Zodiac signs always right: ಈ ನಾಲ್ಕು ರಾಶಿಚಕ್ರ ಚಿಹ್ನೆಗಳ ಜನರು ತಾವು ಏನು ಮಾಡುತ್ತಿದ್ದರೂ ಅಥವಾ ಮಾಡಲಿರುವುದೆಲ್ಲವೂ ಸಂಪೂರ್ಣವಾಗಿ ಸರಿ ಎಂದು ಯಾವಾಗಲೂ ಭಾವಿಸುತ್ತಾರೆ. ಹಾಗಾದರೆ ಆ ನಾಲ್ಕು ರಾಶಿಚಕ್ರ ಚಿಹ್ನೆಗಳು ಯಾವುವು ಎಂಬ ವಿವರ ಇಲ್ಲಿದೆ ನೋಡಿ...
ಕೆಲವರು ತಮಗೆ ಎಲ್ಲವೂ ಚೆನ್ನಾಗಿ ತಿಳಿದಿದೆ ಎಂದು ನಂಬುತ್ತಾರೆ. ಅವರು ನಿಜವಾಗಿಯೂ ಇತರರ ಅಭಿಪ್ರಾಯಗಳನ್ನ ಕೇಳುವುದಕ್ಕೆ ರೆಡಿ ಇರಲ್ಲ ಮತ್ತು ತಮ್ಮನ್ನು ತಾವು ಮಾತ್ರ ಗಮನಿಸಿಕೊಳ್ತಾರೆ ಅರ್ಥಾತ್ ಸ್ವಾರ್ಥಿಗಳು. ಅಂತಹ ಜನರು ತಾವು ಎಲ್ಲರಿಗಿಂತ ಶ್ರೇಷ್ಠರು ಮತ್ತು ಎಲ್ಲದರ ಬಗ್ಗೆ ಎಲ್ಲವನ್ನೂ ತಿಳಿದಿದ್ದೇವೆ ಎಂದು ನಂಬುತ್ತಾರೆ. ಯಾರ ಬಳಿ ಸಮರ್ಥಿಸಿಕೊಳ್ಳುವ ಅಗತ್ಯವಿಲ್ಲ ಅಂದುಕೊಳ್ತಾರೆ. ಸಾಮಾನ್ಯವಾಗಿ ಎಲ್ಲವನ್ನೂ ತಿಳಿದವರಂತೆಯೇ ಕಾಣುತ್ತಾರೆ ಮತ್ತು ತಮ್ಮ ವರ್ತನೆ ಹಾಗೂ ನಡವಳಿಕೆಯಿಂದ ಇತರರನ್ನು ಕೆರಳಿಸುತ್ತಾರೆ. ಹಾಗಾದರೆ ಜ್ಯೋತಿಷ್ಯದ ಪ್ರಕಾರ, ತಾವು ಎಂದಿಗೂ ತಪ್ಪು ಮಾಡಲಾರೆವು ಎಂದು ನಂಬುವ ಆ ನಾಲ್ಕು ರಾಶಿಚಕ್ರ ಚಿಹ್ನೆಗಳು ಯಾವುವು ಎಂಬ ಮಾಹಿತಿ ಇಲ್ಲಿದೆ ನೋಡಿ..
26
ಸಿಂಹ ರಾಶಿ
ಸಿಂಹ ರಾಶಿಯವರು ಎಲ್ಲರಿಗಿಂತ ಉತ್ತಮರು ಎಂದು ನಂಬುತ್ತಾರೆ. ಆದ್ದರಿಂದ ಅವರು ಯಾವಾಗಲೂ ಎಲ್ಲದರ ಬಗ್ಗೆಯೂ ಸರಿಯಾಗಿದ್ದೇವೆ ಅಂದುಕೊಳ್ತಾರೆ. ನಿಜವಾಗಿಯೂ ಇತರರ ಅಭಿಪ್ರಾಯಗಳ ಬಗ್ಗೆ ಸ್ವಲ್ಪವೂ ಕಾಳಜಿ ವಹಿಸುವುದಿಲ್ಲ ಮತ್ತು ಅವರು ಉತ್ತಮವೆಂದು ಭಾವಿಸುವುದನ್ನು ಮಾತ್ರ ಮಾಡುತ್ತಾರೆ.
