ಇದ್ರ ಬೆಲೆ ನಿಮ್ಮನ್ನು ಬೆರಗಾಗಿಸುತ್ತದೆ. ಈ ಟ್ರೋಫಿಯನ್ನು 18 ಕ್ಯಾರೆಟ್ ಚಿನ್ನದಿಂದ ತಯಾರಿಸಲಾಗಿದ್ದು, 6.175 ಕಿಲೋಗ್ರಾಂಗಳಷ್ಟು ಚಿನ್ನವನ್ನು ಟ್ರೋಫಿ ಹೊಂದಿದೆ. ಇದರ ತಳಭಾಗವು ಹಸಿರು ಮಲಾಕೈಟ್ ಕಲ್ಲುಗಳ ಎರಡು ಪದರಗಳಿಂದ ಮಾಡಲ್ಪಟ್ಟಿದೆ.

35
ಈ ಟ್ರೋಫಿಯ ಬೆಲೆ ಎಷ್ಟು?

ಫಿಫಾ ಟ್ರೋಫಿಯಲ್ಲಿ ಬಳಸಲಾದ ಚಿನ್ನ ಮತ್ತು ಮಲಾಕೈಟ್ನ ನಿಜವಾದ ಮೌಲ್ಯ ಸುಮಾರು 616,300 ಡಾಲರ್ ಅಂದ್ರೆ ಸುಮಾರು 5.1 ಕೋಟಿ ರೂಪಾಯಿ. ಇದರ ಪ್ರಸ್ತುತ ಮಾರುಕಟ್ಟೆ ಮೌಲ್ಯ ಸುಮಾರು 2 ಕೋಟಿ ಡಾಲರ್ ಅಂದ್ರೆ ಸುಮಾರು 192 ಕೋಟಿ ಎಂದು ಅಂದಾಜಿಸಲಾಗಿದೆ.

45
ಗೆದ್ದ ತಂಡಕ್ಕಿಲ್ಲ ನಿಜವಾದ ಟ್ರೋಫಿ

ಫಿಫಾ ವಿಶ್ವಕಪ್ ಗೆದ್ರೂ ತಂದ ವರ್ಜಿನಲ್ ಟ್ರೋಫಿಯನ್ನು ಇಟ್ಟುಕೊಳ್ಳುವಂತಿಲ್ಲ. ತಂಡಕ್ಕೆ ಇದನ್ನು ಎತ್ತುವ ಅವಕಾಶವಿದೆ. ಆದ್ರೆ ನಂತ್ರ ಅದನ್ನು ಹಿಂಪಡೆದು ಜ್ಯೂರಿಚ್ನಲ್ಲಿರುವ FIFA ಪ್ರಧಾನ ಕಚೇರಿಯಲ್ಲಿ ಇಡಲಾಗುತ್ತದೆ. ವಿಜೇತ ತಂಡಕ್ಕೆ ಟ್ರೋಫಿ ಹೋಲುವ ನಕಲಿ ಟ್ರೋಫಿ ನೀಡಲಾಗುತ್ತದೆ.

55
ಟ್ರೋಫಿ ಇತಿಹಾಸ

ಫಿಫಾ ವಿಶ್ವಕಪ್ ನಲ್ಲಿ ಬಳಸುವ ಟ್ರೋಫಿಯನ್ನು 1970 ರ ದಶಕದಲ್ಲಿ ಇಟಾಲಿಯನ್ ಶಿಲ್ಪಿ ಸಿಲ್ವಿಯೊ ಗಜಾನಿಯಾ ವಿನ್ಯಾಸಗೊಳಿಸಿದರು. ಪಶ್ಚಿಮ ಜರ್ಮನಿ 1974 ರ ವಿಶ್ವಕಪ್ನಲ್ಲಿ ಮೊದಲ ಬಾರಿಗೆ ಟ್ರೋಫಿಯನ್ನು ಗೆದ್ದುಕೊಂಡಿತ್ತು. ಕಳೆದ 52 ವರ್ಷಗಳಿಂದ ವಿಜೇತ ತಂಡಕ್ಕೆ ಈ ಟ್ರೋಫಿ ನೀಡಿ ನಂತ್ರ ಮರು ಪಡೆಯಲಾಗುತ್ತದೆ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories