ನೀವು ಲೆಕ್ಕಹಾಕಿ ಚಪಾತಿ ತಯಾರಿಸ್ತೀರಾ? ಈ ತಪ್ಪು ಮಾಡಿದ್ರೆ ಮುಂದೆ ಭಾರಿ ಸಮಸ್ಯೆ ಎದುರಿಸ್ತೀರಿ…

First Published | Jun 28, 2024, 9:47 AM IST

ಮನೆಯ ಪ್ರತಿಯೊಂದು ಕೋಣೆಯೂ ಒಂದೊಂದು ಅಂಗದಂತೆ. ಮನೆಯಲ್ಲಿರೋ ಜನ ಚೆನ್ನಾಗಿರಬೇಕು ಅಂದ್ರೆ ಮನೆಯ ಎಲ್ಲಾ ಕೋಣೆಯೂ ಮುಖ್ಯ. ಅದರಲ್ಲೂ ಅಡುಗೆ ಕೋಣೆ ತುಂಬಾನೆ ಮುಖ್ಯ. ಇದು ಮನೆಯ ಜನರ ಮೇಲೆ ಪಾಸಿಟಿವ್ ಮತ್ತು ನೆಗೆಟಿವ್ ಪರಿಣಾಮ ಬೀರುವ ಪ್ರಮುಖ ತಾಣವಾಗಿದೆ. 
 

ಸನಾತನ ಧರ್ಮದಲ್ಲಿ ಆಹಾರವನ್ನು ತಯಾರಿಸಲು ಅನೇಕ ನಿಯಮಗಳ ಬಗ್ಗೆ ಮಾಹಿತಿ ನೀಡುತ್ತವೆ. ಈ ನಿಯಮಗಳು ನಮಗೆ ಉತ್ತಮ ಆರೋಗ್ಯ ನೀಡುವುದಲ್ಲದೆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತವೆ. ಆಹಾರದಲ್ಲಿ ಯಾವುದೇ ದೋಷವಿದ್ದರೆ, ಅದರ ನಕಾರಾತ್ಮಕ ಪರಿಣಾಮ ಎಲ್ಲಾ ಜನರ ಮೇಲೆ ಬೀರುತ್ತೆ, ಆದ್ದರಿಂದ ಅಡುಗೆಮನೆಯ ವಾಸ್ತು (vastu tips) ಸರಿಯಾಗಿರುವಂತೆ ನೋಡ್ಕೋಬೇಕು.

ಆಹಾರ ತಯಾರಿಸೋವಾಗ ಹೆಚ್ಚಾಗಿ ಮಹಿಳೆಯರು, ಆ ದಿನಕ್ಕೆ, ಎಲ್ಲಾ ಸದಸ್ಯರಿಗೆ ಎಷ್ಟು ಬೇಕು ಅನ್ನೋದನ್ನ ನೋಡಿ ಆಹಾರ ತಯಾರಿಸ್ತಾರೆ. ಇತ್ತೀಚಿನ ದಿನಗಳಲ್ಲಿ, ಮಹಿಳೆಯರು ಮನೆಯ ಸದಸ್ಯರ ಪ್ರಕಾರ ಲೆಕ್ಕಹಾಕಿ ರೊಟ್ಟಿ  (counting chapati) ಅಥವಾ ಚಪಾತಿ ತಯಾರಿಸ್ತಾರೆ. ಈ ವಿಧಾನವು ಪ್ರಾಯೋಗಿಕವಾಗಿ ಸರಿಯಾಗಿದೆ ಆದರೆ ವಾಸ್ತು ಪ್ರಕಾರ ಈ ರೀತಿ ಮಾಡೋದ್ರಿಂದ ಹಲವು ಪರಿಣಾಮಗಳು ಬೀರುತ್ತವೆ ಅನ್ನೋದು ನಿಮಗೆ ಗೊತ್ತಾ? 
 