36
ಕನ್ಯಾ ರಾಶಿ
ಕನ್ಯಾ ರಾಶಿಯವರು ತಾವು ಪರ್‌ಫೆಕ್ಟ್ ಎಂಬ ಗೀಳನ್ನು ಹೊಂದಿರುತ್ತಾರೆ ಮತ್ತು ತಮ್ಮನ್ನು ತಾವು ಎಲ್ಲವನ್ನೂ ತಿಳಿದವರು ಎಂದು ಪರಿಗಣಿಸುತ್ತಾರೆ. ಆದ್ದರಿಂದ ಅವರು ಇತರರ ಮುಂದೆ ದುರಹಂಕಾರಿಗಳಾಗಿ ಕಾಣಿಸಿಕೊಳ್ಳಬಹುದು. ಅವರು ತಮ್ಮ ಬಗ್ಗೆ ಇನ್ನೊಬ್ಬರಿಗೆ ವಿವರಿಸುವ ಅಗತ್ಯವಿಲ್ಲ ಎಂದು ಭಾವಿಸುತ್ತಾರೆ. ಹಾಗೆಯೇ ಯಾವುದೇ ವಿಷಯದ ಬಗ್ಗೆ ತಾವು ಎಂದಿಗೂ ತಪ್ಪು ಮಾಡಲು ಸಾಧ್ಯವಿಲ್ಲ ಎಂದು ಭಾವಿಸುತ್ತಾರೆ.
ಧನು ರಾಶಿಯವರು ಎಷ್ಟೇ ವಿನಮ್ರರಾಗಿ ಕಂಡುಬಂದರೂ ತಾವು ಎಲ್ಲರಿಗಿಂತ ಉತ್ತಮರು ಎಂದು ನಂಬಿರುತ್ತಾರೆ. ಬೇರೆ ಯಾವುದೇ ರಾಶಿಯವರು ಹೊಂದಿರದ ಗುಣಗಳು ಅಥವಾ ಗುಣಲಕ್ಷಣಗಳನ್ನು ಹೊಂದಿದ್ದಾರೆ. ಆದ್ದರಿಂದ ಅವರು ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳಲು ಸಮರ್ಥರಾಗಿದ್ದಾರೆ ಎಂದು ನಂಬುತ್ತಾರೆ.
56
ಮೀನ ರಾಶಿ
ಮೀನ ರಾಶಿಯವರಿಗೆ ತಾವು ಬೇರೆಯವರಿಗಿಂತ ಭಿನ್ನರು ಎಂದು ತಿಳಿದಿರುತ್ತದೆ. ಈ ಅಸಾಂಪ್ರದಾಯಿಕತೆಯು ತಮಗೆ ಚೆನ್ನಾಗಿ ತಿಳಿದಿದೆ ಎಂದು ಭಾವಿಸುವಂತೆ ಮಾಡುತ್ತದೆ. ಆದ್ದರಿಂದ ಇತರರಿಗಿಂತ ಬುದ್ಧಿವಂತರು ಮತ್ತು ಹೆಚ್ಚು ತಿಳುವಳಿಕೆಯುಳ್ಳವರು ಎಂದು ನಂಬುತ್ತಾರೆ.
66
ಆತುರವಾಗಿ ವರ್ತನೆ
ಈ ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಜನರು ಯಾವಾಗಲೂ ತಮ್ಮದೇ ಆದ ಅಭಿಪ್ರಾಯಗಳನ್ನು ಸಮರ್ಥಿಸಿಕೊಳ್ಳಲು ಆತುರವಾಗಿ ವರ್ತಿಸುತ್ತಾರೆ. ಇತರರ ಅಭಿಪ್ರಾಯಗಳನ್ನು ನಿರಂತರವಾಗಿ ನಿರಾಕರಿಸುತ್ತಾರೆ. ಈ ವಿಷಯಗಳು ಅವರನ್ನು ಇತರರಿಂದ ಪ್ರತ್ಯೇಕಿಸುತ್ತವೆ ಮತ್ತು ಗುಂಪಿನಲ್ಲಿ ಎದ್ದು ಕಾಣುವಂತೆ ಮಾಡುತ್ತವೆ.