ಪ್ರತಿಯೊಬ್ಬ ವ್ಯಕ್ತಿಯು ಕನಸು (Dream) ಕಾಣ್ತಾನೆ. ಕೆಲವರು ಕಣ್ಣು ಬಿಟ್ಕೊಂಡೆ ಕನಸು ಕಂಡ್ರೆ, ಇನ್ನೂ ಕೆಲವರು ಮಲಗಿದ ನಂತರ ಕನಸು ಕಾಣುತ್ತಾರೆ. ಕಣ್ಣು ಬಿಟ್ಟುಕೊಂಡೆ ಕಾಣುವ ಕನಸುಗಳನ್ನು ನನಸಾಗಿಸಲು ವ್ಯಕ್ತಿಯು ಶ್ರಮಿಸಬೇಕಾಗುತ್ತದೆ, ಆದರೆ, ಮುಚ್ಚಿದ ಕಣ್ಣುಗಳಿಂದ ಕಾಣುವ ಕನಸುಗಳು ಕೆಲವೊಮ್ಮೆ ಅದಾಗಿಯೇ ನನಸಾಗುತ್ತವೆ. ಯಾವ ಕನಸು ನನಸಾಗುತ್ತದೆ ಮತ್ತು ರಾತ್ರಿಯಲ್ಲಿ ಕಾಣುವ ಕನಸುಗಳು ಭವಿಷ್ಯದಲ್ಲಿ ಯಾವ ರೀತಿಯ ಬದಲಾವಣೆ ತರುತ್ತೆ, ಇವೆಲ್ಲವನ್ನೂ ಸ್ವಪ್ನ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಸ್ವಪ್ನ ಶಾಸ್ತ್ರದ (Swapna Shastra) ಪ್ರಕಾರ, ರಾತ್ರಿಯಲ್ಲಿ ಕಾಣುವ ಕನಸುಗಳು ಎಷ್ಟು ಸಮಯದಲ್ಲಿ ತಮ್ಮ ಫಲ ನೀಡುತ್ತವೆ ಅನ್ನೋದನ್ನು ತಿಳಿಯೋಣ.