Tap to resize

ರೊಟ್ಟಿಗಳನ್ನು ತಯಾರಿಸೋವಾಗ ಯಾಕೆ ಎಣಿಸಬಾರದು?
ಜ್ಯೋತಿಷಿಗಳು ಹೇಳುವಂತೆ, ಪ್ರತಿ ಮನೆಯಲ್ಲೂ ಗೋಧಿ ಹಿಟ್ಟಿನಿಂದ ಚಪಾತಿ ತಯಾರಿಸಲಾಗುತ್ತದೆ. ಗೋಧಿಯು ಸೂರ್ಯದೇವನ ಸಂಕೇತವಾಗಿದೆ. ಸೂರ್ಯನ ಶುಭ ಪರಿಣಾಮದಿಂದ, ನಾವು ನಮ್ಮ ಜೀವನದಲ್ಲಿ ಅನೇಕ ರೀತಿಯಲ್ಲಿ ಗೌರವ ಮತ್ತು ಸಂತೋಷವನ್ನು ಪಡೆಯುತ್ತೇವೆ. ಒಂದು ವೇಳೆ ನಾವು ಲೆಕ್ಕ ಹಾಕಿ ಚಪಾತಿ ತಯಾರಿಸಿದ್ರೆ ಅದು ಸೂರ್ಯ ದೇವರನ್ನು ಅವಮಾನಿಸಿದಂತೆ. ಹೀಗೆ ಮಾಡೋದ್ರಿಂದ, ಭವಿಷ್ಯದಲ್ಲಿ ನಾವು ಅನೇಕ ಸಮಸ್ಯೆಗಳನ್ನು (problems in life) ಎದುರಿಸಬೇಕಾಗಬಹುದು.
 

ಚಪಾತಿ ತಯಾರಿಸುವ ನಿಯಮ
ಸನಾತನ ಧರ್ಮದಲ್ಲಿ ಚಪಾತಿ ತಯಾರಿಸಲು ವಿಶೇಷ ನಿಯಮಗಳಿವೆ. ಧರ್ಮದ ಪ್ರಕಾರ, ಮೊದಲ ಚಪಾತಿ ಅಥವಾ ರೊಟ್ಟಿಯನ್ನು ಹಸುವಿಗೆ (cow) ನೀಡಬೇಕು. ಪ್ರತಿದಿನ ಮೊದಲ ರೊಟ್ಟಿಯನ್ನು ಹಸುವಿಗೆ ಕೊಡುವ ಜನರ ಮನೆಯಲ್ಲಿ ಆಹಾರ ಧಾನ್ಯಗಳ ಕೊರತೆಯಿರ್ರೋದಿಲ್ಲ ಮತ್ತು ಕಣಜಗಳು ತುಂಬಿರುತ್ತವೆ. ಮನೆಯ ಇತರ ಸದಸ್ಯರಲ್ಲದೆ, ಮನೆಗೆ ಬರುವ ಭಿಕ್ಷುಕರಿಗೆ 1 ಅಥವಾ 2 ರೊಟ್ಟಿಗಳನ್ನು ಸಹ ತಯಾರಿಸಬೇಕು. ಕೊನೆಯ ರೊಟ್ಟಿಯನ್ನು ನಾಯಿಗೆ ತಿನ್ನಿಸಬೇಕು.

ಇದನ್ನು ಸಹ ನೆನಪಿನಲ್ಲಿಡಿ
ಮನೆಯ ಸದಸ್ಯರು, ಹಸು, ಭಿಕ್ಷುಕ ಮತ್ತು ನಾಯಿಗೆ ಯಾರದ್ರೂ ಒಬ್ಬರಿಗೆ ರೊಟ್ಟಿ ಅಥವಾ ಚಪಾತಿ ನೀಡಿದ ನಂತರವೇ, ತಾವು ಆಹಾರ ತಯಾರಿಸಬೇಕು. ಮನೆಗೆ ಬರುವ ಅತಿಥಿಗಾಗಿ ಊಟ ತಯಾರಿಸಿ ಇಡಬೇಕು. ಅತಿಥಿಗಳು ನಮಗೆ ತಿಳಿಸದೆ ಯಾವುದೇ ಸಮಯದಲ್ಲಿ ಬೇಕಾದ್ರೂ ನಮ್ಮ ಮನೆಗೆ ಬರಬಹುದು. ಹಾಗಾಗಿ ಮುಂಚಿತವಾಗಿಯೇ ಅವರಿಗೆ ಆಹಾರ ತಯಾರಿಸಿ ಇಡೋದು ನಮ್ಮ ಜವಾಬ್ಧಾರಿಯಾಗಿದೆ. 

Latest Videos

click me!