ಪತ್ನಿ ಯಾವಾಗಲೂ ಪತಿಯ ಬಲ ಭಾಗದಲ್ಲೇ ಯಾಕೆ ಮಲಗಬೇಕು?

First Published Jul 7, 2023, 5:32 PM IST

ಹಿಂದೂ ನಂಬಿಕೆಯ ಪ್ರಕಾರ ಪತ್ನಿ ಯಾವಾಗಲೂ ಪತಿಯ ಎಡಭಾಗದಲ್ಲಿ ಮಲಗಬೇಕು ಎಂದು ಹೇಳಲಾಗುತ್ತೆ. ಇದು ಯಾಕೆ? ಇದರಿಂದ ಏನಾಗುತ್ತೆ ಅನ್ನೋದನ್ನು ತಜ್ಞರಿಂದ ತಿಳಿದುಕೊಳ್ಳೋಣ. 
 

ಹಿಂದೂ ಧರ್ಮದಲ್ಲಿ (Hindu Religion) ಅನೇಕ ನಂಬಿಕೆಗಳಿವೆ. ಅವುಗಳಲ್ಲಿ ಕೆಲವನ್ನು ನಾವು ನಂಬುತ್ತೇವೆ. ಕೆಲವು ಸುಮ್ಮನೆ ಎಂದು ಸುಮ್ಮನಾಗುತ್ತೇವೆ. ಆದರೆ ಪತ್ನಿ ಯಾವಾಗಲೂ ಪತಿಯ ಎಡಬದಿಯಲ್ಲಿ ಮಲಗಬೇಕು ಅನ್ನೋದನ್ನು ನಿವು ಕೇಳಿರುತ್ತೀರಿ. ಇದಕ್ಕೆ ಸಂಬಂಧಿಸಿದ ಕೆಲವು ಮಾಹಿತಿಗಳು ಇಲ್ಲಿವೆ. ಅವುಗಳ ಬಗ್ಗೆ ತಿಳಿಯಿರಿ. 
 

ಭಗವಾನ್ ಶಿವನೊಂದಿಗೆ ಸಂಬಂಧ
ಪೌರಾಣಿಕ ಕಥೆಯ ಪ್ರಕಾರ ಶಿವ ಅರ್ಧನಾರೀಶ್ವರನಾಗಿ (Ardhanarishvara) ಕಾಣಿಸಿಕೊಂಡಾಗ, ಶಿವನ ಎಡ ಬದಿಯಲ್ಲಿ ಸ್ತ್ರೀ ಶಕ್ತಿ ಅಂದರೆ ಪಾರ್ವತಿ ಕಾಣಿಸಿಕೊಂಡಿದ್ದರು. ಹಾಗಾಗಿ ಹಿಂದೂಗಳಲ್ಲಿ ಪತ್ನಿಯನ್ನು ಅರ್ಧಾಂಗಿ ಎನ್ನಲಾಗುತ್ತೆ. 

Latest Videos


ಅರ್ಧಾಂಗಿ ಎಂದರೇನು? 
ಹೆಂಡತಿಯನ್ನು ಗಂಡನ ದೇಹದ ಬೇರ್ಪಡಿಸಲಾಗದ ಭಾಗ ಎನ್ನಲಾಗುತ್ತೆ, ಹಾಗಾಗಿ ಆಕೆಯನ್ನು ಅರ್ಧಾಂಗಿ ಎನ್ನುತ್ತಾರೆ. ಮತ್ತು ಗಂಡನ ಎಡಭಾಗ ಪತ್ನಿಯದ್ದು ಎನ್ನಲಾಗುತ್ತೆ. ಹಾಗಾಗಿ ಶುಭ ಕಾರ್ಯದಲ್ಲಿ ಪತ್ನಿ ಎಡಭಾಗದಲ್ಲಿ ಕುಳಿತುಕೊಳ್ಳುತ್ತಾಳೆ. 

ಸುಖವಾದ ವೈವಾಹಿಕ ಜೀವನ
ಈ ಮೇಲಿನ ಕಾರಣಗಳಿಂದಾಗಿ ಹೆಂಡತಿ ಗಂಡನ ಎಡ ಭಾಗದಲ್ಲಿ ಮಲಗಬೇಕು ಎನ್ನಲಾಗುತ್ತೆ. ಅಲ್ಲದೇ ಹೀಗೆ ಮಲಗೋದು ಶುಭ. ಇದರಿಂದ ಮನೆಯಲ್ಲು ಸುಖ, ಸಂತೋಷ, ನೆಮ್ಮದಿ, ಜೊತೆಗೆ ವೈವಾಹಿಕ ಜೀವನ ಆನಂದದಿಂದ ಕೂಡಿರುತ್ತೆ. 
 

