ರಾತ್ರಿ ಅರಳಿ ಮರದ ಹತ್ತಿರ ಹೋದ್ರೆ ಉಸಿರುಗಟ್ಟೋದ್ಯಾಕೆ? ದೆವ್ವ, ಭೂತ ಇರೋದು ಹೌದಾ?

First Published Jul 6, 2023, 12:34 PM IST

ರಾತ್ರಿಯಲ್ಲಿ ಅರಳಿ ಮರದ ಬಳಿ ಹೋಗೋದನ್ನು ಯಾವಾಗಲೂ ನಿಷೇಧಿಸಲಾಗಿದೆ. ಅದಕ್ಕೆ ಜ್ಯೋತಿಷ್ಯ ಮತ್ತು ವೈಜ್ಞಾನಿಕ ಕಾರಣಗಳನ್ನು ಸಹ ನೀಡಲಾಗುತ್ತೆ. ಯಾವ ಕಾರಣ ಸರಿ ಎಂದು ನಿಮಗೆ ತಿಳಿದಿದ್ಯಾ? 

ಬಾಲ್ಯದಲ್ಲಿ, ಅಜ್ಜಿಯರು ರಾತ್ರಿಯಲ್ಲಿ ಅರಳಿ ಮತ್ತು ಆಲದ ಮರಗಳ(Peepal tree) ಬಳಿ ಹೋಗೋದಕ್ಕೆ ಬಿಡುತ್ತಿರಲಿಲ್ಲ. ಅರಳಿ ಮರದ ಮೇಲೆ ವಾಸಿಸುವ ಮಾಟಗಾತಿ ಸಣ್ಣ ಮಕ್ಕಳನ್ನು ಎತ್ತಿಕೊಳ್ಳುವ ಕಥೆಯನ್ನು ಅಜ್ಜಿ ಹೇಳುತ್ತಿದ್ದರು. ಅರಳಿ ಮರದ ಮೇಲೆ ದೆವ್ವಗಳು ವಾಸಿಸುತ್ತವೆ, ಅದರ ಸುತ್ತಲೂ ಮನೆಗಳನ್ನು ನಿರ್ಮಿಸಬಾರದು, ಅರಳಿ ಮರದ ಶಾಪದಂತಹ ಅನೇಕ ವಿಷಯಗಳನ್ನು ನೀವು ಕೇಳಿರಬಹುದು. ಆದರೆ ಇದರ ಹಿಂದಿನ ನಿಜವಾದ ಕಾರಣವೇನು ಎಂಬುದನ್ನು ತಿಳಿದುಕೊಳ್ಳೋಣ. 

ರಾತ್ರಿಯಲ್ಲಿ(Night) ಅರಳಿ ಮರದ ಕೆಳಗೆ ಹೋಗುವುದು ಸರಿಯಲ್ಲ ಎಂಬ ಬಾಲ್ಯದ ಭಯ ಇನ್ನೂ ಇದೆ, ಆದರೆ ಇದಕ್ಕೆ ಯಾವುದಾದ್ರು ವೈಜ್ಞಾನಿಕ ಕಾರಣವಿದ್ಯಾ? ಇಲ್ಲಿ ಅರಳಿ ಮರಕ್ಕೆ ಸಂಬಂಧಿಸಿದ ತಪ್ಪು ಕಲ್ಪನೆಗಳ ಬಗ್ಗೆ, ಅದಕ್ಕೆ ಸಂಬಂಧಿಸಿದ ವಿಜ್ಞಾನದ ಬಗ್ಗೆ ತಿಳಿಯೋಣ.
 

ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತೆ?
ಜ್ಯೋತಿಷಿಗಳ ಪ್ರಕಾರ, ಈ ಸಸ್ಯವನ್ನು ಶನಿಯ ಸಸ್ಯ ಎಂದು ಕರೆಯಲಾಗುತ್ತೆ, ಅದಕ್ಕಾಗಿಯೇ ಇದಕ್ಕೆ ನೀರನ್ನು ಅರ್ಪಿಸುವ ಅಭ್ಯಾಸ ಇದೆ. ಅರಳಿ ಮರವನ್ನು ಶನಿಯ ಮನೆ ಮಾತ್ರವಲ್ಲದೆ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ಮನೆ ಎಂದು ಪರಿಗಣಿಸಲಾಗಿದೆ.

