ನೀವು ರಾಶಿಚಕ್ರ ಚಿಹ್ನೆಗಳನ್ನು ನೋಡೋದಾದ್ರೆ, ನಮ್ಮ ಸುತ್ತಲೂ ಅದ್ಭುತ ವ್ಯವಹಾರ(Bussiness) ಪ್ರಜ್ಞೆಯನ್ನು ಹೊಂದಿರುವ ಅಂತಹ ಅನೇಕ ಜನರಿದ್ದಾರೆ. ವ್ಯವಹಾರಕ್ಕಾಗಿ ಉತ್ತಮ ಸಮಯವನ್ನು ಹೊಂದಿರುವ ಅಂತಹ ಜನರ ಬಗ್ಗೆ ಇಂದು ತಿಳಿದುಕೊಳ್ಳೋಣ.
ಮೇಷ - ಈ ರಾಶಿಯ ಜನರು ದೃಢನಿಶ್ಚಯ, ಅಪಾರ ಇಚ್ಛಾಶಕ್ತಿ ಮತ್ತು ಮಹತ್ವಾಕಾಂಕ್ಷೆಗೆ ಹೆಸರುವಾಸಿ. ಈ ರಾಶಿಯ ಜನರು ಹುಟ್ಟಿನಿಂದಲೇ ಲೀಡರ್ (Leader) ಆಗಿರುತ್ತಾರೆ ಮತ್ತು ಇವರು ಅಪಾಯಗಳನ್ನು ತೆಗೆದುಕೊಳ್ಳಲು ಹೆದರೋದಿಲ್ಲ. ಅಂತಹ ಜನರು ಒತ್ತಡದಲ್ಲಿಯೂ ಮುಂದುವರಿಯುತ್ತಾರೆ. ಈ ಸ್ಕಿಲ್ ಇವರನ್ನು ವ್ಯವಹಾರದಲ್ಲಿ ಯಶಸ್ವಿಯಾಗುವಂತೆ ಮಾಡುತ್ತೆ.
ಸಿಂಹ - ಈ ರಾಶಿಯ ಜನರು ಹುಟ್ಟಿನಿಂದಲೇ ಆತ್ಮವಿಶ್ವಾಸದಿಂದ ಕೂಡಿದ ನಾಯಕರಾಗಿರುತ್ತಾರೆ. ಇವರು ಅದ್ಭುತ ಕಮ್ಯುನಿಕೇಷನ್ ಸ್ಕಿಲ್ಸ್ (Communication skill) ಹೊಂದಿದ್ದಾರೆ ಇದರಿಂದ ಇವರು ಇತರರಿಗೆ ಸ್ಫೂರ್ತಿ ನೀಡುತ್ತಾರೆ. ಈ ಕೌಶಲ್ಯವು ಅವರನ್ನು ವ್ಯವಹಾರದಲ್ಲಿ ಇತರರಿಂದ ಪ್ರತ್ಯೇಕಿಸುತ್ತೆ.
ವೃಷಭ ರಾಶಿ - ಈ ರಾಶಿಯ ಜನರು ತಮ್ಮ ವ್ಯವಹಾರ ಪ್ರಜ್ಞೆ, ಪರಿಶ್ರಮ ಮತ್ತು ಅಚಲ ಸಂಕಲ್ಪಕ್ಕೆ ಹೆಸರುವಾಸಿಯಾಗಿದ್ದಾರೆ. ಇವರು ಹಣಕಾಸಿನ ವಿಷಯಗಳ ಬಗ್ಗೆ ಉತ್ತಮ ತಿಳುವಳಿಕೆಯನ್ನು ಸಹ ಹೊಂದಿದ್ದಾರೆ. ಇಂತಹ ಜನರು ದೀರ್ಘಕಾಲೀನ ಗುರಿಗಳನ್ನು(Goal) ಸಾಧಿಸೋದನ್ನು ನಂಬುತ್ತಾರೆ. ಈ ತಿಳುವಳಿಕೆಯು ಇವರನ್ನು ವ್ಯವಹಾರದಲ್ಲಿ ಯಶಸ್ವಿಯಾಗುವಂತೆ ಮಾಡುತ್ತೆ.
ಕನ್ಯಾ(Virgo) - ಈ ರಾಶಿಯ ಜನರು ತಮ್ಮ ಅನಾಲಿಟಿಕಲ್ ಮೈಂಡ್ ಗೆ ಹೆಸರುವಾಸಿಯಾಗಿದ್ದಾರೆ. ಯಾವುದೇ ಸಮಸ್ಯೆಯನ್ನು ತ್ವರಿತವಾಗಿ ಗುರುತಿಸೋದು ಮತ್ತು ತ್ವರಿತವಾಗಿ ಅದರ ಪರಿಹಾರವನ್ನು ಕಂಡುಹಿಡಿಯೋದು ಇವರ ದೊಡ್ಡ ಲಕ್ಷಣವಾಗಿದೆ.
ತುಲಾ(Libra) - ಈ ರಾಶಿಯ ಜನರು ತಮ್ಮ ನಡುವೆ ಸಾಮರಸ್ಯ ಮತ್ತು ಸಮತೋಲನ ಸೃಷ್ಟಿಸುತ್ತಾರೆ. ಟೀಮ್ ವರ್ಕ್ ನಲ್ಲಿ ಕೆಲಸ ಮಾಡುವ ಇವರ ವ್ಯವಹಾರ ಕೌಶಲ್ಯಗಳು ಇವರಿಗೆ ಸಾಧ್ಯವಾದಷ್ಟು ಬೇಗ ಯಶಸ್ಸನ್ನು ನೀಡುತ್ತವೆ.