ಗ್ರಹಗಳು ಶಾಂತವಾಗುತ್ತೆ
ಪತ್ನಿಯು ಪತಿಯ ಎಡಬದಿಯಲ್ಲಿ ಮಲಗೋದು ವೈವಾಹಿಕ ಜೀವನಕ್ಕೆ ಉತ್ತಮ ಮತ್ತು ಪತಿಗೆ ಸೌಭಾಗ್ಯವನ್ನು ನೀಡುತ್ತೆ ಎಂದು ನಂಬಲಾಗಿದೆ. ಇನ್ನು ಹೀಗೆ ಮಲಗೋದರಿಂದ ಗ್ರಹಗಳಿಂದಲೂ ದಾಂಪತ್ಯ ಜೀವನದ (married life) ಮೇಲೆ ಯಾವುದೇ ರೀತಿಯಲ್ಲಿ ಕೆಟ್ಟದಾಗೋದಿಲ್ಲ ಎಂದು ನಂಬಲಾಗುತ್ತೆ. 

ಪತಿಗೆ ರಕ್ಷೆ
ಸತ್ಯವಾನ್ ಸಾವಿತ್ರಿಯ ಕತೆಯಲ್ಲಿ ಸಾವಿತ್ರಿ ಗಂಡನ ಎಡಬದಿಯಲ್ಲಿ ಮಲಗಿದ್ದಳು. ಯಮರಾಜನು ಎಡಬದಿಯಲ್ಲಿಯೇ ಬಂದಾಗ ಸಾವಿತ್ರಿ ಯಮನನ್ನು ಬೇಡಿಕೊಂಡು ತನ್ನ ಪತಿಯನ್ನು ರಕ್ಷಿಸಿದಳು. ಹಾಗಾಗಿ ಎಡಬದಿಯಲ್ಲಿ ಮಲಗೋದರಿಂದ ಗಂಡನಿಗೆ ರಕ್ಷೆ ಸಿಗುತ್ತೆ ಎನ್ನಲಾಗುತ್ತೆ. 

ಪತ್ನಿಗೆ ಬಲಬದಿಯಲ್ಲಿ ಸ್ಥಾನ ಸಿಗೋದು ಯಾವಾಗ? 
ಶಾಸ್ತ್ರದ ಅನುಸಾರ ಕೆಲವೊಂದು ಸಂಪ್ರದಾಯಗಳಲ್ಲಿ ಪತ್ನಿ, ಪತಿಯ ಬಲ ಬದಿಗೆ ಕುಳಿತುಕೊಳ್ಳಬೇಕಾಗುತ್ತಂತೆ. ಅದು ಯಾವಾಗ ಅಂದ್ರೆ ಕನ್ಯಾದಾನ, ವಿವಾಹ, ಯಜ್ಞ, ನಾಮಕರಣ, ಅನ್ನಪ್ರಾಶನದ ಸಮಯದಲ್ಲಿ ಬಲಬದಿಯಲ್ಲಿರಬೇಕು. 

ಸಂಸಾರದಲ್ಲಿ ಸ್ತ್ರೀ ಪ್ರಧಾನ
ಸಂಸಾರದಲ್ಲಿನ ಎಲ್ಲಾ ಕೆಲಸಗಳಲ್ಲಿ ಸ್ತ್ರೀ ಪ್ರಧಾನವಾಗಿರುತ್ತಾಳೆ. ಹಾಗಾಗಿ ಆಕೆ ಯಾವಾಗಲೂ ಗಂಡನ ಎಡ ಭಾಗದಲ್ಲಿ ಮಲಗಬೇಕು ಎಂದು ಹೇಳಲಾಗುತ್ತೆ. ಅಲೌಕಿಕ ಕೆಲಸಗಳಲ್ಲಿ ಪುರುಷರು ಪ್ರಧಾನವಾಗಿರುತ್ತಾರೆ ಎನ್ನುವ ನಂಬಿಕೆ ಇದೆ. 

click me!