ಸ್ಕಂದ ಪುರಾಣದಲ್ಲಿ, ವಿಷ್ಣು(Vishnu) ಅರಳಿ ಮರದ ಬೇರಿನಲ್ಲಿ, ಬ್ರಹ್ಮನು ಕಾಂಡದಲ್ಲಿ ಮತ್ತು ಶಿವ ಎಲೆಗಳಲ್ಲಿ ವಾಸಿಸುತ್ತಾನೆ ಮತ್ತು ಅದರ ಹಣ್ಣುಗಳು ಮೂವತ್ತಮೂರು ಕೋಟಿ ದೇವರು ಮತ್ತು ದೇವತೆಗಳ ಭಾಗಗಳಾಗಿವೆ ಎಂದು ಹೇಳಲಾಗುತ್ತೆ. ತಾಯಿ ಲಕ್ಷ್ಮಿ ರಾತ್ರಿಯಲ್ಲಿ ಈ ಮರದಲ್ಲಿ ವಾಸಿಸುತ್ತಾಳೆ ಎಂದು ನಂಬಲಾಗಿದೆ. ಹೀಗೆ ಅದನ್ನು ಪೂಜಿಸೋದರಿಂದ, ಈ ಮರಕ್ಕೆ ಸಂಬಂಧಿಸಿದ ನಿಯಮಗಳನ್ನು ಅನುಸರಿಸಬೇಕು ಎನ್ನಲಾಗುತ್ತೆ. 

ವಿಜ್ಞಾನ ಏನು ಹೇಳುತ್ತೆ? 
ವಿಜ್ಞಾನದ ಪ್ರಕಾರ, ಅರಳಿ ಮರವು ದಟ್ಟವಾಗಿದೆ ಮತ್ತು ಹಗಲಿನಲ್ಲಿ ಸಾಕಷ್ಟು ಆಮ್ಲಜನಕವನ್ನು(Oxygen) ನೀಡುತ್ತೆ, ಆದರೆ ರಾತ್ರಿಯಲ್ಲಿ ಆಮ್ಲಜನಕದ ಬದಲು ಕಾರ್ಬನ್ ಡೈಆಕ್ಸೈಡ್ ಬಿಡುಗಡೆಯಾಗುತ್ತೆ. 

ಈ ರಿಯಾಕ್ಷನ್ ದಟ್ಟವಾದ ಮರಗಳ ಕೆಳಗೆ ತುಂಬಾ ಹೆಚ್ಚಾಗಿದೆ, ಆದ್ದರಿಂದ ಅವುಗಳ ಕೆಳಗೆ ಆಮ್ಲಜನಕದ ಕೊರತೆ ಉಂಟಾಗುತ್ತೆ. ಯಾರಾದರೂ ರಾತ್ರಿಯಲ್ಲಿ ಮರದ ಬಳಿ ಹೋದರೆ, ಆತನಿಗೆ ಉಸಿರುಗಟ್ಟುವಿಕೆಯ ಅನುಭವವಾಗಬಹುದು. ಆದ್ದರಿಂದ, ಅಂತಹ ಯಾವುದೇ ಸಮಸ್ಯೆಯಾಗದಂತೆ ರಾತ್ರಿಗಳಲ್ಲಿ ಅರಳಿ ಮರದ ಕೆಳಗೆ ಮಲಗೋದನ್ನು(Sleep) ನಿಷೇಧಿಸಲಾಗಿದೆ.  

ಈ ವಿಷಯಕ್ಕೆ ವಿರುದ್ಧವಾದ ಅಂಶವೂ ಇದೆ. ಅರಳಿ ಮರದ ಮೇಲೆ ಮಾಡಿದ ಅನೇಕ ಸಂಶೋಧನೆಗಳು ಇದು ಹೆಚ್ಚು ಆಮ್ಲಜನಕವನ್ನು ನೀಡುವ ಮರಗಳಲ್ಲಿ ಒಂದಾಗಿದೆ ಎಂದು ಹೇಳುತ್ತವೆ. ಇದು ಸರಿ ಯಾಕಂದ್ರೆ ಅದರ ಎಲೆಗಳು ದಟ್ಟವಾಗಿರುತ್ತವೆ ಮತ್ತು ಫೋಟೋಸಿನ್ಥೆಸಿಸ್(Photosynthesis) ಬಹಳ ಸುಲಭವಾಗಿ ಸಂಭವಿಸಲು ಅನುವು ಮಾಡಿಕೊಡುತ್ತೆ.  
 

ಅರಳಿ ಮರಕ್ಕೆ ಸಂಬಂಧಿಸಿದ ಆಯುರ್ವೇದ(Ayurveda) ಕಾರಣಗಳು ಹೀಗಿವೆ 
ಆಯುರ್ವೇದದಲ್ಲಿ ಅರಳಿ ಮರವನ್ನು ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆಯುರ್ವೇದದ ಪ್ರಕಾರ, ಅರಳಿ ಮರದ ಎಲೆ, ತೊಗಟೆ, ಬೀಜ, ಹಣ್ಣುಗಳು ಎಲ್ಲವೂ ಔಷಧೀಯ ಗುಣಗಳನ್ನು ಹೊಂದಿವೆ. ಇದನ್ನು ಅನೇಕ ಆಯುರ್ವೇದ ಔಷಧಿಗಳಲ್ಲಿ ಬಳಸಲಾಗುತ್ತೆ. ಆದ್ದರಿಂದ ಅರಳಿ ಮರವು ಔಷಧಿಗಳ ನಿಧಿಯಾಗಿದೆ, ಹಾಗಾಗಿ ಅದನ್ನು ಗೌರವಿಸಬೇಕು. ರಾತ್ರಿಯಲ್ಲಿ ಅರಳಿ ಮರದ ಹತ್ತಿರ ಹೋಗೋದನ್ನು ನಿಷೇಧಿಸಲು ಇದು ಒಂದು ಕಾರಣ.
 

ಅನೇಕ ಪ್ರಾಣಿಗಳಿಗೆ(Animals) ನೆಲೆ
ಅರಳಿ ಮರವು ದಟ್ಟವಾಗಿದೆ ಮತ್ತು ನೀವು ಗಮನಿಸದೇ ಇರಬಹುದು, ಆದರೆ ಅರಳಿ ಮರವು ಗಾಳಿಯಿಲ್ಲದೆಯೂ ವಾತಾವರಣವನ್ನು ತಂಪಾಗಿಸುತ್ತೆ. ಅದರ ಕೆಳಗೆ ಯಾವಾಗಲೂ ತಂಪಾಗಿರುತ್ತೆ. ಇದಕ್ಕೆ ಕಾರಣವೆಂದರೆ ಅದರ ಎಲೆಗಳ ಆಕಾರವು ಹಗುರವಾಗಿದೆ ಮತ್ತು ಸುಲಭವಾಗಿ ನೆರಳನ್ನು ನೀಡುತ್ತೆ. ಈ ಮರದಲ್ಲಿ ಅನೇಕ ರೀತಿಯ ಪ್ರಾಣಿ ಮತ್ತು ಪಕ್ಷಿಗಳು ವಾಸಿಸಲು ಇದು ಕಾರಣವಾಗಿದೆ. ಆದ್ದರಿಂದ ಕೋಗಿಲೆ, ಸನ್ ಬರ್ಡ್, ಬಾರ್ಬೆಟ್, ಕಿಂಗ್ ಫಿಶರ್, ಟೈಲರ್ ಬರ್ಡ್, ಅಳಿಲು, ಹಾವು ಮತ್ತು ಚೇಳುಗಳು ವಾಸಿಸುತ್ತವೆ. ಹಾಗಾಗಿ ರಾತ್ರಿ ಅರಳಿ ಮರದ ಬಳಿ ಹೋದರೆ, ಯಾವ ರೀತಿಯ ಜೀವಿ ಹಾನಿ ಮಾಡುತ್ತೆ ಎಂದು ನಮಗೆ ತಿಳಿಯೋದಿಲ್ಲ.  ಆದ್ದರಿಂದ ರಾತ್ರಿ ಅರಳಿ ಮರದ ಹತ್ತಿರ ಹೋಗಬಾರದು ಎಂದು ಹೇಳೋದು. 

click me!